ಮುತ್ತಿನ ರಾಶಿಗೆ ಮಂಜು ಮುಸುಕಿತಲೇ ಪರಾಕ್..ಮೈಲಾರ ಕಾರ್ಣಿಕ 

Share

ಮುತ್ತಿನ ರಾಶಿಗೆ ಮಂಜು ಮುಸುಕಿತಲೇ ಪರಾಕ್..ಮೈಲಾರ ಕಾರ್ಣಿಕ

by-ಕೆಂಧೂಳಿ

ಹರಪನಹಳ್ಳಿ,ಫೆ 13-ವಿಜಯನಗರ ಜಿಲ್ಲೆ ಹರಪನಹಳ್ಳಿಯ ದೊಡ್ಡ ಮೈಲಾರ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ಕೋಟೆಪ್ಪ ಮುತ್ತಿನ ರಾಶಿಗೆ ಮಂಜು ಮುಸುಕಿತಲೇ ಪರಾಕ್​ ಎಂದು ದೈವವಾಣಿ ನುಡಿದಿದ್ದಾರೆ.

9 ದಿನ ಉಪವಾಸ ವ್ರತ ಆಚರಿಸಿದ್ದ ಗೊರವಯ್ಯ ಕೋಟೆಪ್ಪ ಅವರನ್ನು ಪಾದಗಟ್ಟೆಯ ಮರಡಿಯಿಂದ ಮೆರವಣಿಗೆ ಮೂಲಕ ಕರೆತರಲಾಯಿತು. ಬಳಿಕ ಗೊರವಪ್ಪ ಸಂಜೆ ಬಿಲ್ಲನ್ನೇರಿ ಸದ್ದಲ್ಲೇ ಎನ್ನುತ್ತಿದ್ದಂತೆ ನೆರದವರೆಲ್ಲ ಶಾಂತರಾಗುತ್ತಿದ್ದಂತೆಯೇ ಕೋಟೆಪ್ಪ ಮುತ್ತಿನ ರಾಶಿಗೆ ಮಂಜು ಮುಸುಕಿತಲೇ ಪರಾಕ್ ಎಂದು ಕಾರ್ಣಿಕ ನುಡಿದು ಮೇಲಿಂದ ಜನರ ಮಧ್ಯ ಜಿಗಿದರು.

ಪ್ರಸಕ್ತ ವರ್ಷದ ಮಳೆಗೆ ಸಮೃದ್ಧವಾಗಿ ಉತ್ತಮ ಫಸಲ ಬರುತ್ತದೆ. ಆದ್ರೆ, ಇಳುವರಿ ಕುಂಠಿತ ಎಂಬ ಸಂದೇಶ ನಿಡಿದ್ದಾರೆ ಎಂದು ಭಕ್ತರು ತಾವು ತಾವೇ ಚರ್ಚೆ ನಡೆಸಿದ್ದಾರೆ. ಇನ್ನು ಕೆಲವರು ಮುಂಬರುವ ದಿನಗಳಲ್ಲಿ ಗಂಭೀರ ಘಟನೆ ನಡೆಯಲಿದೆ. ರಾಜ್ಯ, ರಾಷ್ಟ್ರದಲ್ಲಿ ದೊಡ್ಡ ಘಟನೆ ನಡೆಯಲಿದೆ ಎಂದು ದೈವವಾಣಿಯನ್ನು ನಾನಾ ರೀತಿ ಅರ್ಥೈಸಿಕೊಂಡಿಕೊಂಡಿದ್ದಾರೆ.

Girl in a jacket
error: Content is protected !!