ಭಾರತದ ಭದ್ರತೆಗೆ ಬೆದರಿಕೆ ಒಡ್ಡುತ್ತಿರುವ ಸಿಮ್ ಬಾಕ್ಸ್ ರಾಕೆಟ್!!

Share

ತಂತ್ರಜ್ಞಾನ ಬೆಳದಂತೆ  ಹಲವಾರು ರೀತಿಯವಂಚನೆಗಳು ನಡೆಯುತ್ತಿವೆ .ಈ ಮೂಲಕ ಸೈಬರ್ ಭಯೋತ್ಪಾದನೆ ಜಾಸ್ತಿಯಾಗುತ್ತಿದೆ, ಇದಕ್ಕೆ ಉದಾಹರಣೆ ಎನ್ನುವಂತೆ ಸಿಮ್  ಬಾಕ್ಸ್ ವಂಚನೆ ರಾಷ್ಟಮಟ್ಟದಲ್ಲಿ ದೊಡ್ಡ ಘಟನೆ ಈ   ಬಗ್ಗೆ ಇಲ್ಲಿ ವಿವರ  ನೀಡಲಾಗಿದೆ.

Writing; ಪರಶಿವ ಧನಗೂರು

ಭವಿಷ್ಯದ ಪ್ರಪಂಚಕ್ಕೆ ಅತ್ಯಂತ ದೊಡ್ಡ ಗಂಡಾಂತರ ವೇನಾದರೂ ಒಂದಾಗಿ ಬರುವುದಿದ್ದರೇ ಅದೂ ಇಂಟರ್ನೆಟ್ ನಿಂದ ಮಾತ್ರ ಸಾಧ್ಯ!. ಸೈಬರ್ ಟೆರರಿಸಂ. ಡಾರ್ಕ್ ನೆಟ್ ಮಾಫಿಯಾ. ಗಳು ಬಗ್ಗೆ ಅರಿವಿದ್ದವರಿಗೇ ಈ ಸೈಬರ್ ವಾರ್, ಇಂಟರ್ನೆಟ್ ಥ್ರೆಟ್ ಗಳ ಭಯಾನಕತೆ ಗೊತ್ತಿರುತ್ತದೆ. ಸಿಮ್ ಬಾಕ್ಸ್ ಫ್ರಾಡ್ ಎಂಬುದು ಈಗ ವಿಶ್ವದ ಟಾಪ್ 10 ಥ್ರೆಟ್ಸ್ ಗಳಲ್ಲಿ ಐದನೆಯದು!ಆಂಟಿ ಫ್ರಾಡ್ ಸ್ಪೆಷಲಿಸ್ಟ್ ಗಳು ಹೇಳುವ ಪ್ರಕಾರ ಕಮ್ಯೂನಿಕೇಷನ್ ಫ್ರಾಡ್ ಕಂಟ್ರೋಲ್ ಅಸೋಸಿಯೇಷನ್ (CFCA)ಹೇಳುತ್ತಿರುವಂತೆ ಈ ಸಿಮ್ ಬಾಕ್ಸ್ ಫ್ರಾಡ್ ನಿಂದು ಟೆಲಿಕಾಂ ಇಂಡಸ್ಟ್ರಿಗೇ ವರ್ಷಕ್ಕೆ 3ಬಿಲಿಯನ್ ಡಾಲರ್ ನಷ್ಟವಾಗುತ್ತಿದೆಯಂತೆ! ಕಳೆದ ಆರು ವರ್ಷಗಳಲ್ಲಿ ಭಾರತ ದೇಶದ ಹಲವಾರು ರಾಜ್ಯಗಳಲ್ಲಿ ಅಲ್ಲಲ್ಲಿ ತಲೆ ಎತ್ತಿ ಬೇರು ಬಿಡಲು ಹವಣಿಸುತ್ತಿರುವ, ಒಳಗೊಳಗೇ ಸದ್ದಿಲ್ಲದೆ ಗುಪ್ತವಾಗಿ ನಡೆಯುತ್ತಿರುವ ಈ ಸಿಮ್ ಬಾಕ್ಸ್ ಫ್ರಾಡ್ ಎಂಬ ಟೆಲಿಫೋನ್ ಕಾಲ್ ಹೈಜಾಕ್ ವಂಚನೆಯನ್ನು ತಡೆಯಲು ಮತ್ತು ಈ ಇಲ್ಲೀಗಲ್ ಅಪರಾಧದಿಂದ ಮುಂದೊದಗಿ ಬರಬಹುದಾದ ರಾಷ್ಟ್ರೀಯ ಭದ್ರತೆಯ ಸಮಸ್ಯೆಯಿಂದ ಪಾರಾಗಲು ನಮ್ಮ ಸರ್ಕಾರದಗಳು ಸಮಾರೋಪದಲ್ಲಿ ಅತ್ಯಂತ ನಿಪುಣ

