ಚಿತ್ರದುರ್ಗ,ಮಾ,10:ಇಲ್ಲಿನ ಚಿತ್ರ ಡಾನ್ ಬೋಸ್ಕೋ ಸಂಸ್ಥೆಯ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀಮತಿ ಸುಧಾ ಅವರು ಮಹಿಳೆಯರು ಸ್ವಾವಲಂಬನೆ ಮತ್ತು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು ಆಗ ಮಾತ್ರ ಸುಸ್ಥಿರ ಸಮಾಜ ಕಟ್ಟಬಹುದೆಂದು ಹೇಳಿದರು.
ಅಭಿವೃದ್ಧಿಯ ಕಾಲಘಟ್ಟದಲ್ಲಿ ಮಹಿಳೆಯರು ಶಿಕ್ಷಣ ಮತ್ತು ಸಾಮಾಜಿಕವಾಗಿ ಚಲನಶೀಲರಾಗಬೇಕು ಆಗ ಮಾತ್ರ ಅತ್ಯುತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಡಾನ್ ಬೋಸ್ಕೋ ಸಂಸ್ಥೆಯ ನಿರ್ದೇಶಕರಾದ ಫಾದರ್ ಸಜ್ಜಿ ಜಾರ್ಜ್ ಅವರು ಮಾತನಾಡಿ ಮಹಿಳೆಯರು ಉತ್ತಮ ಬದುಕು ರೂಪಿಸಕೊಳ್ಳಬೇಕಾದರೆ ಕೌಶಲ್ಯ ಆಧಾರಿತ ತರಬೇತಿ ಪಡೆದುಕೊಂಡು ಆರ್ಥಿಕ ಸ್ವಾವಲಂಬನೆ ಹೊಂದಿದರೆ ಮಹಿಳೆಯರನ್ನು ಸಮಾಜ ಗೌರವಿಸುತ್ತದೆ ಎಂದರು.
ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆ ಅಧ್ಯಕ್ಷರು ಹಾಗೂ ಹಿರಿಯ ಪತ್ರಕರ್ತರಾದ ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿ ಮಹಿಳೆಯರಿಗೆ ಭಾರತದ ಸಂವಿಧಾನದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರು ಸಮಾನತೆಯನ್ನು ಕಲ್ಪಿಸಿಕೊಟ್ಟಿದ್ದು.
ಸಂವಿಧಾನದ ಆಧಾರದ ಮೇಲೆಯೇ ಮಹಿಳೆಯರು ಶಿಕ್ಷಣ,ಉದ್ಯೋಗ,
ಆರ್ಥಿಕ ವಲಯದಲ್ಲಿ ಅಪರಿಮಿತವಾಗಿ ಬೆಳೆಯಲೂ ಕಾರಣವಾಗಿದ್ದು ಪ್ರತಿಯೊಬ್ಬ ಮಹಿಳೆಯು ಅಂಬೇಡ್ಕರ್ ರವರನ್ನು ಸ್ಮರಿಸಬೇಕಾಗಿದೆ ಎಂದರು.ಪ್ರತಿ ಹಂತದಲ್ಲೂ ಮಹಿಳೆಯರು ಸ್ವಾವಲಂಬನೆ ಬದುಕು ಕಟ್ಟಿಕೊಂಡರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಹಾಗೆಯೇ ಮಹಿಳೆಯರಿಗೆ ಸಮಾನತೆ ಕಲ್ಪಿಸಬೇಕಾದ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದು ನುಡಿದರು.
ಪತ್ರಕರ್ತ ಮಾಲತೇಶ್ ಅರಸ್ ಮಾತನಾಡಿ ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತೀರುವ ಯುದ್ಧದಲ್ಲಿ ಮಹಿಳೆಯರು ಹೆಗಲ ಮೇಲೆ ಗನ್ ಹೊತ್ತು ರಣರಂಗದಲ್ಲಿ ಹೋರಾಟಕ್ಕೆ ನಿಂತಿರುವುದನ್ನು ನೋಡಿದರೆ ಮಹಿಳೆ ಯಾರಿಗೇನು ಕಡಿಮೆ ಎಂಬಂತೆ ಇದೇ ಅಂದರು.
ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಚಿತ್ರ ಡಾನ್ ಬೋಸ್ಕೋ ಸಂಸ್ಥೆಯ ನಿರ್ದೇಶಕರಾದ ಫಾದರ್ ಜೋಸೆಫ್ ದಂಡಾವತಿ, ಶ್ರೀಮತಿ ಮಹಂತಮ್ಮ,ಶ್ರೀಮತಿ ವೀಣಾ ವಿಜಯ್, ಚಿತ್ರ ಡಾನ್ ಬೋಸ್ಕೋ ಸಂಸ್ಥೆಯ ಪರವಾಗಿ ಸುನಂದಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು
ಇದೇ ಸಂದರ್ಭದಲ್ಲಿ ಮೂರು ಜನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮತ್ತು ಗೌರವನ್ವಿತ ಮಹಿಳಾ ಅಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು