ಬೆಂಗಳೂರು, ಮೇ. ೨೭: ಇನ್ನೇನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ತಾರ್ಕಿಕ ಹಂತಕ್ಕೆ ಬಂದು ತಲುಪಿದ ಸಂದರ್ಭಲ್ಲೇ ಎಸ್‌ಐಟಿ ತನಿಖಾ ತಂಡದ ಮುಖ್ಯಸ್ಥ ಸೌಮೇಂದು ಮುಖರ್ಜಿ ರಜೆ ಮೇಲೆ ತೆರಳಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ನಾನವನಲ್ಲ ನಾನವನಲ್ಲ ಎಂದು ಹೇಳುತ್ತಿದ್ದ ರಮೇಶ್ ಜಾರಕಿಹೊಳಿ ಈಗ ನಾನವನೇ ಎಂದು ಹೇಳುವ ಮೂಲಕ ಈಗ ಈ ಪ್ರಕರಣ ತಾರ್ಕಿಕ ಹಂತಕ್ಕೆ ಬಂದು ನಿಲ್ಲುತ್ತಿದೆ ಎನ್ನುವ ಹೊತ್ತಿಗೆ ಸಮೇಂದು ಮುಖರ್ಜಿಯ ಅವರು ರಜೆ ಮೇಲೆ ಹೋಗಿರುವುದು ಈಗ ಈ ಕೇಸ್ ಮುಂದಿನ ಹೆಜ್ಜೆ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ.
ಒಂದು ಮೂಲದ ಪ್ರಕಾರ ಸೌಮೇಂದು ಮುಖರ್ಜಿ ಅವರನ್ನು ಸರ್ಕಾರವೇ ರಜೆ ಮೇಲೆ ಕಳಿಸಿದೆ ಎಂದು ಹೇಳಲಾಗಿದೆ, ಯಾಕೆಂದರೆ ಒಂದು ದಿನವೂ ರಜೆ ತಗೆದುಕೊಳ್ಳದೆ ತಮ್ಮ ಕಾರ್ಯ ನಿರ್ವಹಿಸುವ ಅವರು ಈ ರೀತಿ ಇದ್ದಕ್ಕಿದ್ದಂತೆ ರಜೆ ಹೋಗುತ್ತಾರೆ ಎಂದರೆ ಅದರ ಹಿಂದಿನ ಸತ್ಯವೇ ಬೇರೆ ಇದೆ ಎನ್ನುತ್ತಾರೆ ಹೆಸರು ಹೇಳದ ಎಸ್‌ಐಟಿ ಇತರೆ ಪೊಲೀಸ್‌ರು.
ರಮೇಶ್ ಜಾರಕಿಹೊಳಿ ಆ ಸಿಡಿಯಲ್ಲಿ ಇರುವುದು ನಾನೆ ಎಂದು ಹೇಳಿದ ಹಿಂದೆ ಹಲವು ಕಾನೂನಾತ್ಮಕ ನಿಗೂಢತೆಗಳು ಅಡಗಿವಿ ಯಾಕೆಂದರೆ ಈ ಪ್ರಕರಣ ಮತ್ತೊಂದು ತಿರುವು ಪಡೆದುಕೊಳ್ಳುವುದಕ್ಕಿಂತ ಮುಂಚೆಯೇ ತಾವೇ ಎಂದು ಒಪ್ಪಿಕೊಂಡು ಅದೊಂದು ಹನಿಟ್ರ್ಯಾಪ್ ಎಂದು ಬಿಂಬಿಸಿದರೆ ಸದ್ಯ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರಾಯಿತು ಎನ್ನುವ ದೋರಣೆಯಿಂದ ನಾನೇ ಎಂದು ಒಪ್ಪಿಕೊಂಡಿದ್ದಾರೆ ಎನ್ನುವತ್ತವೆ ಮೂಲಗಳು.
ಇದೇ ವೇಳೆ ಈ ಪ್ರಕರಣವನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸುತ್ತಿದ್ದ ಸೌಮೇಂದು ಮುಖರ್ಜಿ ಅವರು ಈ ಪ್ರಕರಣದ ತಾರ್ಕಿ ಹಂತದಲ್ಲಿದ್ದರೆ ಬೇರೆ ತಿರುವನ್ನು ಪಡೆದುಕೊಳ್ಳುತ್ತದೆ ಎನ್ನುವ ಕಾರಣಕ್ಕೆ ಸರ್ಕಾರವೇ ಅವರನ್ನು ಬಲವಂತವಾಗಿ ರೆಜೆ ಕಳಿಸಿದೆ ಎಂದು ಹೇಳಲಾಗಿದೆ.
ಇದಕ್ಕೆ ಸರ್ಕಾರವೇ ಎಲ್ಲಾ ರೀತಿಯ ರಕ್ಷಣೆಯನ್ನು ಮಾಡುತ್ತಿದೆ ಹೀಗಾಗಿಯೇ ಅವರನ್‌ನು ರಜೆ ಮೇಲೆ ಕಳಿಸಲಾಗಿದೆ ತಾರ್ಕಿಕ ಈ ಸಂದರ್ಭದಲ್ಲಿ ಅವರಿದ್ದರೆ ಕಷ್ಟವಾಗಬಹುದು ಎನ್ನುವ ಕಾರಣಕ್ಕೆ ಇದೆಲ್ಲವೂ ನಡೆದಿದೆ ಎಂದು ಹೇಳಲಾಗುತ್ತಿದೆ.
