ಆಲಮಟ್ಟಿ,ಅ,08;ವಿದ್ಯಾರ್ಥಿಗಳು ತಂದೆ, ತಾಯಿ, ಕಲಿಸಿದ ಗುರು ಹಾಗೂ ಕಲಿತ ಸಂಸ್ಥೆಯನ್ನು ಮರೆಯದೇ ಗೌರವಿಸುವ ವಿದ್ಯಾರ್ಥಿ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹೇಳಿದರು.
ಶುಕ್ರವಾರ, ಸ್ಥಳೀಯ ಮಂಜಪ್ಪ ಹರ್ಡೇಕರ ಸ್ಮಾರಕ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬದುಕಿನ ಓದಿನ,ಬುನಾದಿ ಪ್ರೌಢ ಹಂತ, ಈ ಹಂತದಲ್ಲಿ
ಜವಾಬ್ದಾರಿಯುತ ಓದಿನ ಜತೆ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು, ಹುಡುಗಾಟದ ಜತೆಗೂ ಗಂಭೀರ ಅಧ್ಯಯನವೂ ಅಗತ್ಯ ಎಂದರು. ಓದಿನ ಜತೆಗೆ ಕ್ರೀಡೆಯತ್ತಲೂ ಗಮನಹರಿಸಬೇಕು, ಅಡಗಿರುವ ಸುಪ್ತ ಕಲೆಯಲ್ಲಿಯೇ ಪರಿಣಿತರಾಗಲು ಪ್ರಯತ್ನಿಸಬೇಕು ಎಂದರು.
ಹುಡುಗಾಟದ ಈ ವಯಸ್ಸು, ಕಾಲೇಜ್ ಹಾಗೂ ಮುಂದಿನ ಬದುಕಿನಲ್ಲಿ ಸಾಧ್ಯವಿಲ್ಲ, ಅದಕ್ಕಾಗಿ ವಿದ್ಯಾರ್ಥಿಗಳ ಮಧ್ಯೆ ಪರಸ್ಪರ ಗೌರವಿಸುವ, ಪ್ರೀತಿಸುವ ಭಾವನೆಗಳನ್ನು ಬೆಳೆಸಿಕೊಳ್ಳಬೇಕು ಎಂಬುದನ್ನು ವಿವಿಧ ಉದಾಹರಣೆಗಳ ಮೂಲಕ ಚಂದ್ರಶೇಖರ ವಿವರಿಸಿದರು.ಕೇವಲ ಅಂಕ ಗಳಿಸುವುದತ್ತ ಗಮನ ಹರಿಸುವುದರ ಬದಲು ಸೃಜನಾತ್ಮಕ ಕಲೆಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಎಸ್.ಐ.ಗಿಡ್ಡಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು.
ಹನುಮಂತ ಬೇವಿನಕಟ್ಟಿ, ಯು.ಎ. ಬಶೆಟ್ಟಿ, ಹನುಮಂತ ಸಾಳೆ, ಎಲ್.ಸಿ. ಚಲವಾದಿ, ದಾವಲ್ ಕಟ್ಟಿಮನಿ, ಸಲೀಂ ದಡೆದ, ಸಿಂಧನೂರ ತಾಲ್ಲೂಕು ಶಿಕ್ಷಕರ ಸಂಘದ ಮಲ್ಲೇಶ ಕರಿಗಾರ, ಯು.ಎ. ಹಿರೇಮಠ, ಮಹೇಶ ಗಾಳಪ್ಪಗೋಳ, ಎಂ.ಎಚ್.ಬಳಬಟ್ಟಿ, ಗಂಗಾಧರ ಹಿರೇಮಠ, ದೀಪಾ ಚಲ್ಮಿ, ಸಾವಿತ್ರಿ ಸಜ್ಜನ ಇತರರು ಇದ್ದರು.
ಕಲಿತ ಶಾಲೆಯನ್ನು ಗೌರವಿಸಿದರೆ ಬದುಕಲ್ಲಿಯಶಸ್ಸು ಸಾಧ್ಯ
Share