ಪತ್ರಕರ್ತರು ದೇಶದ ಕನ್ನಡಿ- ಜಾಧವ್

Share

ಶಿಕಾರಿಪುರ,ಜೂ,೦೪:ಪ್ರಜಾ ಪ್ರಭುತ್ವದ ನಾಲ್ಕನೇ ಅಂಗವಾಗಿ ಕೆಲಸ ಮಾಡುತ್ತಿರುವ ಹಾಗೂ ಕೂ ರೋ ನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಸುದ್ದಿ ಮಾಡಿ ಸಮಾಜದಲ್ಲಿ ಗುರುತಿಸಿ ಕೊಂಡಿರುವ ಪತ್ರಕರ್ತರು ದೇಶವನ್ನು ಪ್ರತಿಬಿಂಬಿಸುವ ಕನ್ನಡಿ. ಎಂದು ಬೀಳಕಿ ಆಯುಷ್‌ಮಾ ಇಲಾಖೆಯ ಆಯುರ್ವೇದ ಆಸ್ಪತ್ರೆ ವೈದ್ಯ ಡಾ.ಖೇಮು ಜಾಧವ್ ಅಭಿಪ್ರಾಯಿಸಿದರು.
ಅವರು ಶಿಕಾರಿಪುರದ ಸುದ್ದಿ ಮನೆಯಲ್ಲಿ ಪತ್ರಕರ್ತರಿಗೆ ಆಯುರ್ವೇದದ ಮೆಡಿಕಲ್ ಕಿಟ್ ವಿತರಿಸಿ ಮಾತನಾಡಿದರು.ಆಯುಷ್ಮಾನ್ ಇಲಾಖೆಯ ಎಂಟುನೂರು ನಲವತ್ತು ಸಿಬ್ಬಂದಿಗಳು ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡುತ್ತಲೇ ಪ್ರತಿಭಟಿತ್ತಿದ್ದಾರೆ ಆದರೆ ಸರ್ಕಾರ ನಮ್ಮನ್ನು ನಿರ್ಲಕ್ಷಿಸುತ್ತಿದೆ ಕೂ ರೋ ನಾ ಸೆಂಟರ್ ನಲ್ಲು.ಕೆಲ್ಸ ಮಾಡುತ್ತಿದ್ದೇವೆ ನಮಗೆ ಯಾವುದೇ ಸೇವಾಭದ್ರತೆ ಇಲ್ಲದೆ ಕೆಲಸ ನಿರ್ವಹಿಸುತ್ತಿದ್ದೇವೆ ಎಂದು ಅವರು ಅಭಿಪ್ರಾಯ ಪಟ್ಟರು.
ಅದೇ ರೀತಿ ಪತ್ರಕರ್ತರು ಕೂಡ ಜೀವದ ಹಂಗು ತೊಎರೆದು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಪತ್ರಕರ್ತರ ಕಾರ್ಯವನ್ನು ಶ್ಲಾಘಿಸಿದರು.
ಸರ್ಕಾರ ಸೇವಾ ಭತ್ಯೆ ಹಾಗೂ ವೇತನ ಸೌಲಭ್ಯಗಳನ್ನು ನೀಡದೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಅವರು ಸರ್ಕಾರದ ನಡೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು
ಈ ವೇಳೆ ಮಾದ್ಯಮ ಮಿತ್ರರಿಗೆ ಉಚಿತವಾಗಿ ಔಷಧಿಗಳನ್ನು ವಿತರಿಸಿದರು. ನಗರದ ಆಡಳಿತ ಸೌಧದ ದಂಡಾಧಿಕಾರಿ ಗಳಿಗೆ. ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸಹ ಕಿಟ್ ನೀಡಲಾಯಿತು. ಸಹ ಸಿಬ್ಬಂದಿ ಮಲ್ಲಿಕಾ ಹಾಗೂ ಪತ್ರಕರ್ತ ವೈಭವ ಶಿವಣ್ಣ ಇತರರು ಉಪಸ್ಥಿತರಿದ್ದರು ಪತ್ರಕರ್ತ ಸಂಘದ ಅಧ್ಯಕ್ಷ ಹಾಗು ಸದಸ್ಯರುಗಳು ಹಾಜರಿದ್ದರು

Girl in a jacket
error: Content is protected !!