ತಾಂತ್ರಿಕತೆಯೊಂದಿಗೆ ಕಾರ್ಯಾಚರಣೆ ಗಿಳಿಯಬೇಕಿದೆ. ಏಷ್ಯಾ, ಯುರೋಪ್, ಆಫ್ರಿಕಾ ಗಳಲ್ಲಿ ಇತ್ತೀಚೆಗೆ ಈ ಸಿಮ್ ಬಾಕ್ಸ್ ರಾಕೆಟ್ ಯತೇಚ್ಛವಾಗಿ ಸದ್ದು ಮಾಡುತ್ತಿದೆ. ಈ ಎಲ್ಲಾ ದೇಶಗಳ ಆಳುವ ಸರ್ಕಾರಗಳು ಈ ಹೊಸ ಸೈಬರ್ ಕ್ರೈಂ ಬಗ್ಗೆ ಬೆಚ್ಚಿ ತಲೆಕೆಡಿಸಿಕೊಂಡು ಕುಳಿತಿವೆ. ಮೇಲ್ನೋಟಕ್ಕೆ ಇದೊಂದು ಕೋಟ್ಯಂತರ ರೂಪಾಯಿ ಗಳ ತೆರಿಗೆ ವಂಚನೆಯ ಆರ್ಥಿಕ ಅಪರಾಧವೇ ಆಗಿದ್ದರೂ ಆಂತರ್ಯದಲ್ಲಿ ಒಂದು ದೇಶದ ಆಂತರಿಕ ಭದ್ರತೆ ಮತ್ತು ಸೇನಾ ಗೌಪ್ಯತೆಗೆ ಇದೊಂದು ಸವಾಲಿನ ಕಂಟಕದ ಕ್ರತ್ಯವಾಗಿದೆ. ಹಣದಾಸೆಗೆ ಯಾರೋ ಕೆಲವರು ಅಂತಾರಾಷ್ಟ್ರೀಯ (ಐ.ಎಸ್.ಡಿ) ಕರೆಗಳನ್ನು ಲೋಕಲ್ ಕರೆಗಳನ್ನಾಗಿ ಪರಿವರ್ತಿಸಿ ಹಣ ಮಾಡುವ ಲೋಕಲ್ ದಂಧೆಯಂತೆ ಕಾಣುವ ಈ ಸಿಮ್ ಬಾಕ್ಸ್ ರಾಕೆಟ್ ನ ಆಳ ಉದ್ದ ವಿಸ್ತಾರ ಸಮುದ್ರ ಗಳನ್ನೂ ದಾಟಿ ದೇಶವಿದೇಶಗಳ ಗಡಿಗಳನ್ನು ಮೀರಿ ನಿಗೂಢವಾಗಿ ನಿಂತಿದೆ. ನಮ್ಮ ದೇಶದ ಮಿಲಿಟರಿ ಇಂಟಿಲಿಜನ್ಸ್ ಡಾಟಾವನ್ನು ಕದಿಯಲು ಈ ಟೆಲಿಫೋನ್ ಎಕ್ಸ್ ಚೇಂಜ್ ಸ್ಕ್ಯಾಮ್ ಶತ್ರು ದೇಶದವರಿಗೆ ಸಹಕಾರಿಯಾಗುತ್ತಿದೆಯೇ? ಎಂಬ ಅನುಮಾನ ಮೂಡುತ್ತಿದೆ. ಗಡಿಹಂಚಿಕೊಂಡು ಸದಾ ಕಾಲು ಕೆರೆದು ಒಂದಿಲ್ಲೊಂದು ಕ್ಯಾತೆ ತೆಗೆದು ಯುದ್ಧ ಸನ್ನದ್ಧಸ್ಥಿತಿಯಲ್ಲಿರುವ ಚೀನಾ, ಪಾಕಿಸ್ತಾನಗಳೆರಡೂ ಭಾರತ ದೇಶವನ್ನು ಹೇಗಾದರೂ ಮಾಡಿ ಹಣಿಯಬೇಕೆಂದು ಕಾದು ಕುಳಿತಿವೆ. ಈಗಾಗಲೇ ಚೀನಾ ದೇಶವು ನಮ್ಮ ಆಂತರಿಕ ಭದ್ರತಾ ರಹಸ್ಯ ಡಾಟಾಗಳನ್ನು ಕದಿಯಲು ಸೈಬರ್ ಹ್ಯಾಕಿಂಗ್ ಗಳ ಮೂಲಕ ಹಲವಾರು ಬಾರಿ ಹರಸಾಹಸ ಮಾಡಿ ಹೊಂಚಿ ಕುಳಿತಿದೆ. ಪಾಕಿಸ್ತಾನವಂತೂ ಭಾರತದಲ್ಲಿರುವ ಯುವಕರನ್ನು ಗುರಿಯಾಗಿಸಿಕೊಂಡು ಕರಾವಳಿಯ ಸಮುದ್ರ ತೀರದ ಮೂಲಕ ಸಾವಿರಾರು ಕೋಟಯ ಮಾದಕ ದ್ರವ್ಯ ಗೋಳನ್ನು ದೇಶದೊಳಕ್ಕೆ ಕಳುಹಿಸಿ, ಫೇಕ್ ಇಂಡಿಯನ್ ಕರೆನ್ಸಿ ಗಳನ್ನು ನುಗ್ಗಿಸಿ ಆರ್ಥಿಕತೆ ಹಾಳುಮಾಡಲು ಯತ್ನಿಸುತ್ತಿದೆ. ಒಳಗೊಳಗೇ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದು ಪ್ರಪಂಚಕ್ಕೇ ತಿಳಿದಿರುವ ಸತ್ಯ. ಹೀಗಿರುವಾಗ ಈ ಸಿಮ್ ಬಾಕ್ಸ್ ಫ್ರಾಡ್ ನಂತಹ ಸೈಬರ್ ಕ್ರೈಂ ಗಳು ಭಾರತದ ಭದ್ರತೆಯ ದ್ರಷ್ಠಿಯಿಂದ ಮತ್ತೆ ಮತ್ತೆ ನಾವು ಪರಿಶೀಲಿಸಿಕೊಳ್ಳಲೇ ಬೇಕಾದ ಎಚ್ಚರಿಕೆಯ ಗಂಟೆಗಳು.


