ವ್ಯಾಕ್ಸಿನ್ ಬಗ್ಗೆ ಜಾಗೃತಿ ಮೂಡಿಸಿದ ತಹಶಿಲ್ದಾರ್ ರಘುಮೂರ್ತಿ

Share

ಚಳ್ಳಕೆರೆ, ಜ,28:ವ್ಯಾಕ್ಸಿನ್ ಹಾಕಿಸಿದೆ ಹಠ ಮಾಡುತ್ತಿದ್ದವರಿಗ ತಹಶೀಲ್ದಾರ್ ಎನ್ .ರಘುಮೂರ್ತಿ ಹೂ ಮಾಲೆ ಹಾಕಿ ವ್ಯಾಕ್ಸಿನ್ ಜಾಗೃತಿ ಮೂಡಿಸಿ ವ್ಯಾಕ್ಸಿನ್ ಹಾಕಿಸುವ ಮೂಲಕ ಎಲ್ಲರ ಗಮನ ಸೆಳದಿದ್ದಾರೆ.

ಹೌದು ತಾಲ್ಲೂಕು ನ್ನು ಸಂಪೂರ್ಣ ಕೋವಿಡ್ ವ್ಯಾಕ್ಸಿನ್ ಮುಕ್ತ ಮಾಡುವ ಉದ್ದೇಶದಿಂದ ಪ್ರತಿದಿನ ಬೆಳಂಬೆಳಗ್ಗೆ ಗ್ರಾಮೀಣ ಭಾಗಗಳಲ್ಲಿ ವ್ಯಾಕ್ಸಿನ್ ಜಾಗೃತಿ ಜತೆಗೆ ವ್ಯಾಕ್ಸಿನ್ ಹಾಕಿಸಿಕೊಳ್ಳದ ವ್ಯಕ್ತಿಗಳಿಗೆ ಬಲವಂತೆ ಮಾಡದೆ ವ್ಯಾಕ್ಸಿನ್ ಬಗ್ಗೆ ತಿಳಿ ಹೇಳಿ ವ್ಯಾಕ್ಸಿನ್ ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗುರುವಾರ ಬೆಳಗ್ಗೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ಗಜ್ಜಿಗನಾಹಳ್ಳಿ ಗ್ರಾಮದಲ್ಲಿ ಅರೋಗ್ಯ ಇಲಾಖೆ ಮತ್ತು ತಾಲ್ಲೂಕು ಆಡಳಿತ ಹಾಗೂ ಗ್ರಾಮಪಂಚಾಯಿತಿ  ವತಿಯಿಂದ ವ್ಯಾಕ್ಸಿನ್ ಜಾಗೃತಿ ಹಮ್ಮಿಕೊಳ್ಳಾಯಿತು.

ಈ ಸಮಯದಲ್ಲಿ ನನಗೆ ವ್ಯಾಕ್ಸಿನ್ ಬೇಡ ಎನ್ನುವವರಿಗೆ ತಹಶೀಲ್ದಾರ್ ಎನ್.ರಘುಮೂರ್ತಿ ಹೂ‌ ಮಾಲೆ ಹಾಕಿ ವ್ಯಾಕ್ಸಿನ್ ಹಾಕಿಸಿದ್ದಾರೆ.ಈ ಸಮಯದಲ್ಲಿ ಅರೊಗ್ಯ ಶಿಕ್ಷಣಾಧಿಕಾರಿ ಕುಂದಾಪುರ ತಿಪ್ಪೇಸ್ವಾಮಿ, ಗ್ರಾಮಪಂಚಾಯಿತಿ ಸದಸ್ಯರಾದ ತಿಪ್ಪೇಸ್ವಾಮಿ ,ಅರೋಗ್ಯ ಸಹಾಯಕಿಯರು ಹಾಜರಿದ್ದರು.

Girl in a jacket
error: Content is protected !!