ಚಳ್ಳಕೆರೆ, ಫೆ,20:ಸರ್ವಜ್ಞ ತನ್ನ ತ್ರಿಪದಿ ಎಂಬ ಮೂರು ಸಾಲುಗಳ ಮೂಲಕ ಬದುಕಿನ ಒಳಿತ ಕೆಡುಕುಗಳ ಬಗ್ಗೆ ಮನಮುಟ್ಟುವಂತೆ ಹೇಳಿರುವುದನ್ನು ಮುನ್ನೂರು ಸಾಲುಗಳಲ್ಲಿ ಹೇಳಬಹುದಾದ–ಬರೆಯಬಹುದಾದ ಅರ್ಥವನ್ನು ತುಂಬಿದ್ದಾರೆ ಎಂದು ತಹಶೀಲ್ದರ್ ಎನ್. ರಘುಮೂರ್ತಿ ಹೇಳಿದರು .
ನಗರದ ತಾಲ್ಲೂಕು ಕಚೇರಿಯ ಸಭಾಗಂಣದಲ್ಲಿ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತ ಮತ್ತು ಕುಂಬಾರ ಸಮುದಾಯದ ವತಿಯಿಂದ ಹಮ್ಮಿಕೊಂಡಿದ್ದ ತ್ರಿಪದಿ ಕವಿ ಸರ್ವಜ್ಞ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ವಜ್ಞ ರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲುಸುವುದರ ಮೂಲಕ ಕಾರ್ಯಕ್ರಮ ಚಾಲನೆ ನೀಡಿ ಅವರು ಮಾತನಾಡಿ ನಂಬಿದ ಮೌಲ್ಯ ಹಾಗೂ ಸತ್ಯಗಳನ್ನು ಜಗದ ಮುಂದೆ ಇಡಲು ಎಂದೂ ಹಿಂದೆ–ಮುಂದೆ ನೋಡಲಿಲ್ಲ. ಸತ್ಯದ ಸಾಕ್ಷಾತ್ಕಾರಕ್ಕಾಗಿ ಸಮಾಜದ ಎಲ್ಲಾ ಮೌಢ್ಯಗಳನ್ನು, ಧರ್ಮದ ಪ್ರಖಂಡ ರೂಪಗಳನ್ನು ಹಾಗು ಜಡ್ಡುಗಟ್ಟಿದ ಮೌಲ್ಯಗಳನ್ನು ಪ್ರಶ್ನಿಸುತ್ತಿದ್ದ. ಇವರ ಚಿಂತನೆಗಳ ಹರಹು ಕೂಡಾ ತುಂಬಾ ವಿಸ್ತಾರವಾದುದು, ಅಂತರಂಗದ ಅಭಿವ್ಯಕ್ತಿಯಿಂದ ಹಿಡಿದು, ಸಾಮಾಜಿಕ ವಲಯದ ಎಲ್ಲಾ ಮಗ್ಗಲುಗಳನ್ನು ಆತ ಲಕ್ಷಿಸಿದ್ದಾನೆ. ಸಾಮಾಜಿಕ, ಆರ್ಥಿಕ ಧಾರ್ಮಿಕ ಸಮಸ್ಯೆಗಳನ್ನು ಕುರಿತು ಚಿಂತಿಸಿರುವ ಪರಿ ವಿಶಿಷ್ಟವಾದುದು ಎಂದು ಅಭಿಪ್ರಾಯ ಪಟ್ಟರು.