ರಮೇಶ್ ಜಾರಕಿಹೊಳಿ ಕುರಿತು ಸಿಡಿ ಸ್ಫೋಟ ಪ್ರಕರಣ ಬಳಿಕ ನಾನಾ ಆಯಾಮ ಪಡೆದುಕೊಂಡಿತು. ಜಲ ಸಂಪನ್ಮೂಲ ಸಚಿವ ಸಂತ್ರಸ್ತ ಯುವತಿಗೆ ಕೆಲಸದ ಅಮಿಷೆ ತೋರಿಸಿ ಮೋಸ ಮಾಡಿದ್ದಾರೆ ಎನ್ನುವ ವಾದ. ಮತ್ತೊಂದಡೆ ಇದು ಪಕ್ಕಾ ಹನಿಟ್ರ್ಯಾಪ್ ಹಾಗೂ ಬ್ಲಾಕ್ ಮೇಲ್ ಎಂಬ ಗುಮಾನಿಗೆ ಕಾರಣವಾಯಿತು.
ದೇಶದಲ್ಲಿ ಸಂಚಲನ ಮೂಡಿಸಿದ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಸರ್ಕಾರ ಮೊದಲು ಆಯ್ಕೆ ಮಾಡಿದ್ದು ಸೌಮೇಂದು ಮುಖರ್ಜಿ ಅವರನ್ನು. ಬ್ಲಾಕ್ ಮೇಲ್ ಹಾಗೂ ಸಂತ್ರಸ್ತ ಯುವತಿ ನೀಡಿದ್ದ ದೂರಿನ ಎರಡು ಆಯಾಮದಲ್ಲಿ ತನಿಖೆಗೆ ಮಾರ್ಗದರ್ಶನ ನೀಡುತ್ತಿದ್ದರು. ಇತ್ತೀಚೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ್ದರು. ಆ ಸಿಡಿಯಲ್ಲಿರುವ ವ್ಯಕ್ತಿ ನಾನೇ. ನಾನು ಸಹಮತ ಲೈಂಗಿಕ ಕ್ರಿಯೆ ನಡೆಸಿದ್ದು ನಿಜ. ನನಗೆ ವಿಡಿಯೋ ತೊರಿಸಿ ಬ್ಲಾಕ್ ಮೇಲ್ ಮಾಡಿದ್ದಾರೆ. ಅವರಿಗೆ ದುಡ್ಡು ಕೊಟ್ಟಿದ್ದೇನೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಬೆಳವಣಿಗೆ ನಡುವೆ ಎಸ್‌ಐಟಿ ಮುಖಸ್ಯರಾದ ಸೌಮೇಂದು ಮುಖರ್ಜಿ ರಜೆ ಮೇಲೆ ತೆರಳಿದ್ದಾರೆ.
ಮೇ. ೩೧ ಕ್ಕೆ ಅಂತಿಮ ವರದಿ
ಇನ್ನು ರಮೇಶ್ ಜಾರಕಿಹೊಳಿ ಪ್ರಕರಣ ಎರಡು ರಾಷ್ಟ್ರೀಯ ಪಕ್ಷಗಳ ಪ್ರತಿಷ್ಠೆ ವಿಷಯವಾಗಿ ರೂಪಾಂತರಗೊಂಡಿದೆ. ಇಂತಹ ಸೂಕ್ಷ್ಮ ಪ್ರಕರಣದ ತನಿಖೆ ಮುಗಿಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲು ಮೇ. ೩೧ ಕ್ಕೆ ಗಡುವು ನೀಡಲಾಗಿದೆ. ಸಂತ್ರಸ್ತ ಯುವತಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣ ಸಂಬಂಧ ಎಸ್‌ಐಟಿ ಪೊಲೀಸರು ಅಂತಿಮ ವರದಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಅನುಪಸ್ಥಿತಿಯಲ್ಲಿಯೇ ಅಂತಿಮ ವರದಿ ಸಲ್ಲಿಸಲಿದ್ದಾರೆಯೇ? ಎಂಬ ಪ್ರಶ್ನೆ ಮೂಡಿದೆ. ಎಸ್‌ಐಟಿ ಮುಖ್ಯಸ್ಥರನ್ನು ನೇಮಿಸಿರುವ ಕಾರಣ ತನಿಖಾಧಿಕಾರಿಯ ಕವಿತಾ ಅವರ ವರದಿಯನ್ನು ಪೂರ್ವ ಪರ ಪರಿಶೀಲಿಸಿ, ಕಾನೂನಿನ ಆಯಾಮದ ಬಗ್ಗೆ ಚರ್ಚಿಸಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿತ್ತು. ಯಾವ ರೀತಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುತ್ತಾರೆ. ಸೌಮೇಂದು ಅವರ ಅನುಪಸ್ಥಿತಿಯಲ್ಲಿ ಬೇರೆ ಹಿರಿಯ ಪೊಲೀಸ್ ಅಧಿಕಾರಿಯೇ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.