ಬಸವಣ್ಣನಿಗೆ ವಚನಜ್ಯೋತಿ ಬಳಗದ ವಿಶಿಷ್ಟ ನಮನ

Share

 

ಬೆಂಗಳೂರು,ಮೇ,16:ವಚನಜ್ಯೋತಿ ಬಳಗ ಬಸವ ಜಯಂತಿಯನ್ನು ವಚನ ಗಾನಾಭಿಷೇಕದ ಮೂಲಕ ವಿಶಿಷ್ಟವಾಗಿ ಆಚರಿಸಿತು.

ಗೂಗಲಮೀಟಿನಲ್ಲಿ ನಡೆದ ಗಾನಾಭಿಷೇಕವನ್ನು ಹಿಂದೂಸ್ಥಾನಿ ಸಂಗೀತದ ಹಿರಿಯ ವಿದ್ವಾಂಸರಾದ ಪಂ. ದೇವೇಂದ್ರಕುಮಾರ ಪತ್ತಾರ್ ಅಲ್ಲಮಪ್ರಭುಗಳ ಬಸವ ಸ್ತುತಿಯೊಂದಿಗೆ ಉದ್ಘಾಟಿಸಿದರು.

ನೇತೃತ್ವ ವಹಿಸಿದ್ದ ಬಳಗದ ಮಹಾಪೋಷಕಿ 86 ವರ್ಷದ ಪಾರ್ವತಮ್ಮ ಶಿವಲಿಂಗಯ್ಯ ಪಂಡಿತರು ಅತ್ಯಂತ ಉತ್ಸಾಹದಿಂದ ಅಣ್ಣನ ವಚನ “ತನುವ ಕೊಟ್ಟು ತನು ಬಯಲಾಯಿತ್ತು” ಹಾಡಿ ಗಾನಾಭಿಷೇಕಕ್ಕೆ ಮೆರುಗು ಕೊಟ್ಟರು.

ಗೋಕಾಕದ ವಿದ್ಯಾಮಗ್ದಂ, ವಿಜಯಪುರ ಚಡಚಣದ ವಿದ್ಯಾ ಕಲ್ಯಾಣಶೆಟ್ಟಿ, ಚಿಕ್ಕನಾಯಕನಹಳ್ಳಿ ಹುಳಿಯಾರಿನ ಕವಿತಾ, ಮೈಸೂರಿನ ಲಲಿತಾ ಪಾಟೀಲ್, ಸರಸ್ವತಿ ರಾಮಣ್ಣ, ಕೊಪ್ಪಳದ ಅಂಜುಶ್ರೀ ಹಳೇಗೌಡರ್, ಬೀದರ್ ಹುಲಸೂರಿನ ಚಂದ್ರಕಲಾ ಹಾರಕೂಡೆ, ಬೆಂಗಳೂರಿನಿಂದ ರತ್ನ ದೇಸಾಯಿ, ಚಂದ್ರಿಕ, ಗಾಯಿತ್ರಿ, ಕು. ತಸ್ಮಯ್, ಸುಮಿತ್ರ ರಾಯರೆಡ್ಡಿ, ಮಂಗಳ ಮೊದಲಾದವರು ವಚನಗಳನ್ನು ಹಾಡಿದರು.

ಆಶಯ ನುಡಿಗಳನ್ನಾಡಿದ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ ,ಪ್ರತಿ ವರ್ಷ ರಾಜಧಾನಿಯ ಉದ್ದಗಲಕ್ಕೂ ಬಸವಣ್ಣನನ್ನು ಗಾಯಕ ಸಮೂಹ ಹಾಗೂ ಕಲಾತಂಡಗಳೊಂದಿಗೆ ಕರೆದುಕೊಂಡು ಹೆಜ್ಜೆ ಹಾಕುತ್ತಿದ್ದೆವು. ಆದರೆ ಪ್ರಸಕ್ತ ಪರಿಸ್ಥಿತಿಯಲ್ಲಿ ಯೂಟ್ಯೂಬ್ ಮೂಲಕ ಪ್ರತಿದಿನವೂ ವಚನ ಚಿಂತನೆಯನ್ನು ಪ್ರಸಾರ ಮಾಡುತ್ತಿದ್ದೇವೆ. ಪ್ರತಿ ಭಾನುವಾರ ಗೂಗಲಮೀಟ್ ವಚನ ಯಾನ ನಡೆಯುತ್ತಿದ್ದು ಈಗಾಗಲೇ 52 ವಚನ ಯಾನಗಳನ್ನು ಯಶಸ್ವಿಯಾಗಿ ನಡೆಸಿದ್ದೇವೆ ಎಂದರು.

ಬಳಗದ ಪದಾಧಿಕಾರಿಗಳಾದ ಪ್ರಭು ಇಸುವನಹಳ್ಳಿ, ರಾಜಾ ಗುರುಪ್ರಸಾದ್,ಚನ್ನಬಸವಯ್ಯ ತಿಪ್ಪೂರು, ಬಸವರಾಜು ಜೇನುಕಲ್ಲು, ರನ್ನವಚನ, ಪ್ರೊ. ಗೋವಿಂದರಾಜು, ಶಿವರಾಜ ಅಲ್ಲಶೆಟ್ಟಿ, ಎಂ. ನಂಜಪ್ಪ, ವನಜ ರಮೇಶ್, ಯಮುನದೇವಿ, ಮಮತಾ
ಮೊದಲಾದವರು ಪಾಲ್ಗೊಂಡಿದ್ದರು.

Girl in a jacket
error: Content is protected !!