ಆನೇಕಲ್ ಭಾಗ ಭವಿಷ್ಯದಲ್ಲಿ ಜಿಬಿಎ ವ್ಯಾಪ್ತಿಗೆ ಸೇರ್ಪಡೆ: ಡಿಸಿಎಂ ಡಿ.ಕೆ.ಶಿವಕುಮಾರ್

Share

ಆನೇಕಲ್, ಅ. 23-“ಆನೇಕಲ್ ಭಾಗ ಭವಿಷ್ಯದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಸೇರಲಿದೆ. ಈಗಾಗಲೇ ಕಾವೇರಿ ಕುಡಿಯುವ ನೀರನ್ನು ನೀಡಲಾಗುತ್ತಿದೆ. ಭವಿಷ್ಯದಲ್ಲಿ ನೀಡಬೇಕಾದ ಸವಲತ್ತುಗಳ ಬಗ್ಗೆ ಚರ್ಚೆ ನಡೆಸಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ‌ಅವರು ಹೇಳಿದರು.

ನಗರ ಪ್ರದಕ್ಷಿಣೆ ಅಂಗವಾಗಿ ಗುರುವಾರ ಆನೇಕಲ್ ನ ಮುತ್ತನಲ್ಲೂರಿಗೆ ಭೇಟಿ ನೀಡಿದ್ದ ಡಿಸಿಎಂ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ‌ನೀಡಿದರು.

“ಈ ಭಾಗದಲ್ಲಿ ಈಗಿನಿಂದಲೇ ಸಂಚಾರ ದಟ್ಟಣೆ ನಿಯಂತ್ರಣ ಯೋಜನೆ ರೂಪಿಸಬೇಕು. ಏಕೆಂದರೆ ನಗರ ಬೆಳವಣಿಗೆ ಆದ ನಂತರ ಯೋಜನೆ ರೂಪಿಸಲು ಕಷ್ಟವಾಗಲಿದೆ. ಅದಕ್ಕೆ ಸಭೆ ನಡೆಸಿ ಚರ್ಚಿಸಲಾಗುವುದು” ಎಂದರು.

ಬಯೋಕಾನ್, ಇನ್ಪೋಸಿಸ್ ರಸ್ತೆಯಲ್ಲಿಯೇ ನೀವು ಸಂಚರಿಸಿದ್ದೀರಿ, ಅವರ ಆರೋಪದಂತೆಯೇ ರಸ್ತೆಗುಂಡಿ,‌ ಕಸದ ಸಮಸ್ಯೆ ಕಂಡುಬಂದಿತೇ ಎಂದು ಕೇಳಿದಾಗ, “ಬಯೋಕಾನ್ ಸಂಸ್ಥೆಯು ಪಂಚಾಯತಿ ‌ವ್ಯಾಪ್ತಿಯಲ್ಲಿ ಇದೆ. ಬೆಂಗಳೂರು ನಗರ ವ್ಯಾಪ್ತಿ ಹಾಗೂ ಪಂಚಾಯತಿ ವ್ಯಾಪ್ತಿ ಬೇರೆ, ಬೇರೆ. ಈ ಬಗ್ಗೆ ಈಗಾಗಲೇ ಮಾತನಾಡಿದ್ದೇ‌ನೆ. ಈಗ ಏಕೆ ಮತ್ತೆ ಅದರ ಬಗ್ಗೆ ಮಾತು. ನಾನು ಆ‌ ಪ್ರದೇಶವನ್ನ ನೋಡಿಕೊಂಡು ಬಂದಿದ್ದೇನೆ” ಎಂದು ಹೇಳಿದರು.

Girl in a jacket
error: Content is protected !!