ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿಯಲ್ಲಿ ದಿಡೀರ್ ಬದಲಾವಣೆ

Share

ಬೆಂಗಳೂರು ,ಏ.7: ದ್ವಿತೀಯ ಪಿಯುಸಿ  ಅಂತಿಮ ಪರೀಕ್ಷಾ ವೇಳಾಪಟ್ಟಿಯಲ್ಲಿ  ಬದಲಾವಣೆಯಾಗಿದೆ.  ವಿವಿಧ ವಿಷಯಗಳ ಪರೀಕ್ಷೆ ದಿನಾಂಕ ಮಾತ್ರ ಅದಲು ಬದಲು. ಕೆಲ‌ ತಾಂತ್ರಿಕ ಕಾರಣಗಳಿಂದ ಪರೀಕ್ಷೆ ದಿನಾಂಕ ಮಾತ್ರ ಬದಲಾವಣೆಯಾಗಿದೆ.

ಈ ಮೊದಲು ತಿಳಿಸಿದಂತೆ ಏ. 22ರಿಂದ‌ ಮೇ 18ರವರೆಗೆ ಪರೀಕ್ಷೆ ನಡೆಯಲಿದೆ ವಿಷಯಗಳ ದಿನಾಂಕವಷ್ಟೆ ಬದಲಾಗಿದೆ ಎಂದು ಪಿಯು ಬೋರ್ಡ್  ಮಾಹಿತಿ ನೀಡಿದೆ. ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳು ಈ ಬದಲಾವಣೆಯನ್ನು ವಿದ್ಯಾರ್ಥಿಗಳ ಗಮನಕ್ಕೆ ತರುವಂತೆ ಸೂಚನೆ ನೀಡಲಾಗಿದೆ.

ತಮ್ಮೆಲ್ಲರ ಗಮನಕ್ಕೆ ಈ ಹಿಂದೆ ಪ್ರಕಟಿಸಿರುವ ಯಾವುದೇ ವೇಳಾ ಪಟ್ಟಿಯನ್ನು ಅನುಸರಿಸದೆ ದಿನಾಂಕ 06-04-2022ರಂದು ಪ್ರಕಟಿಸಿರೋ ಅಂತಿಮ ವೇಳಾಪಟ್ಟಿಯನ್ನು ಮಾತ್ರ ಎಚ್ಚರದಿಂದ ಅನುಸರಿಸಬೇಕಾಗಿ ತಿಳಿಸಿರೋದಾಗಿ ದ್ವಿತೀಯ ಪಿಯುಸಿ ಬೋರ್ಡ್​ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿ

ಯಾವ ವಿಷಯಗಳ ದಿನಾಂಕ ಬದಲಾಗಿದೆ

ಏ. 22 – ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಏ. 23 – ಗಣಿತ ಶಾಸ್ತ್ರ, ಶಿಕ್ಷಣ ಶಾಸ್ತ್ರ
ಏ. 25 – ಅರ್ಥಶಾಸ್ತ್ರ
ಏ. 26 – ಮನಶ್ಶಾಸ್ತ್ರ, ರಸಾಯನ ಶಾಸ್ತ್ರ, ಹಿಂದೂಸ್ಥಾನಿ ಸಂಗೀತ
ಏ. 28 – ಕನ್ನಡ
ಮೇ 4 – ಭೂಗೋಳಶಾಸ್ತ್ರ, ಜೀವಶಾಸ್ತ್ರ
ಮೇ 5 – ಮಾಹಿತಿ ತಂತ್ರಜ್ಞಾನ, ರಿಟೈಲ್ ಆಟೋಮೊಬೈಲ್, ಹೆಲ್ತ್ ಕೇರ್ ಬ್ಯೂಟಿ ಅಂಡ್ ವೆಲ್ ನೆಸ್
ಮೇ. 6 – ಇಂಗ್ಲಿಷ್
ಮೇ 10 – ಇತಿಹಾಸ, ಭೌತಶಾಸ್ತ್ರ
ಮೇ 12 – ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಮೇ 14 – ಸಮಾಜಶಾಸ್ತ್ರ, ಗಣಕ ವಿಜ್ಞಾನ, ವಿದ್ಯುನ್ಮಾನ ಶಾಸ್ತ್ರ
ಮೇ 17 – ಐಚ್ಚಿಕ ಕನ್ನಡ, ಲೆಕ್ಕ ಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹವಿಜ್ಞಾನ
ಮೇ 18 – ಹಿಂದಿ

ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ

2021-22 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ದಿನಾಂಕ 22-04-2022 ರಿಂದ 18-042022ರವರೆಗೆ ಬದಲಾವಣೆ ತರಲಾಗಿತ್ತು ಕಾರಣಾಂತರಗಳಿಂದ ಅಲ್ಪ ಬದಲಾವಣೆಯೊಂದಿಗೆ ಪರಿಷ್ಕೃತ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪತ್ರದೊಂದಿಗೆ ಪರಿಷ್ಕೃತ ಅಂತಿಮ ವೇಳಾಪಟ್ಟಿಯನ್ನು ಲಗತ್ತಿಸಲಾಗಿದೆ. ಎಲ್ಲಾ ಪೋಷಕರು ಮತ್ತು ವಿದ್ಯಾರ್ಥಿಗಳು ಇಲಾಖಾ ಅಂತರ್ಜಾಲದಲ್ಲಿಅಳವಡಿಸಿರೋ ವೇಳಾಪಟ್ಟಿಯನ್ನು ವೀಕ್ಷಿಸಬಹುದಾಗಿದೆ.

ಎಲ್ಲಾ ವಿದ್ಯಾರ್ಥಿಗಳ ಗಮನಕ್ಕೆ ತರುವಂತೆ ಸೂಚನೆ

ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳು ಈ ಬದಲಾವಣೆಯನ್ನು ವಿದ್ಯಾರ್ಥಿಗಳ ಗಮನಕ್ಕೆ ತರುವಂತೆ ಸೂಚನೆ ನೀಡಲಾಗಿದೆ. ತಮ್ಮೆಲ್ಲರ ಗಮನಕ್ಕೆ ಈ ಹಿಂದೆ ಪ್ರಕಟಿಸಿರುವ ಯಾವುದೇ ವೇಳಾ ಪಟ್ಟಿಯನ್ನು ಅನುಸರಿಸದೆ ದಿನಾಂಕ 06-04-2022ರಂದು ಪ್ರಕಟಿಸಿರೋ ಅಂತಿಮ ವೇಳಾಪಟ್ಟಿಯನ್ನು ಮಾತ್ರ ಎಚ್ಚರದಿಂದ ಅನುಸರಿಸಬೇಕಾಗಿ ತಿಳಿಸಿರೋದಾಗಿ ದ್ವಿತೀಯ ಪಿಯುಸಿ ಬೋರ್ಡ್​ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ

 

Girl in a jacket
error: Content is protected !!