ಕ್ಲೋಜರ್ ಕಾಮಗಾರಿ ಟೆಂಡರ್ ರದ್ದುಗೊಳಿಸದಿದ್ದರೆ ಧರಣಿ;ಎಚ್ಚರಿಕೆ

Share

ಆಲಮಟ್ಟಿ,ಜೂ,20: ಲಾಲಬಹದ್ದೂರಶಾಸ್ತ್ರಿ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ ಕರೆಯಲಾದ ಕ್ಲೋಜರ್ ಮತ್ತು ವಿಶೇಷ ದುರಸ್ತ ಕಾಮಗಾರಿಗಳ ಟೆಂಡರ್ ರದ್ದುಗೊಳಿಸಬೇಕು. ಇಲ್ಲದಿದ್ದರೆ ಕೊವಿಡ್-೧೯ನಿಯಮ ಸಡಿಲಿಕೆಯಾದ ನಂತರ ಅನಿರ್ಧಿಷ್ಟ ಧರಣಿ ಉಪವಾಸ ಸತ್ಯಾಗ್ರಹ ನಡೆಸಲಾಗುವದು ಎಂದು ಅಖಂಡ ಕರ್ನಾಟಕ ರೈತಸಂಘದ ಜಿಲ್ಲಾ ಪ್ರಧಾನಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು.
ಆಲಮಟ್ಟಿಯಲ್ಲಿರುವ ಕೆಬಿಜೆನ್ನೆಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಅಖಂಡಕರ್ನಾಟಕ ರೈತಸಂಘದ ಜಿಲ್ಲಾ ಘಟಕದಿಂದ ಮನವಿ ಸಲ್ಲಿಸಿ ಮಾತನಾಡಿದ ಅವರು ಕ್ಲೋಜರ್ ಹಾಗೂ ವಿಶೇಷ ದುರಸ್ತಿ ಕಾಮಗಾರಿಗಳನ್ನು ಬೇಸಿಗೆಯಲ್ಲಿ ಟೆಂಡರ್ ಕರೆದು ಮಳೆಗಾಲಕ್ಕೂ ಮುಂಚೆ ಕಾಮಗಾರಿಗಳನ್ನು ಮುಗಿಸಿ ಜೂನ್-ಜುಲೈ ಅವಧಿಯಲ್ಲಿ ಕಾಲುವೆಗಳ ಮೂಲಕ ರೈತರ ಜಮೀನಿಗೆ ನೀರು ಹರಿಸಲಾಗುತ್ತಿತ್ತು. ಇತ್ತೀಚೆಗೆ ಕರೆಯಲಾದ ಟೆಂಡರ್ ಗ ಳಲ್ಲಿ ಸಣ್ಣಪುಟ್ಟ ಕಾಮಗಾರಿಗಳನ್ನು ಒಂದುಗೂಡಿಸಿ ಮೂರ್ನಾಲ್ಕು ನೂರು ಕಿ.ಮೀ.ಗಳವರೆಗೆ ಒಬ್ಬರೇ ಗುತ್ತಿಗೆದಾರರಿಗೆ ನೀಡುವದರಿಂದ ೩೦ದಿನಗಳಲ್ಲಿ ಇಷ್ಟೊಮತ್ತಿತರಿದರಿ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಕೆಲ ವಿಭಾಗಗಳಲ್ಲಿ ಸರ್ಕಾರ ನಿಗದಿಪಡಿಸಿದ ಮೊತ್ತದ ಶೇ.೫೦ಕ್ಕಿಂತಲೂ ಕಡಿಮೆ ದರದಲ್ಲಿ ಪಡೆದಿರುವದು ಗುಣಮಟ್ಟದ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಹೀಗೆ ಹಲವಾರು ಗೊಂದಲಗಳಿವೆ ಆದ್ದರಿಂದ ಕ್ಲೋಜರ ಮತ್ತು ಸ್ಪೇಶಲ್ ದುರಸ್ಥಿ ಕಾಮಗಾರಿಗಳ ಟೆಂಡರ್ ರದ್ದುಗೊಳಿಸಿ ಕೋವಿಡ್ ನಿರ್ಮೂಲನೆಗೆ ಹಣ ಬಳಸಿಕೊಳ್ಳಬೇಕು ಎಂದು ಹೇಳಿದರು.
