ಅಂದದೂರಿನಲ್ಲಿ ಅಲoಕೃತ ಕುಂಭಮೇಳ ಶ್ರೀ ಬೀರಲಿಂಗೇಶ್ವರನ ಗದ್ದುಗೆ ಕಳಸ ಪ್ರಾಣ ಪ್ರತಿಷ್ಠಾಪನೆ
by-ಕೆಂಧೂಳಿ
ಚಿತ್ರದುರ್ಗ ಮ 1ಮಾಯಕೊಂಡ ಸಮೀಪದ
ಅಂದನೂರಿನಲ್ಲಿ ಧಾರ್ಮಿಕವಾಗಿ ಹಲವಾರು ನಾಡಿನ ಖ್ಯಾತ ಮಠಾಧಿಪತಿಗಳ ಸಮ್ಮುಖದಲ್ಲಿಶ್ರೀ ಬೀರಲಿಂಗೇಶ್ವರ ದೇವರ ಗದ್ದುಗೆ ಮತ್ತು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ವೈಭವ ಭಿನ್ನವಾಗಿ ಜರುಗಿತು.
ನಡೆದಾಡುವ ಜಾನಪದ, ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಯುಗ ಧರ್ಮ ರಾಮಣ್ಣನವರ ಜಾನಪದ ಹಾಡುಗಳು, ರಾಷ್ಟ್ರ ಪ್ರಶಸ್ತಿ ವಿಜೇತ ಗಾಯಕ ಹನುಮಂತ ನಾಯಕ್, ಚಿರಡೋಣಿಯ ಅಂದಹಾಡುಗಾರ, ರುದ್ರೇಶ್, ಹಲವಾರು ಜನಪದ ಹಾಡುಗಳು, ಜನಜಾಗೃತಿ ಮೂಡಿಸುವ ಹಾಡುಗಳನ್ನು ನೆರೆದ ಸುತ್ತಮುತ್ತಲಿನ ಗ್ರಾಮೀಣ ಪರಿಸರ ನೋಡುಗರ ಕಣ್ಮನ ಸೆಳೆಯಿತು.

Advatisement
ಸಿಂಗರಿಸಿಕೊಂಡ ಹೆಂಗ ನೂರಾರು ಹೆಂಗಳಿಯರು ವಿಶೇಷ ಅಲಂಕೃತ ತಲೆ ಮೇಲೆ ಹೊತ್ತು ದೊಳ್ಳುಗುಣಿತ, ಹಲಗೆ ಇನ್ನಿತರ ವಾದ್ಯ ಸಮೇತ ಇಡೀ ಗ್ರಾಮದ ಸುತ್ತ ಮೆರವಣಿಗೆ ನಡೆಸಿ, ದೂರದ ಊರುಗಳಿಂದ ಬಂದ ಕೊಗ್ಗನೂರು ನಲ್ಕುಂದ ತಣಿಗೆರೆ, ಮಲ್ಲಾಡಿಹಳ್ಳಿ, ಹೊಳಲ್ಕೆರೆ, ಗುಡಿಕಟ್ಟಿನ ಬೀರ ದೇವರುಗಳ ಮೆರವಣಿಗೆಯಲ್ಲಿ ದ್ದವು,
ಶ್ರೀ ಶ್ರೀ ಕಾಗಿನೆಲೆ ಹೊಸದುರ್ಗ ಶಾಖ ಮಠದ
ಶ್ರೀ ಈಶ್ವರಾನಂದ ಪುರಿ ಸ್ವಾಮಿಗಳ ಸಾನಿಧ್ಯದಲ್ಲಿ ಇಂತಹ ಹಬ್ಬ ಹರಿದಿನಗಳನ್ನ;ಗ್ರಾಮದ ಎಲ್ಲರೂ ಒಗ್ಗೂಡಿ
ಸೌಹಾರ್ದತೆ ಪ್ರೀತಿ, ಸಹೋದರರಿಂದ ನೆರೆವರಿಸಿದಾಗ ಯಾವುದೇ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ,