ಈ ಸಿಮ್ ಬಾಕ್ಸ್ ಫ್ರಾಡ್ ಎಂಬ ಐ.ಎಸ್.ಡಿ. ಕರೆಗಳ ಎಕ್ಸ್ ಚೇಂಜ್ ರಾಕೆಟ್ ಮೊದಲಿಗೆ ನಮ್ಮ ಭಾರತದಲ್ಲಿ ವರದಿಯಾಗಿದ್ದು ದೇಶದ ರಾಜಧಾನಿ ದೆಹಲಿಯಲ್ಲಿ! 2017ರಲ್ಲಿ ದಕ್ಷಿಣ ದೆಹಲಿಯಲ್ಲಿ ಒಬ್ಬ ಸಾಫ್ಟವೇರ್ ಇಂಜನಿಯರ್ ಮತ್ತವನ 9ಜನ ಸಹಚರರನ್ನು ಉತ್ತರಪ್ರದೇಶದ ಆಂಟಿ ಟೆರರಿಸ್ಟ್ ಸ್ಕ್ವಾಡ್ ಮತ್ತು ಜಮ್ಮು-ಕಾಶ್ಮೀರದ ಮಿಲಿಟರಿ ಇಂಟಿಲಿಜನ್ಸ್ ಯೂನಿಟ್ ಜಂಟಿಯಾಗಿ ಬಂಧಿಸಿದಾಗ ಬೆಳಕಿಗೆ ಬಂದಿತ್ತು. ಆಗಲೂ ಭಾರತೀಯ ಆರ್ಮಿ ಅಧಿಕಾರಿಗಳಿಗೆ ಅನುಮಾನಾಸ್ಪದ ಅಂತಾರಾಷ್ಟ್ರೀಯ ಕೆರೆಗಳು ಲೋಕಲ್ ಕಾಲ್ ಗಳ ರೀತಿಯಲ್ಲಿ ಬಂದು ನಮ್ಮ ಗುಪ್ತಚರ ಇಲಾಖೆಯನ್ನು ಬಡಿದೆಬ್ಬಿಸಿ ದ್ದವು. ದೆಹಲಿಯ ಸಿಮ್ ಬಾಕ್ಸ್ ಫ್ರಾಡ್ ರಾಕೆಟ್ಟಿನ ಮಾಸ್ಟರ್ ಮೈಂಡ್ ರಾಜಸ್ಥಾನದ ಗುಲ್ಸನ್ ಶೈನ್ ಮತ್ತು 9ಜನ ಅಸೋಸಿಯೇಟ್ ಗಳನ್ನು ಬಂಧಿಸಿದಾಗ 22ಸಿಮ್, ಬಾಕ್ಸ್ ಯೂನಿಟ್, 140ಪ್ರೀಫೇಯ್ಡ್ ಸಿಮ್ ಕಾರ್ಡ್, 10ಮೊಬೈಲ್ 28ಡಾಟಾ ಕಾರ್ಡ್ ಗಳು 5 ಲ್ಯಾಪ್ಟಾಪ್ ಮತ್ತು ಹಲವು ಎಲೆಕ್ಟ್ರಾನಿಕ್ ಡಿವೈಸ್ ಗಳನ್ನು ವಶಕ್ಕೆ ಪಡೆಯಲಾಗಿತ್ತು.

ಕಾಲ್ ಫ್ರಮ್ ಅಬ್ರಾಡ್..
BUT..ನಂಬರ್ ಲೋಕಲ್!!

ಸಿಮ್ ಬ್ಯಾಂಕ್ ಕಾಲ್ ನಾ ನಿಜವಾದ ತಂತ್ರವೇನೆಂದರೇ ಕಾಲರ್ ನಾ ನಿಜವಾದ ಐಡೆಂಟಿಟಿ ಯನ್ನು ಮರೆಮಾಚಿ ಭಾರತದ ಲೋಕಲ್ ನಂಬರ್ ಅನ್ನು ಮೊಬೈಲ್ ಡಿಸ್ಪ್ಲೇ ನಲ್ಲಿ ತೋರಿಸುತ್ತಿರುತ್ತೇ! ಇದೇ ಟ್ರಿಕ್ಸ್! ಅಂದರೇ ಫಾರಿನ್ ಲೊಕೇಶನ್ ಮರೆಮಾಚಲು ಸಿಮ್ ಬಾಕ್ಸ್ ಟೆಕ್ನಾಲಜಿ ಯನ್ನು ಬಳಸಲಾಗುತ್ತದೆ! ಅಬ್ರಾಡ್ ನಿಂದ ಕಾಲ್ ಬಂದಿದ್ದರೂ ಕಾಲ್ ರಿಸೀವ್ ಮಾಡುವ ವ್ಯಕ್ತಿಯ ಮೊಬೈಲ್ ನಲ್ಲಿ ಇಂಡಿಯನ್ ನಂಬರ್ ತೋರುತ್ತದೆ! ಈ ಕಾಲ್ ನಾ ಮೂಲ ಪತ್ತೆ ಹಚ್ಚಲು ಕೆಲವೊಮ್ಮೆ ಭದ್ರತಾ ಏಜೆನ್ಸೀಸ್ ಗಳೂ ಗೊಂದಲದಿಂದ ತಿಪ್ಪರಲಾಗ ಹಾಕಬೇಕಾಗುತ್ತದೆ! ಈ ಕಾಲ್ ಹೈಜಾಕ್ ಇಂಟರ್ ನ್ಯಾಷನಲ್ ಫ್ರಾಡ್ ಅನ್ನು ತಡೆಯಲು ಪ್ರಪಂಚದಾದ್ಯಂತ ಟೆಲಿಕಾಂ ಕಂಪನಿಗಳು ಸಾಕಷ್ಟು ಮುನ್ನೆಚ್ಚರಿಕೆ, ಭದ್ರತಾ ಕ್ರಮಗಳನ್ನು ತೆಗೆದುಕೊಂಡರು ಇಂತಹ ವಂಚನೆಯ ಪ್ರಕರಣಗಳು ನಿಲ್ಲದೆ ಪುನರಾವರ್ತನೆ ಆಗುತ್ತಲೇ ಇವೆ. 2019 ದಿಲ್ಲಿ ಹೈದರಾಬಾದಿನಲ್ಲಿ ಕಾಂಟಾ ಪೊಲೀಸರಿಂದ ದಿನೇಶ್ ಕುಮಾರ್ ಎಂಬ ಸೈಬರ್ ಕೆಫೆ ಮಾಲೀಕನನ್ನು ಬಂಧಿಸಲಾಗಿತ್ತು. Voice Over Internet Protocal (VOIP) ಸಲಕರಣೆಯ ಸಹಾಯದಿಂದ ಅಂತಾರಾಷ್ಟ್ರೀಯ (ISD) ಕರೆಗಳನ್ನು ಲೋಕಲ್ ಕರೆಗಳನ್ನಾಗಿ ಪರಿವರ್ತಿಸಿ ಹಣ ಮಾಡಲು ತೊಡಗಿದ್ದ ಈತನಿಗೆ ಪಾಕಿಸ್ತಾನದ ISI ಏಜೆಂಟರ ಸಂಪರ್ಕವೂ ಇತ್ತೆಂಬ ಗುಲ್ಲೆಬ್ಬಿಸಿದ್ದರು!

