ಬೆಂಗಳೂರು,ಏ,18:ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ವಂಡರ್‌ಲಾ ಹಾಲಿಡೇಸ್ ವಿಶೇಷ ರಿಯಾಯಿತಿ ಘೋಷಿಸಿದೆ.
ಹೌದು, 2021-22 ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ, ಮೊದಲ ಹಾಗೂ ದ್ವೀತೀಯ ಪಿಯುಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್‌ನನ್ನು ತೋರಿಸುವ ಮೂಲಕ ಶೇ.35ರಷ್ಟು ರಿಯಾಯಿಯನ್ನು ಪಡೆಯಬಹುದು.
ವಿದ್ಯಾರ್ಥಿಗಳು ಪರೀಕ್ಷೆ ಬರೆದು ತಮ್ಮ ಬೇಸಿಗೆ ರಜೆಯನ್ನು ಆನಂದಿಸಲು ಪ್ರಾರಂಭಿಸಿದ್ದಾರೆ. ಅವರ ಬೇಸಿಗೆ ರಜೆಯ ಮನರಂಜನೆಯನ್ನು ಇನ್ನಷ್ಟು ದ್ವಿಗುಣಗೊಳಿಸಲು ಈ ಆಫರ್ ನೀಡಲಾಗಿದೆ. ವಂಡರ್‌ಲಾದಲಿ ಸಾಮಾಜಿಕ ಅಂತರದ ನಿಯಮವನ್ನು ಪಾಲಿಸಲಾಗುತ್ತಿದೆ. ಆಸಕ್ತ ವಿದ್ಯಾರ್ಥಿಗಳು ಆನ್‌ಲೈನ್ ಅಥವಾ ನೇರವಾಗಿಯೇ ಟಿಕೆಟ್ ಪಡೆಯಬಹುದು. ಟಿಕೆಟ್ ಪಡೆಯುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಲ್‌ಟಿಕೆಟ್ ತರುವುದು ಕಡ್ಡಾಯ.
ಹೆಚ್ಚಿನ ವಿವರಗಳಿಗೆ 080 37230333, 080 35073966 ಸಂಖ್ಯೆಯನ್ನು ಸಂಪರ್ಕಿಸಿ ಅಥವಾ ವಂಡರ್‌ಲಾ ವೆಬ್‌ಸೈಟ್‌ಗೆ ಭೇಟಿ ನೀಡಿ.