ಬೆಂಗಳೂರು ,ಜೂ. 09: ಕೋವಿಡ್ ನಿಯಂತ್ರಣದ ನಡುವೆಯೇ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ನಡೆಸಿದೆ. ರಾಜ್ಯದ 12 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಇಂದು ಆದೇಶ ನೀಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ರವಿ ಚೆನ್ನಣ್ಣನವರ್ ಸೇರಿದಂತೆ ಜಿಲ್ಲಾ ಎಸ್ಪಿಗಳ ವರ್ಗಾವಣೆ ಮಾಡಿ ಆದೇಶ ನೀಡಿದೆ. ಇದೇ ವೇಳೆ ಮೈಸೂರು ಜಿಲ್ಲಾ ನೂತನ ಎಸ್ಪಿಯಾಗಿ ಆರ್ ಚೇತನ್ ಅವರನ್ನು ವರ್ಗಾಯಿಸಲಾಗಿದೆ. ಕೊರೋನಾ ನಿಯಂತ್ರಣದ ರಾಜ್ಯದಲ್ಲಿ ಲಾಕ್ಡೌನ್ ಜಾರಿಯಾಲ್ಲಿದ್ದು, ಜನರ ಓಡಾಟಕ್ಕೆ ನಿರ್ಭಂದ ಹೇರಿ ಕಾನೂನು ಸುವ್ಯವಸ್ಥೆಯಲ್ಲಿ ಪೊಲೀಸ್ ಅಧಿಕಾರಿಗಳ ಪಾತ್ರ ಕೂಡ ಮಹತ್ವದಾಗಿದೆ.
ಬೆಂಗಳೂರು CID ಎಸ್ಪಿಯಾಗಿ ರವಿ ಡಿ ಚೆನ್ನಣ್ಣನವರ್
ಮೈಸೂರು ಎಸ್ಪಿಯಾಗಿ ಆರ್.ಚೇತನ್
ಸಿ.ಬಿ.ರಿಷ್ಯಂತ್ – ದಾವಣಗೆರೆ ಎಸ್ಪಿ
ಕೋನವಂಶಿ ಕೃಷ್ಣ-ಬೆಂಗಳೂರು ಗ್ರಾ. ಎಸ್ಪಿ
ಅಡ್ಡೂರು ಶ್ರೀನಿವಾಸುಲು- ಕಲಬುರ್ಗಿ ಡಿಸಿಪಿ
ಪ್ರದೀಪ್ ಗುಂಟಿ-DCP, ಮೈಸೂರು ಕಾನೂನು ಸುವ್ಯವಸ್ಥೆ
ಡೆಕ್ಕ ಕಿಶೋರ್ ಬಾಬು- ಕೋಲಾರ ಎಸ್ಪಿ
ಪ್ರಕಾಶ್ ಗೌಡ, ಐಎಸ್ಡಿ ಎಸ್ಪಿ ಬೆಂಗಳೂರು
ರಾಹುಲ್ ಕುಮಾರ್- ತುಮಕೂರು ಎಸ್ಪಿ
ಕೆ.ಜಿ.ದೇವರಾಜ್- ಸಿಐಡಿ ಎಸ್ಪಿ
ಹನುಮಂತರಾಯ- ಹಾವೇರಿ ಎಸ್ಪಿ
ಕಾರ್ತಿಕ್ ರೆಡ್ಡಿ- ಬೆಂಗಳೂರು ವೈರ್ಲೆಸ್ ಎಸ್ಪಿ