ಧಾರ್ಮಿಕ ದೇವರುಗಳು ಕೇವಲ ಒಂದು ಜಾತಿಗೆ ಸೀಮಿತವಾಗಬಾರದು, ಹಾಲುಮತದ ಸಂಸ್ಕೃತಿ, ಆಚಾರಗಳು ಬಹು ಇಂದಿನ ಮಾನವ ಸಂಸ್ಕೃತಿಯನ್ನು ಕುರುಹುಗಳನ್ನ ನೆನಪಿಸುತ್ತವೆ.ಕನಕದಾಸರ ಆಶಯದಂತೆ ಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯ ನೀನಾದರೂ ಬಲ್ಲಿರಾ
ಸೌಹಾರ್ದ ವಿಚಾರವನ್ನು
ಮಾನವ ಪ್ರೀತಿಯನ್ನು ಹಂಚಿದ ಕನಕದಾಸರು, ಶ್ರೀ ವಾಲ್ಮೀಕಿ, ಬಸವಣ್ಣ, ವಿಶ್ವ ಬಂಧು ಬಂಧು ಮರುಳಸಿ ದ್ದರು ಮಾನವ ಕುಲಕ್ಕಾಗಿ ಶ್ರಮಿಸಿದರು, ಅವರ ಜೀವನ ಆದರ್ಶಗಳು ನಮಗೆಲ್ಲ ದಾರಿದೀಪವಾಗಬೇಕೆಂದು ಆಶಿಸಿದರು,
ಈ ಸಂದರ್ಭದಲ್ಲಿ ಹೆಬ್ಬಾಳು ಮಠದ ಶ್ರೀ ರುದ್ರ ಮಹಾಂತೇಶ ಸ್ವಾಮಿಗಳು, ಭಗಿರಥ ಪೀಠದ ಪುರುಷೋತ್ತಮಾನಂದ ಶ್ರೀಗಳು , ಚಿತ್ರದುರ್ಗದ ಶ್ರೀ ಬಸವ ಪ್ರಭು ಸ್ವಾಮಿಗಳು,
ಆಶೀರ್ವಚನ ನೀಡಿದರು.ವೇದಿಕೆಯಲ್ಲಿ ಅತಿಥಿಗಳಾಗಿ ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ, ಮಾಜಿ ಸಚಿವ ಶಾಸಕರು ಆದ ಎಚ್ ಆಂಜನೇಯ, ಮಾತನಾಡಿದರು.
ಚಿತ್ರದುರ್ಗ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಮ್ ಗಂಗಾಧರಪ್ಪ, ಹೊಳಲ್ಕೆರೆ ಮಾಜಿ ಪುರಸಭಾ ಅಧ್ಯಕ್ಷ ಬಿಬಿ ರುದ್ರಪ್ಪ, ಹೊಳಲ್ಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ, ಚಿತ್ರದುರ್ಗ ಜಿಲ್ಲಾ ಪಂಚಾಯತ್ ಅಧ್ಯಕ್ಷ ಗಿರಿಜಮ್ಮ ಬಸವರಾಜಪ್ಪ,ಅಂದನೂರು ಗ್ರಾಮ ಪಂಚಾಯತ್ ಸದಸ್ಯರುಗಳಾದ ಸದಸ್ಯರುಗಳಾದ ಸಂತೋಷ್, ಭಾರತಿ ಶಿವಮೂರ್ತಿ, ಶ್ರೀಮತಿ ಸಾಕಮ್ಮ ರಾಜಪ್ಪ, ಮುರುಡಪ್ಪ,ನಾಗರಾಜಪ್ಪ ರಾಜ್ಯ ಮಾಧ್ಯಮ ರತ್ನ ಪ್ರಶಸ್ತಿ ಪುರಸ್ಕೃತ ಪುರಂದರ ಲೋಕಿಕೆರೆ,ಸೇರಿದಂತೆ ಸ್ಥಳೀಯ ಅಂದಲನೂರು ಗ್ರಾಮದ ಹಿರಿಯರು ಮುಖಂಡರುಗಳು ಬೀರಪ್ಪ ಗುಡಿ ಕಟ್ಟಿನ ಬಳಗಸ್ತರು ಸಾವಿರಾರು ಜನ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು.