ಬೆಂಗಳೂರು,ಮೇ,೩೨: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೈಕೋರ್ಟ್ ಕಲಾಪವನ್ನು ಯೂಟ್ಯೂಬ್‌ನಲ್ಲಿ ನೇರಪ್ರಸಾರ ಮಾಡಲಾಯಿತು.
ಜನಸಾಮಾನ್ಯರಿಗೆ ಹೈಕೋರ್ಟ್ ಕಲಾಪ ವೀಕ್ಷಿಸಲು ಅವಕಾಶ ಸಿಗಬೇಕು ಎನ್ನುವ ಆಶಯದ ಹಿನ್ನೆಲೆಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಈ ಮಹತ್ವದ ಕ್ರಮ ತೆಗೆದುಕೊಂಡರು.
೩೧ರ ಮಧ್ಯಾಹ್ನ ೨.೪೦ರಿಂದ ಹೈಕೋರ್ಟ್ ಕಲಾಪದ ಯುಟ್ಯೂಬ್ ನೇರ ಪ್ರಸಾರ ಆರಂಭವಾಯಿತು. ಕೋರ್ಟ್ ಹಾಲ್೧ರಲ್ಲಿ ವಿಭಾಗೀಯ ಪೀಠವು ವಿಚಾರಣೆ ನಡೆಸಿತು. ಮುಖ್ಯ ನ್ಯಾಯಮೂರ್ತಿ ಎ.ಎಸ್.ಒಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನ್ಯಾಯಪೀಠದಲ್ಲಿದ್ದರು. ಪ್ರಾಯೋಗಿಕವಾಗಿ ಕಲಾಪವನ್ನು ಯುಟ್ಯೂಬ್‌ನಲ್ಲಿ ಲೈವ್ ಪ್ರಸಾರ ಮಾಡಲು ನಿರ್ಧರಿಸಲಾಯಿತು
ಬೈತಕೋಲ್ ಬಂದರು ನಿರಾಶ್ರಿತರ ಯಾಂತ್ರೀಕೃತ ದೋಣಿ ಮೀನುಗಾರರ ಸಹಕಾರರ ಸಂಘ ನಿಯಮಿತ ಮತ್ತು ಉತ್ತರ ಕನ್ನಡ ಜಿಲ್ಲಾ ಮೀನುಗಾರರ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನ್ಯಾಯಪೀಠವು ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಕಾರವಾರ ಬಂದರನ್ನು ೨ನೇ ಹಂತದಲ್ಲಿ ಬೈತಕೋಲ್ ಗ್ರಾಮದ ಸಮೀಪ ಅಭಿವೃದ್ಧಿಪಡಿಸಲು ಆರಂಭಿಸಿರುವ ಕಾಮಗಾರಿಯ ಪಾರಿಸರಿಕ ಪರಿಣಾಮಗಳ ಬಗ್ಗೆ ಹಾಗೂ ಪರಿಸರ ಕಾಯ್ದೆಗಳ ಉಲ್ಲಂಘನೆಗಳ ಬಗ್ಗೆ ಈ ಸಂಘಗಳು ಅರ್ಜಿ ಸಲ್ಲಿಸಿವೆ
ಸುಪ್ರೀಂಕೋರ್ಟ್ ಸಹ ಈಚಿನ ದಿನಗಳಲ್ಲಿ ಪ್ರಕರಣಗಳ ವಿಚಾರಣೆಗಳನ್ನು ಲೈವ್ ಸ್ಟ್ರೀಮಿಂಗ್ ಮಾಡುವ ಬಗ್ಗೆ ಪರಿಶೀಲಿಸುತ್ತಿದೆ. ಈ ಸಂಬಂಧ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿಯೊಂದು ವಿಚಾರಣೆಗೆ ಬಾಕಿಯಿದೆ. ಸುಪ್ರೀಂಕೋರ್ಟ್‌ನ ‘ಇ-ಸಮಿತಿ’ ಅಧ್ಯಕ್ಷ ಡಿ.ವೈ.ಚಂದ್ರಚೂಡ್ ಸಹ ನ್ಯಾಯದಾನ ಪ್ರಕ್ರಿಯೆಯ ಮುಖ್ಯ ಹಂತ ಎನಿಸಿರುವ ವಿಚಾರಣೆಯ ಲೈವ್ ಸ್ಟ್ರೀಮಿಂಗ್ ಬಗ್ಗೆ ಒಲವು ತೋರಿರುವುದನ್ನು ಇಲ್ಲಿ ಸ್ಮರಿಸಬಹುದು.
ಯೂಟ್ಯೂಬ್‌ನಲ್ಲಿ ಹೈಕೋರ್ಟ್ ಕಲಾಪ
Share