ಸೆಪ್ಟಂಬರ್ ತಿಂಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಬಾರೀ ಬದಲಾವಣೆ- ರಾಜಣ್ಣ

Share

ಬೆಂಗಳೂರು, ಜೂ,26-ಬರುವ ಸೆಪ್ಟೆಂಬರ್ ನಲ್ಲಿ ರಾಜ್ಯ ರಾಜಕಾರಣದಲ್ಲಿ ಬಾರೀ ಬದಲಾವಣೆಗಳಾಗಲಿವೆ ಎಂದು ಸಹಕಾರ ಸಚಿವ ರಾಜಣ್ಣ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ, ರಾಜ್ಯ ರಾಜಕಾರಣದಲ್ಲಿ ಆಶ್ಚರ್ಯಕರ ಬದಲಾವಣೆ ಆಗಲಿದೆ. ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ತಣ್ಣಗೆ ಬೀಸುತ್ತಿದೆ ಎಂದರು.

ಶಾಸಕರ ಅಸಮಾಧಾನ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆ.ಎನ್ ರಾಜಣ್ಣ, ಏನು ಮಾಡುವುದು ಪವರ್ ಸೆಂಟರ್ ಗಳು ಜಾಸ್ತಿ ಆಗಿವೆ. 2013ರಿಂದ 2018ರವರೆಗೆ ಒಂದೇ ಪವರ್ ಸೆಂಟರ್ ಇತ್ತು. ಈಗ ಒಂದು ಎರಡು ಮೂರು ಲೆಕ್ಕವಿಲ್ಲದಷ್ಟು ಪವರ್ ಸೆಂಟರ್ ಗಳಿವೆ. 2013ರಲ್ಲಿ ಸಿಎಂ ಸಿದ್ದರಾಮಯ್ಯಗೆ ಯಾವ ಒತ್ತಡ ಇರಲಿಲ್ಲ ಪವರ್ ಸೆಂಟರ್ ಹೆಚ್ಚಾಗಿ ಸಿಎಂಗೆ ಜಂಜಾಟ ಹೆಚ್ಚಾಗಿದೆ ಎಂದರು.

ಗ್ಯಾರಂಟಿ ಕೊಟ್ಟಿದ್ದರಿಂದ ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಹೊರೆ ಇದೆ. ಸಿಎಂ ರಾಜ್ಯಾದ್ಯಂತ ಕಾಮಗಾರಿಗಳಿಗೆ ಚಾಲನೆ ಕೊಡ್ತಿದ್ದಾರೆ. ಹಣ ಇಲ್ಲದಿದ್ದರೇ ಕಾಮಗಾರಿಗಳಿಗೆ ಚಾಲನೆ ನೀಡಲು ಆಗುತ್ತಿತ್ತಾ? ಬೇಡಿಕೆ ತಕ್ಕಂತೆ ಅನುದಾನ ಸಿಕ್ಕಿಲ್ಲವೆಂಧು ಬೇಸರ ಇರಬಹುದು. ಆರ್ಥಿಕ ಲಭ್ಯತೆಗೆ ಅನುಗುಣವಾಗಿ ಯಾವುದೇ ತಾರತಮ್ಯ ಇಲ್ಲ ಆಡಳಿತ ಪಕ್ಷ ವಿರೋಧ ಪಕ್ಷ ಅಂತ ಇಲ್ಲ ಕ್ಷೇತ್ರಗಳ ಅಭಿವೃದ್ದಿಗೆ ಅನುದಾನ ಒದಗಿಸುತ್ತೇವೆ ಕ್ಷೇತ್ರಕ್ಕೆ ಅನುದಾನ ಕೊಟ್ಟಿಲ್ಲ ಅನ್ನೋದು ಸತ್ಯಕ್ಕೆ ದೂರವಾದ ಮಾತು ಎಂದರು.

Girl in a jacket
error: Content is protected !!