ಆಲಮಟ್ಟಿ, ಆ,09:ಕರ್ನಾಟಕ ರಕ್ಷಣಾವೇದಿಕೆ ಆಲಮಟ್ಟಿ ಘಟಕದವತಿಯಿಂದ ತುಂಬಿದ ಕೃಷ್ಣೆಯ ಹಿನ್ನೀರಿಗೆ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಕಾರ್ಯಕ್ರಮವು ಅಧ್ಯಕ್ಷ ಪತ್ತೆಸಾಬ ಚಾಂದ ನೇತೃತ್ವದಲ್ಲಿ ಸೋಮವಾರ ಜರುಗಿತು.
ಪೂಜಾಕಾರ್ಯವನ್ನು ಗೋಪಾಲ ಧರ್ಮರ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷ ಮತ್ತು ಆಲಮಟ್ಟಿ ಗ್ರಾಮಪಂಚಾಯತ ಅಧ್ಯಕ್ಷ ಮಂಜುನಾಥ ಹಿರೇಮಠ, ಚಂದ್ರಶೇಖರ ಹೆರಕಲ್, ರಸೂಲಸಾಬ ಸಿಂಧೆ, ಬಷೀರ ಮುಲ್ಲಾ, ಯಲಗೂರೇಶ ಮೇಟಿ, ಮಹಿಬೂಬ ಡೊಣೂರ, ರಫೀಕ ಅಥಣಿ, ಶಂಕರ ವಡ್ಡರ, ಸಂತೋಷ ಕನಸೆ, ಗ್ರಾ.ಪಂ.ಸದಸ್ಯ ಬಸವರಾಜ ಬಂಡಿವಡ್ಡರ, ಮಸೂಬಾ ಕಟ್ಟಿಮನಿ, ಹನಮಂತ ಸಾಳೆ, ಗುಂಡು ವಡ್ಡರ, ರಾಘವೇಂದ್ರ ವಡ್ಡರ ಮೊದಲಾದವರಿದ್ದರು.