ಚಿತ್ರದುರ್ಗ, ಏ,20-ಸುಪ್ರೀಂ ಕೋರ್ಟ್ ಆಗಸ್ಟ್-೦೫, ೨೦೨೪ ರಂದು ಆದೇಶವೊಂದನ್ನು ನೀಡಿ ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಗೆ ನಿಖರ ದತ್ತಾಂಶ ಆಧಾರದ ಮೇಲೆ ಮೀಸಲಾತಿ ಜಾರಿ ಮಾಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂಬ ಆದೇಶವೊಂದನ್ನು ನೀಡಿತ್ತು. ಅದರನ್ವಯ ರಾಜ್ಯ ಸರ್ಕಾರದ ಮೇಲೆ ತೀವ್ರ ಒತ್ತಡ ತರುವಂತಹ ಪ್ರಯತ್ನಗಳು ನಡೆಯುತ್ತಲೇ ಇದೆ. ಈ ಮಧ್ಯೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್‌ರವರ ನೇತೃತ್ವದಲ್ಲಿ ಆಯೋಗವೊಂದನ್ನು ರಚನೆ ಮಾಡಿರುವ ರಾಜ್ಯ ಸರ್ಕಾರ ಜಾತಿವಾರು ಅಂಕಿ-ಅಂಶಗಳನ್ನು ಸಂಗ್ರಹಿಸಿ (ದತ್ತಾಂಶ) ಒಳ ಮೀಸಲಾತಿಗೆ ಶಿಫಾರಸ್ಸು ಮಾಡಿದ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿ ಆಗಿತ್ತು. ಆ ಹಿನ್ನೆಲೆಯಲ್ಲಿ ಆಯೋಗದ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್‌ರವರು ಮಧ್ಯಂತರ ವರದಿಯೊಂದನ್ನು ನೀಡಿ ಜಾತಿವಾರು ಸಮೀಕ್ಷೆ ನಡೆಸಲು ಮತ್ತಷ್ಟು ಕಾಲವಕಾಶದ ಅಗತ್ಯವಿದ್ದು, ಪ್ರತಿಯೊಬ್ಬರು ತಮ್ಮ ತಮ್ಮ ಜಾತಿಗಳ ಮಾಹಿತಿ ನೀಡುವಂತೆ ಸಲಹೆ ನೀಡಿದ್ದಾರೆ.
ಆದ್ದರಿಂದ ಪರಿಶಿಷ್ಟ ಜಾತಿಯ ೯೯ ಜಾತಿಗಳ ಒಕ್ಕೂಟವಾಗಿರುವ ಮೀಸಲಾತಿ ಸಂರಕ್ಷಣ ಒಕ್ಕೂಟದ ಅಡಿಯಲ್ಲಿ ಬರುವ ಎಲ್ಲಾ ಜಾತಿಗಳು ನಿಖರವಾದ ಅಂಕಿ-ಅಂಶಗಳನ್ನು (ದತ್ತಾಂಶ) ನೀಡಲು ಸನ್ನಧ್ದರಾಗಬೇಕೆಂದು ಭವಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಪರಿಶಿಷ್ಟ ಜಾತಿಯ ೯೯ ಜನಾಂಗಗಳಿಗೆ ಕರೆನೀಡಿದರು.
ಪರಿಶಿಷ್ಟ ಜಾತಿಯೊಳಗೆ ಒಳ ಮೀಸಲಾತಿಗಾಗಿ ಒತ್ತಾಯಿಸಿ ಕಳೆದ ೩ ದಶಕಗಳಿಂದ ಒತ್ತಡದ ಹೋರಾಟ ನಡೆಯುತ್ತಿದ್ದು, ಈ ಮಧ್ಯೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದು ಪರಿಶಿಷ್ಟರೆಲ್ಲರೂ ಒಗ್ಗಟ್ಟಾಗಿಯೇ ಇರಬೇಕೆಂದು ಆಶಯದೊಂದಿಗೆ ಮೀಸಲಾತಿ ಸಂರಕ್ಷಣ ಒಕ್ಕೂಟದ ಹೆಸರಿನಲ್ಲಿ ತಳಸಮುದಾಯಗಳನ್ನು ಸಂಘಟಿಸುವ ಪ್ರಯತ್ನದಲ್ಲಿರುವ ಇಮ್ಮಡಿ ಸಿದ್ದರಾಮೇಶ್ವರರು ಏತ್ನಧ್ಯೆ ಜಾತಿವಾರು ಸಮೀಕ್ಷೆಗೆ ಬಂದಾಗ ನಿಖರವಾದ ಅಂಕಿ ಅಂಶಗಳನ್ನು ಅನಿವಾರ್ಯವಾಗಿ ಸರ್ಕಾರಕ್ಕೆ ನೀಡುವ ಅಗತ್ಯವಿರುವುದರಿಂದ ಭೋವಿ, ಕೊರಚ, ಕೊರಮ, ಲಂಬಾಣಿ, ಅಲೆಮಾರಿ ಸಮುದಾಯಗಳು ತಮ್ಮ ತಮ್ಮ ಮನೆಗಳಲ್ಲಿಯೇ ಇದ್ದು, ತಮ್ಮ ಜನಸಂಖ್ಯೆಯ ನಿಖರವಾದ ಅಂಕಿ-ಅಂಶಗಳನ್ನು ನೀಡುವ ಮೂಲಕ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಬೇಕಾದ ಅಗತ್ಯವಿದೆ ಎಂದು ಜಾಗೃತಿಯ ಸಂದೇಶವನ್ನು ನೀಡಿದ್ದಾರೆ.
