ಬೆಂಗಳೂರು,ಸೆ,25: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ಹಾಗೂ ಬೆಲೆ ಏರಿಕೆ ಖಂಡಿಸಿ ಮತ್ತೆ ರೈತರು ಮತ್ತೇ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.
27 ನೇ ಸೋಮವಾರ ಭಾರತ್ ಬಂದ್ ಗೆ ಕರೆಕರೆನೀಡಿದ್ದು ರಾಜ್ಯಾದ್ಯಂತ ಜನಜೀವನ ಅಸ್ತವ್ಯಸ್ತೆಯಾಗಲಿದೆ.ಈ ಬಂದ್ ಗೆಕನ್ನಡ ಸಂಘಟನೆ,ದಲಿತ ಸಂಘಟನೆ,ಎಪಿಎಂಸಿ ಬೆಂಬಲ ವ್ಯಕ್ತಪಡಿಸಿವೆ.
ಬೆಂಗಳೂರಿನ ಪ್ರಮುಖ ಹೆದ್ದಾರಿ ಸೇರಿದಂತೆ ರಾಜ್ಯದ್ಯಾಂತ ಹೆದ್ದಾರಿ ತಡೆ. ಬೆಂಗಳೂರಿನಲ್ಲಿ ಟೌನ್ ಹಾಲ್ ನಿಂದ ಮೈಸೂರು ಬ್ಯಾಂಕ್ ಸರ್ಕಲ್ ವರೆಗೆ ಬೃಹತ್ ರ್ಯಾಲಿ. ಒಟ್ಟು 700ಕ್ಕೂ ಹೆಚ್ಚು ಕ್ಯಾಂಟರ್ ವಾಹನದಲ್ಲಿ ನಗರದಲ್ಲಿ ರ್ಯಾಲಿ ನಡೆಸಲು ಪ್ಲಾನ್ ಮಾಡಿದ್ದಾರೆ.
ಎಪಿಎಂಸಿ ತರಕಾರಿ ಮಾರುಕಟ್ಟೆ ವರ್ತಕರ ಸಂಘ ಬಂದ್ ಗೆ ಬೆಂಬಲ ಕೊಟ್ಟಿದೆ. ಹೀಗಾಗಿ ಕಲಾಸಿಪಾಳ್ಯ, ಯಶವಂತ ಪುರ, ದಾಸನಪುರ ಮಾರ್ಕೆಟ್ ಬಂದ್ ಆಗುವ ಸಾಧ್ಯತೆ ಇದೆ. ಕೆಲವು ದಲಿತ ಹಾಗೂ ಕಾರ್ಮಿಕ ಸಂಘಟನೆಗಳು ಬಂದ್ ಗೆ ಬೆಂಬಲ ಕೊಟ್ಟಿದ್ದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಕಾಂಗ್ರೆಸ್ ಕಿಸಾನ್ ಘಟಕದಿಂದ ಬೆಂಬಲ ಪ್ರತಿಭಟನೆ ಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ವಾಟಾಳ್ ನೇತೃತ್ವದ ಕನ್ನಡ ಒಕ್ಕೂಟದಿಂದಲೂ ಬೆಂಬಲ ಸಿಕ್ಕಿದೆ.
ಆಟೋ, ಊಬರ್, ಓಲಾ ಸಂಘಟನೆಗಳಿಂದ ನೈತಿಕ ಬೆಂಬಲ ನೀಡಿವೆ. ಕೊರೊನಾ ಕಾರಣದಿಂದ ಬಂದ್ ದಿನ ವಾಹನ ಸ್ಥಗಿತಗೊಳಿಸಲ್ಲ. ಎಂದಿನಂತೆ ಸಂಚಾರ ವ್ಯವಸ್ಥೆ ಇರಲಿದೆ. ಸಾರಿಗೆ ಯೂನಿಯನ್ ಗಳು ಬಂದ್ ಗೆ ಬೆಂಬಲ ಕೊಟ್ಟಿಲ್ಲ. ರೈತರ ಪ್ರತಿಭಟನೆಗೆ ಸಾರಿಗೆ ನೌಕರರು ಪಾಲ್ಗೊಳ್ಳಲ್ಲ. ಬಸ್ ಸಂಚಾರ ಯಥಾ ಸ್ಥಿತಿ ಇರುತ್ತೆ. ಈ ಹಿನ್ನೆಲೆಯಲ್ಲಿ ದೂರದ ಊರುಗಳಿಗೂ ಬಸ್ ಸೇವೆ ಲಭ್ಯವಿರಲಿವೆ.
ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇಲ್ಲ. ಹೋಟೆಲ್ ಗಳ ಬೆಂಬಲ ಇಲ್ಲ. ಯಾಕೆಂದರೆ ಕೊರೊನಾ ಕಾರಣದಿಂದ ಈಗಾಗಲೇ ನಷ್ಟದ ಹೊಡೆತ ತಿಂದಿದ್ದೇವೆ. ಹೀಗಾಗಿ ಯಾವ ಬಂದ್ ಗೂ ಬೆಂಬಲ ಕೊಡಲ್ಲ ಅನ್ನೋದು ಹೋಟೆಲ್ ಮಾಲೀಕರ ಸಂಘದ ಅಭಿಪ್ರಾಯವಾಗಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಕೇವಲ ನೈತಿಕ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಶಾಲಾ- ಕಾಲೇಜು ಎಂದಿನಂತೆ ತೆರೆಯಲಿದೆ. ಮಾಲ್ ಅಸೋಸಿಯೇಷನ್ ನವರು ಇಂದು ಅಂತಿಮ ತೀರ್ಮಾನ ಹೇಳೋದಾಗಿ ಹೇಳಿದ್ದಾರೆ. ಆದರೆ ಬಹುತೇಕ ಬೆಂಬಲ ಕೊಡದೇ ಇರಲು ತೀರ್ಮಾನ ಮಾಡಿದ್ದಾರೆ. ತುಂಬಾ ಕಾಲ ಬಂದ್ ಆಗಿದ್ದ ಮಾಲ್ ನಷ್ಟದ ಕಾರಣವೊಡ್ಡಿ ಬಂದ್ ದಿನ ಒಪನ್ ಮಾಡಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.