ಕೇಳಸಮುದಾಯದ ಪ್ರಸಿದ್ದ ವ್ಯಕ್ತಿಗಳು ಜೀವನ ಚರಿತ್ರೆಗಳು ಪುರಾಣಗಳಿಂದ ತುಂಬಿಕೊಳ್ಳುತ್ತವೆ. ಇಂಥ ಕೆಲಸ ನಡೆದಾಗ ಅಲ್ಲಿ ಸತ್ಯ–ಮಿಥ್ಯಗಳ ಪ್ರಶ್ನೆಯನ್ನು ಕೇಳಲಾಗದು ಅಥವಾ ಭಿನ್ನವಾಗಿ ಕೇಳಬೇಕಾಗುತ್ತದೆ. ಇಂತಹ ಕಪೋಕಲ್ಪಿತ ಇತಿಹಾಸವನ್ನು ಮತ್ತು ಪುರಾಣವನ್ನು ಸರ್ವಜ್ಞರಮೇಲೆ ಸೃಷ್ಟಿಸಲಾಗಿದೆ. ಇದರಲ್ಲಿ ನಡೆದದ್ದೆಷ್ಟು, ಕಲ್ಪಿಸಿಕೊಂಡದ್ದೆಷ್ಟು ಎಂದು ಪ್ರಶ್ನಿಸುವುದು ಸಾಧ್ಯವಾಗಲಾರದೊಷ್ಟು ಸೃಷ್ಟಿಸಲಾಗಿದೆ. ಕಪೊಕಲ್ಪಿತದ ಬಹುಪಾಲು ಬರಹಗಳು ಎಲ್ಲರಿಗೂ ಪರಿಚಿತವಾಗುವಂತೆ ಒಂದು ಕಥಾನಕವನ್ನು ಸ್ವಲ್ಪ ಹೆಚ್ಚು ವ್ಯವಸ್ಥಿತವಾಗಿ ಹೆಣೆಯಲಾಗಿದೆ. ಇವು ಎಷ್ಟು ಪ್ರಭಾವಶಾಲಿಯಾಗಿವೆಯೆಂದರೆ ಅವುಗಳನ್ನು ಭೌತಿಕ ಸತ್ಯಗಳೆಂದೇ ಗುರುತಿಸಬೇಕಾಗುತ್ತದೆ ಅಥವಾ ಒಪ್ಪಿಕೊಳ್ಳಬೇಕಾಗುತ್ತದೆ ಈ ಸಮುದಾಯವು ಶಾಸಕರೊಂದಿಗೆ ಮಾತನಾಡ ಅವರ ಸಮುದಾಯ ಭವನಕ್ಕೆ ನೀಡಲಾಗುವುದು ಎಂದರು.
ಕುಂಬೇಶ್ವರ ಸಂಘದ ಅಧ್ಯಕ್ಷ ಮುಷ್ಟೂರಪ್ಪ ಮಾತನಾಡಿ
ಕುಂಬಾರ ಜನಾಂಗವು ಅತೀ ಸಣ್ಣ ಸಮಾಜವಾಗಿದೆ. ಸರಕಾರದಿಂದ ಸಾಕಷ್ಟು ಸೌಲಭ್ಯಗಳಿಂದ ವಂಚಿತವಾಗಿದೆ. ಆದ್ದರಿಂದ ಕಳೆದ ಸುಮಾರು ವರ್ಷಗಳಿಂದ ಸರ್ವಜ್ಞ ಜಯಂತಿ ಮೂಲಕ ಕುಂಬಾರ ಸಂಘಟನೆ ಬಲ ಪಡಿಸುವ ಪ್ರಯತ್ನ ಮಾಡಲಾಗುತ್ತಿದೆ.ಕುಂಬಾರರ ಸಮಾಜದ ಕುಲ ಕಸುಬಾದ ಕುಂಬಾರಿಕೆಯೂ ಆಧುನಿಕ ಭರಾಟೆಯಲ್ಲಿಮಾಯವಾಗುತ್ತಿದೆ. ಹೀಗಾಗಿ ಕುಂಬಾರ ವೃತ್ತಿ ಮಾಡುವವರು ಕೂಲಿ, ಕೃಷಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ಸಂಘಟನೆ ಮೂಲಕ ಸಮಾಜದವರಿಗೆ ಕ್ಷೇಮಾಭಿವೃದ್ಧಿ ಸಂಘವನ್ನು ರಚನೆ ಮಾಡಲಾಗುತ್ತಿದೆ ಎಂದರು.ಸಮುದಾಯ ಮಕ್ಕಳ ಶಿಕ್ಷಣಕ್ಕಾಗಿ ಹಾಸ್ಟೆಲ್ ವ್ಯವಸ್ಥೆಯಾಗಬೇಕು,ನಿವೇಶನ ವ್ಯವಸ್ಥೆ ಯಾಗಬೇಕು ಸಮುದಾಯಕ್ಕೆ ಮೂಲಸೌಕರ್ಯ ಈಗ ಇರುವ ಸಮುದಾಯ ಭವನದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು,ಶೌಚಾಲಯ ವಾಗಬೇಕು ಎಂದು ನಗರಸಭೆ ಅಧ್ಯಕ್ಷರಿಗೆ ಮನವಿ ಮಾಡಿಕೊಂಡರು.
ಈ ಸಮಾರಂಭದಲ್ಲಿತಿಪ್ಪೇಸ್ವಾಮಿ ,ಮಾಜಿ ಸದಸ್ಯ ಹಾಗೂ ವಿಶ್ವಕರ್ಮ ಸಂಘದ ರಾಜ್ಯಾಧ್ಯಕ್ಷ ಆರ್.ಪ್ರಸನ್ನಕುಮಾರ್ ನಗರಸಭೆ ಅಧ್ಯಕ್ಷೆ ಸುಮಕ್ಕ ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೃಷ್ಣ ಪ್ಪ, ಕುಂಬಾರ ಸಮುದಾಯದ ಮುಖಂಡರು ಇದ್ಷರು.