ಪ್ರತಿ ಬಾರಿಯೂ ಕಾಲುವೆಗಳ ನೀರು ನಿರ್ವಹಣೆಗೆ ಟೆಂಡರ ನೀಡಲಾಗುತ್ತಿದೆ, ಕಳೆದ ಬಾರಿಯೂ ನೀಡಲಾಗಿತ್ತು, ಗುತ್ತಿಗೆದಾರರು ದಿನದ ೨೪ಗಂ.ಗಳ ಕಾಲ ಅಧಿಕಾರಿಗಳ ನಿರ್ದೇಶನದಂತೆ ಕಾಲುವೆಯಲ್ಲಿ ನೀರು ಸರಾಗವಾಗಿ ಹರಿದು ರೈತರ ಜಮೀನು ತಲುಪಲು ಕಂಟಿಗಳ ತೆರವು ಸೇರಿದಂತೆ ವಿವಿಧ ಕಾಮಗಾರಿಗಳನ್ನು ನೆರವೇರಿಸುತ್ತಾರೆ. ಆದ್ದರಿಂದ ಮಳೆಗಾಲದಲ್ಲಿ ಕ್ಲೋಜರ್ ಕಾಮಗಾರಿ ನಡೆಸದೇ ಅಂಥ ಗುತ್ತಿಗೆದಾರರನ್ನು ಬಳಸಿಕೊಂಡು ಈ ಬಾರಿ ರೈತರ ಜಮೀನುಗಳಿಗೆ ನೀರು ತಲುಪಿಸುವ ವ್ಯವಸ್ಥೆ ಮಾಡಬೇಕು. ಈಗ ಮಾಡಲು ಹೊರಟಿರುವ ಕಾಮಗಾರಿಗಳು ಗುಣಮಟ್ಟದ್ದಾಗಲು ಸಾಧ್ಯವಿಲ್ಲ. ಈಗ ಕರೆಯಲಾಗಿರುವ ಟೆಂಡರುಗಳನ್ನು ರದ್ದುಪಡಿಸಬೇಕು ಇಲ್ಲದಿದ್ದರೆ ಕೆಬಿಜೆನ್ನೆಎಲ್ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯ ಮುಂದೆ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮನವಿಯನ್ನು ಕಚೇರಿಯ ಆಡಳಿತಾಧಿಕಾರಿ ಎಸ್.ವಿ.ಜಹಗೀರದಾರ ಸ್ವೀಕರಿಸಿ ಮಾತನಾಡಿದ ಅವರು ತಮ್ಮ ಮನವಿಯನ್ನು ವ್ಯವಸ್ಥಾಪಕ ನಿರ್ದೇಶಕರಿಗೆ ತಲುಪಿಸಿ ಅವರಿಂದ ಬಂದ ಸಂದೇಶವನ್ನು ನಿಮಗೆ ತಲುಪಿಸಲಾಗುವದು ಎಂದರು.
ಜಿಲ್ಲಾಸAಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ, ಈರಣ್ಣ ದೇವರಗುಡಿ, ಸೋಮನಗೌಡ ಪಾಟೀಲ, ದಾವಲಸಾಬ ನದಾಫ, ಚಂದ್ರಾಮ ತೆಗ್ಗಿ, ಚನ್ನಬಸಪ್ಪ ಸಿಂಧೂರ, ಮಲ್ಲಪ್ಪ ಮಾಡ್ಯಾಳ, ಮಲ್ಲಿಕಾರ್ಜುನ ಗವಿಮಠ, ರಾಜೇಸಾಬ ವಾಲಿಕಾರ, ಶೇಖಪ್ಪ ಬಣವಿ ಮತ್ತಿತರು ಇದ್ದರು.

Girl in a jacket
error: Content is protected !!