ರಸ್ತೆಯಲ್ಲಿ ಟೀ ಅಂಗಡಿ..
ಮನೆಯಲ್ಲಿ ಟೆಲಿಫೋನ್ ಎಕ್ಸ್ ಚೇಂಜ್ ರಾಕೆಟ್!!

2021ರ ಮಾರ್ಚ್ ನಲ್ಲಿ ನಮ್ಮ ಬೆಂಗಳೂರಿನ ಸಿಸಿಬಿ ಯ ಆಂಟಿ ಟೆರರಿಸ್ಟ್ ಶೆಲ್ ನ ಅಸಿಸ್ಟೆಂಟ್ ಕಮಿಷನರ್ ವೇಣುಗೋಪಾಲ್ ಮತ್ತು ಇನ್ಸ್ಪೆಕ್ಟರ್ ಭರತ್ ರವರ ತಂಡವು ನಾರ್ತ್ ಬೆಂಗಳೂರಿನ ಬಾಣಾವರದಲ್ಲಿ ರಸ್ತೆ ಬದಿಯಲ್ಲಿ ಕಾಫಿ-ಟೀ ಮಾರುತ್ತಿದ್ದ ಒಬ್ಬ ವ್ಯಕ್ತಿಯನ್ನು ಬಂಧಿಸಿತ್ತು. ಕೇರಳ ಮೂಲದ ಅಶ್ರಫ್ ಉನ್ನಿಚಿರವಿಟ್ಟಲ್ ಎಂಬ ಈ ಕತರ್ನಾಕ್ ವ್ಯಕ್ತಿ ಹೊಟ್ಟೆ ಪಾಡಿಗಾಗಿ ರಸ್ತೆ ಬದಿಯಲ್ಲಿ ಟೀ ಅಂಗಡಿ ಇಟ್ಟುಕೊಂಡು ದಿನನಿತ್ಯ ವ್ಯಾಪಾರ ಮಾಡುತ್ತಲೇ ತಾನಿದ್ದ ಬಾಡಿಗೆ ಮನೆಯಲ್ಲಿ ಇಲ್ಲೀಗಲ್ ಟೆಲಿಫೋನ್ ಎಕ್ಸ್ ಚೇಂಜ್ ನಡೆಸುತ್ತಾ, ಹಲವಾರು ಸಿಮ್ ಕಾರ್ಡ್ ಗಳನ್ನು ಬಳಸಿ ಎಲೆಕ್ಟ್ರಾನಿಕ್ ಡಿವೈಸ್ ಗಳ ಸಹಾಯದಿಂದ ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ಹಣ ಮಾಡುತ್ತಿದ್ದ! ವಿದೇಶಿ ಕಂಪನಿಗಳೊಂದಿಗೆ ಕೈಜೋಡಿಸಿ ನಿಮಿಷದ ಕರೆಯೊಂದಕ್ಕೆ 6ರೂಪಾಯಿ ಆದಾಯ ಪಡೆಯುತ್ತಿದ್ಧ! ತಿಂಗಳಿಗೇ ಲಕ್ಷಾಂತರ ರೂಪಾಯಿ ಕಮಾಯಿ ಇದ್ದರೂ ಬೀದಿಯಲ್ಲಿ ಟೀಮಾರುವ ನಾಟಕ ನಿತ್ಯ ನಡೆಸುತ್ತಿದ್ದ! ಈಗ ದೇಶದ ಎಲ್ಲೆಡೆಯೂ ಅಕಾರಮ ಟೆಲಿಫೋನ್ ಎಕ್ಸ್ ಚೇಂಜ್ ಸ್ಕ್ಯಾಮ್ ನದ್ದೇ ಸದ್ದು. ಇದರಬಗ್ಗೆ 2017 ರೈಲ್ವೇ ನಮ್ಮ ರಾಜ್ಯಸಭೆಯೊಳಗೆ ಚರ್ಚೆಯಾಗಿತ್ತು. ಕ್ರಿಮಿನಲ್ ಆಕ್ಟಿವಿಟಿಗೆ ಬಳಕೆಯಾಗುತ್ತಿರುವ ಗುಪ್ತ ಇಲ್ಲೀಗಲ್ ಟೆಲಿಫೋನ್ ಎಕ್ಸ್ ಚೇಂಜ್ ಗಳನ್ನು ಪತ್ತೆಹಚ್ಚುವಂತೆ ಗುಪ್ತಚರ ಇಲಾಖೆಗೆ ತಾಕೀತು ಮಾಡಲಾಗಿತ್ತು.

