ಕೋಲಾರ- ಪಂಪ್ ಹೌಸ್ ಗೆ ಬೈರತಿ ಬಸವರಾಜ್ ಚಾಲನೆ
ಕೋಲಾರ,ಜ20-ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಟಮಕ ಬಳಿ ನಿರ್ಮಾಣ ಮಾಡಿರುವ ಡಿ.ದೇವರಾಜ್ ಅರಸ್ ಬಡಾವಣೆಯಲ್ಲಿ ರೂ.98 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ .ಎಸ್. ಸುರೇಶ(ಬೈರತಿ) ಅವರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು
ಬಡಾವಣೆಯಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ನೂತನವಾಗಿ ನಿರ್ಮಿಸಿದ ಪಂಪ್ ಹೌಸ್ ಗೆ ಚಾಲನೆ ನೀಡಿದರು
ಕೋಲಾರ ಕ್ಷೇತ್ರದ ಶಾಸಕರಾದ ಕೂತ್ತೂರು ಮಂಜುನಾಥ, ಕೋಲಾರ ಸಂಸದರಾದ ಎಂ.ಮಲ್ಲೇಶ್ ಬಾಬು,ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್, ಕೆ.ಗೋವಿಂದರಾಜ, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಹನೀಫ್, ರಾಜ್ಯ ಗ್ಯಾರೆಂಟಿ ಯೋಜನೆಗಳ ಜಿಲ್ಲಾಧ್ಯಕ ವೈ.ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವೀ ಸೇರಿದಂತೆ ಇತರರು ಉಪಸ್ಥಿತರಿದ್ದರು
 
                                         
					
										
												
				
 
									 
									