ಶಿಕಾರಿಪುರ,ಸೆ,೨೭: ಸ್ವಾತಂತ್ರ್ಯದ ಹೋರಾಟದ ಇತಿಹಾಸದಲ್ಲಿ ರೋಮಾಂಚನ ಉಂಟು ಮಾಡುವ ಘಟನೆ ಈಸೂರಿನಲ್ಲಿ ನಡೆದಿದ್ದು ಅದು ಮುಂದಿನ ಯುವ ಪೀಳಿಗೆಗೂ ಪ್ರೇರಣಾದಾಯಕ ಆಗುವಂತದ್ದು ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ತಾಲೂಕಿನ ಈಸೂರು ಗ್ರಾಮದಲ್ಲಿ ಭಾನುವಾರ ನಡೆದ ಸ್ವಾತಂತ್ರ್ಯ ಹೋರಾಟದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಹಾತ್ಮಾ ಗಾಂಧೀಜಿ ಅವರು ನೀಡಿದ ಬ್ರಿಟೀಷರೆ ಭಾರತ ಬಿಟ್ಟು ತೊಲಗಿ ಎನ್ನುವ ಘೋಷಣೆಗೆ ಓಗೊಟ್ಟ ಈಸೂರಿನ ಗ್ರಾಮಸ್ಥರು ತಮ್ಮದು ಸ್ವತಂತ್ರ್ಯ ಗ್ರಾಮ ಎಂದು ಘೋಷಣೆ ಮಾಡಿಕೊಂಡರು, ಕಂದಾಯ ನಿರಾಕರಿಸಿದರು, ತಮ್ಮದೆಯಾದ ಆಡಳಿತ ವ್ಯವಸ್ಥೆ ಮಾಡಿಕೊಂಡರು, ಪೊಲೀಸರ ದಬ್ಬಾಳಿಕೆಗೆ ಹೆದರಿ ಕಾಡುಮೇಡು ಸೇರಿಕೊಂಡು ಜೀವ ಉಳಿಸಿಕೊಂಡರು, ಮನೆಗಳೆಲ್ಲವನ್ನೂ ಲೂಟಿ ಮಾಡಲಾಯಿತು ಇತಿಹಾಸದ ಪುಟ ತಿರುವಿದಾಗ ರೋಮಾಂಚನ ಉಂಟು ಮಾಡುವ ಹಲವು ಘಟನೆ ಇಂದಿನ ಯುವಕರಿಗೆ ಪ್ರೇರಣೆಯಾಗಬೇಕು ದೇಶಕ್ಕಾಗಿ ನಾವೇನು ನೀಡಿದ್ದೇವೆ ಎನ್ನುವ ಜವಾಬ್ದಾರಿ ಬರಬೇಕು ಎಂದರು. ಇಡೀ ದೇಶಕ್ಕೆ ಪ್ರೇರಣೆಯಾಗುವ ಗ್ರಾಮದಲ್ಲಿ ಹುಟ್ಟಿರುವುದೆ ನಮ್ಮ ಪುಣ್ಯ. ಈಸೂರು ಮಾದರಿ ಗ್ರಾಮ ಮಾಡುವುದಕ್ಕಾಗಿ ೧೨ಕೋಟಿ ರೂ. ನೀಡಿದ್ದು ಇದೀಗ ಸ್ಮಾರಕಕ್ಕೆ ೫ಕೋಟಿ ರೂ. ಅನುದಾನ ನೀಡಲಾಗಿದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಗೆ ಮುಂದಾಗುತ್ತೇನೆ. ಸ್ಮಾರಕ ಸದ್ಭಳಕೆ ಆಗಲಿ ಯುವಕರಿಗೆ ಪ್ರೇರಣೆಯಾಗಲಿ ಎಂದರು.
ಇಂದನ, ಕನ್ನಡ ಸಂಸ್ಕೃತಿ ಸಚಿವ ಸುನಿಲ್ಕುಮಾರ್ ಮಾತನಾಡಿ, ಸ್ವತಂತ್ರ್ಯ ಗ್ರಾಮದವೆಂದು ಘೋಷಣೆ ಮಾಡಿಕೊಂಡ ದೇಶದ ಮೊದಲ ಗ್ರಾಮ ಈಸೂರು ಇಲ್ಲಿನ ಹೋರಾಟ ಹಲವು ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ ನೀಡಿದೆ. ರಾಜ್ಯದಲ್ಲಿ ಹಲವು ಸ್ವಾತಂತ್ರ್ಯ ಹೋರಾಟದ ಘಟನೆ ಇತಿಹಾಸದಲ್ಲಿ ದಾಖಲಾಗಿವೆ ಅವುಗಳ ನೆನಪು ಮಾಡಿಕೊಳ್ಳುವ ಕೆಲಸಕ್ಕೆ ಕನ್ನಡ ಸಂಸ್ಕೃತಿ ಇಲಾಖೆ ಕಾರ್ಯಕ್ರಮ ರೂಪಿಸಲು ಉದ್ದೇಶಿಸಿದೆ. ಜನವರಿ ೧೨ ಸ್ವಾಮಿ ವಿವೇಕಾನಂದ ಜನ್ಮದಿನದಿಂದ ಜ.೨೩ ಸುಭಾಶ್ಚಂದ್ರ ಬೋಸ್ ಜನ್ಮದಿನದವರೆಗೆ ರಾಜ್ಯದಲ್ಲಿ ರಥಯಾತ್ರೆ ಆಯೋಜಿಸಲು ಉದ್ದೇಶಿಸಿದೆ. ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾತಂತ್ರ್ಯ ಹೋರಾಟದ ಘಟನೆಗಳಿಂದ ಪ್ರೇರಣೆ ಪಡೆದುಕೊಂಡು ದೇಶಕ್ಕಾಗಿ ತಾವೇನಾದರೂ ಕೊಡುಗೆ ನೀಡುವುದಕ್ಕೆ ಈ ಕಾರ್ಯಕ್ರಮ ಪ್ರೇರಣೆಯಾಗಲಿ ಎನ್ನುವುದು ಇಲಾಖೆ ಉದ್ದೇಶವಾಗಿದೆ ಎಂದು ಹೇಳಿದರು.
ಕೃ.
ಕ್ರೀಡಾ ಸಚಿವ ನಾರಾಯಣಗೌಡ ಮಾತನಾಡಿ, ಖೇಲೋ ಇಂಡಿಯಾ ಮೂಲಕ ಜಿಲ್ಲೆಗೆ ೭೩ಕೋಟಿ ರೂ. ಅನುದಾನ ನೀಡಲಾಗಿದೆ. ಬಿಎಸ್ವೈ ಮಾತಿನ ಮೇಲೆ ನಂಬಿಕೆಯಿಟ್ಟ ಪರಿಣಾಮ ಕೆ.ಆರ್.ಪೇಟೆ ಕ್ಷೇತ್ರಕ್ಕೆ ೧೪೦೦ಕೋಟಿ ರೂ. ನೀರಾವರಿ ಅನುದಾನ ಒದಗಿಸಿದ್ದಾರೆ ಕ್ಷೇತ್ರದ ಅಭಿವೃದ್ಧಿ ಕುರಿತು ಈಗಾಗಲೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಗ್ರಾಮದ ಐವರು ಪ್ರಾಣಾರ್ಪಣೆ ಮಾಡಿದ್ದಾರೆ, ಸಾಕಷ್ಟು ನೋವು ಅನುಭವಿಸಿದ್ದಾರೆ ಇಲ್ಲಿನ ಹೋರಾಟ ನೆನಪಿಸುವಂತ ಸ್ಮಾರಕ ಈಸೂರು ಗ್ರಾಮದಲ್ಲಿ ನಿರ್ಮಾಣವಾಗಬೇಕು, ದೇಶದ ಸ್ವಾತಂತ್ರ್ಯ ಹೋರಾಟ ಬರಹದ ಲೈಬ್ರೆರಿ, ಓಪನ್ ಥೇಟರ್, ಐದು ಸ್ಮಾರಕ ಹೀಗೆ ವಿಭಿನ್ನ ಕಲ್ಪನೆಯಲ್ಲಿ ಸ್ಮಾರಕ ನಿರ್ಮಾಣಗೊಳ್ಳಲಿದೆ ಅದು ಜಿಲ್ಲೆಯ ಪ್ರವಾಸಿ ತಾಣವಾಗಬೇಕು ಇಲ್ಲಿಗೆ ಆಗಮಿಸುವ ಜನರಿಗೆ ಹೋರಾಟದ ಜ್ಞಾನ ನೀಡಬೇಕು ಎನ್ನುವ ಆಶಯ ಇದೆ ಎಂದರು.
ಸಭೆ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಹರಿಯಾಣ ರಾಷ್ಟ್ರೀಯ ಆಹಾರ ವಿವಿ ಉಪಕುಲಪತಿ ವಾಸುದೇವ, ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡ, ಆಯನೂರು ಮಂಜುನಾಥ್, ಆರ್ಯವೈಶ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಡಿ.ಎಸ್.ಅರುಣ್, ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಗ್ರಾ.ಪಂ. ಅಧ್ಯಕ್ಷೆ ರೇಣುಕಮ್ಮ ಉಪಾಧ್ಯಕ್ಷ ನಾಗರಾಜಸ್ವಾಮಿ, ಧರ್ಮದರ್ಶಿ ಸಮಿತಿ ಅಧ್ಯಕ್ಷ ಜೆ.ಧನಂಜಯಪ್ಪ, ಗ್ರಾಮದ ಪಶುವೈದ್ಯ ರವಿ, ಶಿವಪ್ಪಯ್ಯ, ನೂರಾರು ಗ್ರಾಮಸ್ಥರು ಇದ್ದರು.