ಮೀಸಲಾತಿ ಸಂರಕ್ಷಣಾ ಒಕ್ಕೂಟದ ಹೆಸರಿನಲ್ಲಿ ಕಳೆದ ಒಂದುವರೆ ದಶಕಗಳಿಂದ ಭೋವಿ, ಲಂಬಾಣಿ, ಕೊರಚ, ಕೊರಮ, ಅಲೆಮಾರಿ, ಆದಿವಾಸಿ ಬುಡಕಟ್ಟು ಸಮುದಾಯಗಳನ್ನು ಸಂಘಟಿಸುವ ಪ್ರಯತ್ನ ಮಾಡಿರುವ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳು ಎಲ್ಲಾ ತಳಸಮುದಾಯಗಳ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವ ಹೊಂದಿದವರು. ಎಲ್ಲಾ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂಬ ಸದಾಶಯ ಹೊಂದಿರುವ ಶ್ರೀಗಳು ಯಾರೂ ಕೂಡ ಮೀಸಲಾತಿ ಸೌಲಭ್ಯದಿಂದ ಯಾರದೋ ಕುಯಿಕ್ತಿಗೆ, ತಂತ್ರಕ್ಕೆ ಬಲಿಯಾಗಿ ವಂಚಿತರಾಗಬಾರದೆಂಬ ಉದ್ದೇಶದಿಂದ ಎಲ್ಲಾ ಸಮುದಾಯಗಳಿಗೆ ಸಂದೇಶವನ್ನು ನೀಡಿ ಜಾತಿವಾರು ಜನಸಂಖ್ಯೆ ಗಣತಿಯ ಸಂದರ್ಭದಲ್ಲಿ ತಾವು ಹುಟ್ಟಿ ಬೆಳೆದಂತಹ ಊರುಗಳಲ್ಲಿಯೇ ಇದ್ದು ಅಂಕಿ-ಅಂಶಗಳನ್ನು ನೀಡುವಂತಹ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ತಮ್ಮ ವಿಚಾರವನ್ನು ಸಂದೇಶದ ಮೂಲಕ ತಿಳಿಸಿದ್ದಾರೆ.
ಮೀಸಲಾತಿ ಸಂರಕ್ಷಣ ಒಕ್ಕೂಟದ ವ್ಯಾಪ್ತಿಯಲ್ಲಿ ಭೋವಿ, ಲಂಬಾಣಿ, ಕೊರಚ, ಕೊರಮ, ಅಲೆಮಾರಿ-ಅರೆ ಅಲೆಮಾರಿಗಳು, ಆದಿವಾಸಿಗಳು, ಬುಡಕಟ್ಟು ಜನರು ಒಕ್ಕೂಟದ ವ್ಯಾಪ್ತಿಯಲ್ಲಿದ್ದು, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸದಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ. ಇಂತಹ ಸಮಯೋಚಿತ ಸಂದರ್ಭದಲ್ಲಿ ಶ್ರೀ ಇಮ್ಮಡಿ ಸಿದ್ದರಾಮೇಶ್ವರರು ಅನಿವಾರ್ಯವಾಗಿ ಒಕ್ಕೂಟದ ವ್ಯಾಪ್ತಿಯ ೯೯ ಜಾತಿ ಜನಾಂಗಗಳನ್ನು ಜಾಗೃತಿ ಮೂಡಿಸುವ ಹೊಣೆಗಾರಿಕೆ ವಹಿಸಿಕೊಂಡಿದ್ದು, ಈಗಾಗಲೇ ಎಲ್ಲಾ ಸಮುದಾಯಗಳ ಸಭೆ ಕರೆದು ಜಾಗೃತಿ ಮೂಡಿಸುವ ಕಾರ್ಯಕ್ಕೆ ಕೈಹಾಕಿದ್ದಾರೆ.
ಮೀಸಲಾತಿ ಸಂರಕ್ಷಣ ಒಕ್ಕೂಟದ ಹೆಸರಿನಲ್ಲಿ ಕಳೆದ ಒಂದುವರೆ ದಶಕಗಳಿಂದ ಸಂವಿಧಾನ ರಕ್ಷಣೆಗಾಗಿ ಹೋರಾಟ ಮಾಡಿಕೊಂಡು ಬಂದ ಪ್ರಮುಖರಲ್ಲಿ ರವಿ ಮಾಕಳಿ, ರಾಘವೇಂದ್ರನಾಯ್ಕ ಇವರುಗಳು ಸೇರಿದಂತೆ ಭೋವಿ ಲಂಬಾಣಿ ಸಮುದಾಯದ ಚುನಾಯಿತ ಪ್ರತಿನಿಧಿಗಳಾದ ಶಾಸಕರು, ಸಚಿವರು, ಹಾಗೂ ಹಿರಿಯ ರಾಜಕೀಯ ಮುಖಂಡರು ಮತ್ತು ಸಂಘ-ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಸಮುದಾಯದ ಹಿತಾಸಕ್ತಿಗಾಗಿ ಸದಾಶ್ರಮಿಸಿದ್ದು, ಅವರೆಲ್ಲರ ಆಶಯದಂತೆ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳು ತಮ್ಮ ಇಚ್ಚಾಶಕ್ತಿಯನ್ನು ಪ್ರದರ್ಶಿಸುವ ಮೂಲಕ ಈ ಸಮುದಾಯಗಳನ್ನು ಸಂಘಟಿಸುವಲ್ಲಿ ಅಪಾರವಾಗಿ ಶ್ರಮಿಸಿದ್ದಾರೆ. ಅವರ ಶ್ರಮದ ಫಲವಾಗಿಯೇ ಇಂದು ಎಲ್ಲಾ ಸಮುದಾಯಗಳು ಒಗ್ಗಟ್ಟಾಗಿದ್ದು, ಮುಂಬರುವ ಜಾತಿವಾರು ಜನಗಣತಿಯ (ದತ್ತಾಂಶ) ಸಂಗ್ರಹದ ಸಂದರ್ಭದಲ್ಲಿ ತಂತಮ್ಮ ಜಾತಿಗಳ ನಿಖರವಾದ ಅಂಕಿ ಅಂಶಗಳನ್ನು ನೀಡುವ ಮೂಲಕ ಡಾ| ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಮೈಸೂರು ಒಡೆಯರ್ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ನೀಡಿದಂತಹ ಮೀಸಲಾತಿ ಹಕ್ಕನ್ನು ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಈ ಸಮುದಾಯಗಳ ಮುಂದಿದೆ?.
ಸಾಮಾಜಿಕ ನ್ಯಾಯ, ಸಮಾನತೆ, ಸಹಭಾಗಿತ್ವದಂತಹ ತತ್ವ ಸಿದ್ದಾಂತಗಳನ್ನು ಭೋದಿಸಿದ ಡಾ| ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಮೈಸೂರು ಒಡೆಯರ್ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಆಶಯಗಳು ಇಂದಿನ ರಾಜಕೀಯ ಚಿಂತನೆಗಳಲ್ಲಿ ಕೊಚ್ಚಿ ಹೋಗುತ್ತಿದ್ದು, ಇವುಗಳಿಂದ ರಕ್ಷಣೆ ಪಡೆದುಕೊಳ್ಳಲು ಮೀಸಲಾತಿ ಸಂರಕ್ಷಣ ಒಕ್ಕೂಟದಂತಹ ಸಂಘಟನೆಗಳು ಜಾಗೃತರಾಗುವುದು ಅವಶ್ಯವಿದ್ದು, ಹಾಗೆಯೇ ಪ್ರಸ್ತುತ ಸಂದರ್ಭದಲ್ಲಿ ಎಲ್ಲಾ ಜಾತಿ ಜನಾಂಗಗಳು ನಿಖರವಾದ ಅಂಕಿ-ಅಂಶಗಳನ್ನು ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗಕ್ಕೆ ನೀಡುವ ಮೂಲಕ ತಮ್ಮ ಅಸ್ತಿತ್ವಗಳನ್ನು ಕಾಯ್ದುಕೊಳ್ಳಬೇಕಾಗಿದೆ ಎಂದು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳು ತಮ್ಮ ಸ್ಪಷ್ಟ ಅಭಿಪ್ರಾಯವನ್ನು ನೀಡಿದ್ದಾರೆ.