ಬೆಂಗಳೂರು,ಡಿ,21;ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ಬೆಳಗಾವಿ ಜಿಲ್ಲೆಯ ಆಲಿಸಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಭಾವಚಿತ್ರಕ್ಕೆ ಮಸಿ ಬಳೆದ ಎಂಇಎಸ್ ಕಾರ್ಯಕರ್ತರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಖಿಲ ಭಾರತ ವೀರಶೈವ ಮಹಾಸಭಾ ಪ್ರತಿಭಟನೆ ನಡೆಸಿತು.
ಬೆಂಗಳೂರು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಎಂ ಇಎಸ್ ಪುಂಡರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಲಾಯಿತು.
ಬೆಂಗಳೂರು ಜಿಲ್ಲೆ ಮತ್ತು ಬೆಂಗಳೂರು ಸಿಟಿ ಮತ್ತು ವೀರಶೈವ ಮಹಾಸಭಾ ಯುವ ಘಟಕ ಕರ್ನಾಟಕ ರಾಜ್ಯ ಯುವ ಘಟಕ ಈ ಪ್ರತಿಭಟನೆಯನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಬಿಎಸ್ಸ ಸಚ್ಚಿದಾನಂದ ಮೂರ್ತಿ ಉಪಾಧ್ಯಕ್ಷರು ಮತ್ತು .ಎಚ್ಎಮ್ ರೇಣುಕಾ ಪ್ರಸನ್ನ ಕಾರ್ಯದರ್ಶಿಗಳು ಮತ್ತು ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಗುರುಸ್ವಾಮಿ ಮೃತ್ಯುಂಜಯ , ಬೆಂಗಳೂರು ಸಿಟಿ ಅಧ್ಯಕ್ಷ ಚಂದ್ರಮೌಳಿ , ಬೆಂಗಳೂರು ಯುವ ಘಟಕದ ಬೆಂಗಳೂರು ಜಿಲ್ಲಾ ಘಟಕದ ಯುವ ಅಧ್ಯಕ್ಷ ತಿಪ್ಪೇಸ್ವಾಮಿ, ಕರ್ನಾಟಕ ರಾಜ್ಯ ಯುವ ಘಟಕದ ಅಧ್ಯಕ್ಷ ಮನೋಹರ್, ಆಲ್ ಇಂಡಿಯಾ ವೀರಶೈವ ಮಹಾಸಭಾ ಘಟಕದ ಅಧ್ಯಕ್ಷ ಮಹಾಂತೇಶ ಪಾಟೀಲ್,ಜಯನಗರ ಘಟಕದ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಕೆ ಪಿ ಪಾಟೀಲ್ ರವರು ಹಾಗೂ ಕಾರ್ಯದರ್ಶಿಗಳಾದ ಗಂಗಾಧರ ಉಮೇಶ್ , ಬಾಪುಗೌಡ ಪಾಟೀಲ , ಶಂಕರಪ್ಪನವರು N ಕೇಶವ ಕುಮಾರ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು