ರಾಮನಗರ ಜೂ 19: ಸಮಾಜದ ಎಲ್ಲ ವರ್ಗಗಳ ಏಳಿಗೆಗೆ ಶ್ರಮಿಸಿದ ಹಾಗೂ ತಮ್ಮ ಕವಿತೆಗಳಿಂದ ಜನರಿಗೆ ಸರಿಯಾದ ಮಾರ್ಗ ತೋರಿಸುವ ಮೂಲಕ ಜನಮಾನಸದಲಿ ಶಾಶ್ವತವಾಗಿ ಉಳಿದ ಅದರ್ಶ ವ್ಯಕ್ತಿ ಡಾ.ಸಿದ್ದಲಿಂಗಯ್ಯ ಎಂದು ಮಾಜಿ ನಿಗಮ ಮಂಡಳಿ ಅಧ್ಯಕ್ಷ ಹಾಗೂ ಹಾಲಿ ನಗರಸಭಾ ಅಧ್ಯಕ್ಷ ಕೆ ಶೇಷಾದ್ರಿ ಹೇಳಿದರು.
ನಗರದ ಐಜೂರು ವೃತ್ತದಲ್ಲಿ ಸಿದ್ದಲಿಂಗಯ್ಯರವರಿಗೆ ಏರ್ಪಡಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಸಿದ್ದಲಿಂಗಯ್ಯರವರು ಬಹಳ ಸರಳವಾಗಿ ತಮ್ಮ ಬದುಕನ್ನು ಕಟ್ಟಿಕೊಂಡ ಜೀವನ ನಡೆಸುತ್ತಿದ್ದರು ಅವರು ಬರೆದ ಕವಿತೆಗಳು ಬಹಳ ಜನಪ್ರಿಯವಾಗಿದ್ದವು ಅನೇಕ ಚಲನಚಿತ್ರಗಳಲ್ಲಿ ಇವರ ಕವಿತೆಗಳನ್ನು ಹಾಡುಗಳಲ್ಲಿ ಅಳವಡಿಸಿಕೊಂಡಿರುವುದು ಅವರ ಎಂತಹ ಶ್ರೇಷ್ಠ ವ್ಯಕ್ತಿ ಎಂಬುದನ್ನು ಅರಿಯಬೇಕು ಎಂದು ಹೇಳಿದರು
ಸಮತಾ ಸೈನಿಕ ದಳದ ಯುವ ಘಟಕದ ರಾಜ್ಯಾಧ್ಯಕ್ಷ ಗೋವಿಂದಯ್ಯ ಮಾತನಾಡಿ, ಸಿದ್ಧಲಿಂಗಯ್ಯ ಅವರು ನಾಡು ಕಂಡ ಅದ್ವಿತೀಯ ಸಾಹಿತಿ. ಅಂಬೇಡ್ಕರ್ ನಂತರ ತಳವರ್ಗದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ ಮಹಾನ್ ಚೇತನ ಇಂದು ನಮ್ಮನ್ನು ಅಗಲಿರುವುದು ಸಮಾಜಕ್ಕೆ ತುಂಬಲಾದರ ನಷ್ಟ ಉಂಟಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಮತಾ ಸೈನಿಕ ದಳದ ನೂರಾರು ಕಾರ್ಯಕರ್ತರು ಹಾಜರಿದ್ದರು.