ಬೆಂಗಳೂರು, ಜೂ, 03; ನಿರೀಕ್ಷೆಯಂತೆ ಕರ್ನಾಟಕದಲ್ಲಿ ಲಾಕ್‌ಡೌನ್ ಒಂದು ವಾರಗಳ ಕಾಲ ವಿಸ್ತರಣೆ ಮಾಡಲಾಗಿದೆ. ಜೂನ್ 14ರ ತನಕ ಲಾಕ್‌ಡೌನ್ ವಿಸ್ತರಣೆ ಮಾಡಿದ್ದು, ಕೆಲವು ವಿನಾಯಿತಿಗಳನ್ನು ಸರ್ಕಾರ ಘೋಷಣೆ ಮಾಡಿದೆ.
ಗುರುವಾರ ಸಂಜೆ ವಿಧಾನಸೌಧದಲ್ಲಿ ಸಚಿವರ ಜೊತೆ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, “ಜೂನ್ 14ರ ತನಕ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ” ಎಂದು ಘೋಷಿಸಿದರು.
“ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಂದಿದೆ. ಆದರೂ ವೈರಾಣು ಹರಡುವಿಕೆ ತಡೆಯಬೇಕಿದೆ. ಆರೋಗ್ಯ ಪರಿಣಿತರ ಸಲಹೆ ಪಾಲಿಸಬೇಕಿದೆ. ಆದ್ದರಿಂದ ಜೂನ್ 14ರವರೆಗೆ ಲಾಕ್‌ಡೌನ್ ವಿಸ್ತರಣೆ ಮಾಡಲಾಗುತ್ತದೆ” ಎಂದು ಹೇಳಿದರು.
2ನೇ ಹಂತದ ಪ್ಯಾಕೇಜ್ ಘೋಷಣೆ; ಲಾಕ್‌ಡೌನ್ ಮುಂದುವರೆಸುವ ಘೋಷಣೆ ಮಾಡಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ 2ನೇ ಹಂತದ ಪ್ಯಾಕೇಜ್ ಘೋಷಣೆ ಮಾಡಿದರು. 500 ಕೋಟಿ ರೂ.ಗಳ ಪ್ಯಾಕೇಜ್ ಇದಾಗಿದೆ.
2ನೇ ಹಂತದ ಪ್ಯಾಕೇಜ್‌ನಲ್ಲಿ ಯಡಿಯೂರಪ್ಪ ಪವರ್ ಲೂಂ ನೌಕರರಿಗೆ ತಲಾ 3 ಸಾವಿರ ಪರಿಹಾರ, ಚಲನಚಿತ್ರ ಕಾರ್ಮಿಕರಿಗೆ ತಲಾ 3 ಸಾವಿರ ರೂ. ಪರಿಹಾರ, ಮೀನುಗಾರರಿಗೆ ತಲಾ 3 ಸಾವಿರ ಪರಿಹಾರ, ಇನ್ ಲ್ಯಾಂಡ್ ದೋಣಿಮಾಲಿಕರಿಗೆ 3 ಸಾವಿರ ರೂ. ನೆರವನ್ನು ಘೋಷಣೆ ಮಾಡಿದರು.
ಅರ್ಚಕರು, ಆಶಾ ಕಾರ್ಯಕರ್ತೆಯರು
2ನೇ ಲಾಕ್‌ಡೌನ್ ಪ್ಯಾಕೇಜ್‌ನಲ್ಲಿ ಅರ್ಚಕರು, ಸಿಬ್ಬಂದಿಗೆ ತಲಾ 3 ಸಾವಿರ ನೆರವು ಘೋಷಣೆ. ಮಸೀದಿಯ ರೇಷಿಮಾ, ಪೌಜಿನ್‌ಗೆ ತಲಾ 3 ಸಾವಿರ ನೆರವು, ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ. ಪರಿಹಾರ, ಅಂಗನವಾಡಿ ಸಹಾಯಕರಿಗೆ ತಲಾ 2 ಸಾವಿರ ರೂ ಪರಿಹಾರವನ್ನು ಘೋಷಣೆ ಮಾಡಿದರು.
ಕೈಗಾರಿಕೆಗಳಿಗೆ ವಿನಾಯಿತಿ
ವಿದ್ಯುತ್ ಶುಲ್ಕದಿಂದ ವಿನಾಯಿತಿ
ಶಾಲಾ ಮಕ್ಕಳಿಗೆ ಹಾಲಿನ ಪುಡಿ ವಿತರಣೆ. ಅನುದಾನ ರಹಿತ ಶಾಲಾ ಶಿಕ್ಷಕರಿಗೆ 5 ಸಾವಿರ ರೂ. ಸಹಾಯಧನ. ನ್ಯಾಯವಾದಿಗಳ ಕಲ್ಯಾಣ ನಿಧಿಗೆ 5 ಕೋಟಿ ರೂ. ನೆರವು. ಎಂಎಸ್ ಎಂಇ ಕೈಗಾರಿಕೆಗಳ ವಿದ್ಯುತ್ ಶುಲ್ಕ ವಿನಾಯ್ತಿ. ಇತರ ಕೈಗಾರಿಕೆಗಳಿಗೆ ಮೇ, ಜೂನ್ ಶುಲ್ಕ ವಿನಾಯಿತಿಯನ್ನು ಘೋಷಿಸಿದರು.
ಪಾರ್ಸೆಲ್‌ಗೆ ಮಾತ್ರ ಅವಕಾಶ
ಸಂಜೆಯ ತನಕ ಹೋಟೆಲ್ ಓಪನ್
ಲಾಕ್‌ಡೌನ್ ವಿಸ್ತರಣೆ ಮಾಡಿದ ಬಿ. ಎಸ್. ಯಡಿಯೂರಪ್ಪ ಹೊಟೇಲ್ ಸಂಜೆಯವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಪಾರ್ಸೆಲ್ ಸೇವೆಗೆ ಮಾತ್ರ ಅವಕಾಶವಿದೆ ಎಂದು ಸ್ಪಷ್ಟಪಡಿಸಿದರು. ಉಳಿದಂತೆ ಎಲ್ಲಾ ಲಾಕ್‌ಡೌನ್ ನಿಯಮಗಳು ಹಾಗೆಯೇ ಇನ್ನೊಂದು ವಾರ ಮುಂದುವರೆಯಲಿವೆ.