ಬಂಜಾರ ಸಮುದಾಯದವಾಸ್ಮಿತೆ ಉಳಿಸಿದ ಸೇವಾಲಾಲ್; ರಘುಮೂರ್ತು

Share

ಚೆಳ್ಳಕೆರೆ,ಫೆ,16: ಸೇವಾಲಾಲ್ ಮಹಾರಾಜ ರವರು ಬಂಜಾರ ಸಮುದಾಯದ ಅಸ್ಮಿತೆಯನ್ನು ಉಳಿಸಿದಂತ ಆದರ್ಶ ಪುರುಷರಿಂದ ತಶಿಲ್ದಾರ್ ಎಂ ರಘುಮೂರ್ತಿ ಹೇಳಿದರು .

ಅವರು  ಮಂಗಳವಾರತಾಲೂಕು ಕಚೇರಿಯಲ್ಲಿ 283 ನೇ ಸೇವಾಲಾಲ್ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಾರಾಜ್ ಸೇವಾಲಾಲ್ ಅವರು ತಪಸ್ಸು ಧ್ಯಾನ ಭಕ್ತಿ ಮತ್ತು ಆಧ್ಯಾತ್ಮದಿಂದ ಈ ಸಮಾಜವನ್ನು ಸದೃಡ ಗೊಳಿಸಿದವರು ಬಾಲ ಬ್ರಹ್ಮಚಾರಿಯಾಗಿ ಸಾಧು ಪುರುಷರಾಗಿ ಸಮಾಜಕ್ಕೆ ಧೈರ್ಯ ಸಾಹಸ ಮತ್ತು ಆತ್ಮಸ್ಥೈರ್ಯವನ್ನು ತುಂಬಿದಂತ ಯುಗಪುರುಷ ರೆಂದು ಹೇಳಿ ಪ್ರಸ್ತುತ ಈ ಸಮಾಜದ ಎಲ್ಲ ವ್ಯಕ್ತಿಗಳು ತಮ್ಮ ಮಕ್ಕಳಿಗೆ ಉನ್ನತ ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಭವಿಷ್ಯದ ಮಕ್ಕಳು ಈ ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕುವಂತೆ ಪ್ರೇರೇಪಣೆ ಗೊಳಿಸಬೇಕೆಂದು ಹೇಳಿದರು.

ತಾಲೂಕಿನಲ್ಲಿ ಇರುವಂತ ಈ ಸಮಾಜದ ಬಂಧುಗಳ ಮೇಲೆ ಸನ್ಮಾನ್ಯ ಶಾಸಕರಿಗೆ ಅತ್ಯಂತ ಗೌರವ ಪೂರ್ವಕವಾದ ಅಭಿಪ್ರಾಯವಿದು ಅಧಿವೇಶನದ ಹಿನ್ನೆಲೆಯಲ್ಲಿ ಈ ದಿನದ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು ಸಮಾಜದ ದೇನಾ ನಾಥ್ ಭಗತ್ ಸ್ವಾಮೀಜಿ ಮಾತನಾಡಿ ತಾಲೂಕಿನ ಜನತೆಯ ಸ್ವಾಸ್ಥ್ಯಕ್ಕಾಗಿ ಕೋಟಿ ಸಸ್ಯ ಸಂವರ್ಧನ ಟ್ರಸ್ಟ್ ನಿಂದ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಹೇಳಿದರು ಶಿವ ಸಾಧು ಮಠದ ಸ್ವಾಮೀಜಿ ಮಾತನಾಡಿ ಸಮಾಜದ ಎಲ್ಲರೂ ಸತ್ಪ್ರಜೆಯಾಗಿ ಬಾಳಬೇಕು ಸಮಾಜಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಸರ್ಕಾರದಿಂದ ಒದಗಿಸಬೇಕೆಂದು ಹೇಳಿದರು.

ಡಾಕ್ಟರ್ ಚಂದ್ರನಾಯಕ್ ಮಾತನಾಡಿ ಈ ಸಮಾಜಕ್ಕೆ ತನ್ನದೇ ಹಿನ್ನೆಲೆ ಇದೆ ಸಾಂಸ್ಕೃತಿಕವಾಗಿ ಈ ಸಮಾಜ ಪ್ರಜ್ಞಾವಂತ ಸಮಾಜವಾಗಿದೆ ಸ್ವಾಭಿಮಾನದಿಂದ ಬದುಕಿರುವ ಸಮಾಜವಾಗಿದೆ ಮುಂದಿನ ದಿನಮಾನಗಳಲ್ಲಿ ಸಮಾಜಕ್ಕೆ ಅಗತ್ಯವಿರುವಂತಹ ಎಲ್ಲ ನೆರವನ್ನು ಸರ್ಕಾರದಿಂದ ಒದಗಿಸಬೇಕೆಂದು ಮನವಿ ಮಾಡಿದರು ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಶಿಕ್ಷಕರಾದ ಅಂತ ರಾಜು ನಾಯಕ್ ಚಂದ್ರನಾಯಕ್ ಮುಂತಾದವರು ಮಾತನಾಡಿದರು ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಸುಮಕ್ಕ ಅಂಜನೇಯ ನಗರಸಭಾ ಸದಸ್ಯರಾದ ಮಲ್ಲಿಕಾರ್ಜುನ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು

Girl in a jacket
error: Content is protected !!