ಬೆಂಗಳೂರಿನಲ್ಲೂ ಸಿಮ್ ಬಾಕ್ಸ್ ಫ್ರಾಡ್ ಗ್ಯಾಂಗ್..!!

ಭಾರತದ ಗುಪ್ತಚರ ಇಲಾಖೆಯ ಇಷ್ಟೆಲ್ಲಾ ಕಣ್ಗಾವಲು ಕಟ್ಟೆಚ್ಚರದ ನಡುವೆಯೂ 2017 ರಲ್ಲಿ ಮೂದಲಿಗೇ ದಿಲ್ಲಿಯಲ್ಲಿ ಒಂದು ಇಲ್ಲೀಗಲ್ ಟೆಲಿಫೋನ್ ಎಕ್ಸ್ ಚೇಂಜ್, 2016-17 ರಲ್ಲಿ ಉತ್ತರ ಪ್ರದೇಶದಲ್ಲಿ ಅಸ್ತಿತ್ವದಲ್ಲಿದ್ದ 11ಇಲ್ಲೀಗಲ್ ಟೆಲೀಫೋನ್ ಎಕ್ಸ್ ಚೇಂಜ್ ಗಳನ್ನು, 2017 ರಲ್ಲಿ ಮಹಾರಾಷ್ಟ್ರ ಕೇರಳದಲ್ಲಿ ಎರಡೆರಡು ಸಿಮ್ ಬಾಕ್ಸ್ ಫ್ರಾಡ್ ಗ್ಯಾಂಗ್ ಗಳನ್ನು, 2019 ರಲ್ಲಿ ಆಂಧ್ರದಲ್ಲಿ 6 ಒಡಿಸ್ಸಾದಲ್ಲಿ ಒಂದು ಇಲ್ಲೀಗಲ್ ಟೆಲಿಫೋನ್ ಎಕ್ಸ್ ಚೇಂಜ್ಗಳನ್ನು ಕಂಡುಹಿಡಿದು ಅಪರಾಧಿ ಗಳನ್ನು ಜೈಲಿಗಟ್ಟಲಾಗಿದೆ. ಮಿಲಿಟರಿ ಇಂಟಿಲಿಜನ್ಸ್ (MI) ಯೂನಿಟ್ ನವರೊಂದಿಗೆ ಆಂಟಿ ಟೆರರಿಸ್ಟ್ ಶೆಲ್ (ATC) ನಾ ಪೊಲೀಸರು ಕೈಜೋಡಿಸಿ ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಪ್ರತಿಯೊಂದು ಕಾಲ್ ಹೈಜಾಕ್ ಫ್ರಾಡ್ ಗ್ಯಾಂಗ್ ಗಳನ್ನು ಬೇಧಿಸಿ-ಬಂಧಿಸಿ

ಮುನ್ನುಗ್ಗುತ್ತಿರುವಾಗಲೇ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿಯೂ ಅಂತಾರಾಷ್ಟ್ರೀಯ ಕರೆ ಪರಿವರ್ತಕರ ಗ್ಯಾಂಗ್ ಪತ್ತೆಯಾಗಿದೆ. ಕೇರಳ ಮೂಲದ ಇಬ್ರಾಹಿಂ ಪುಲ್ಲಟ್ಟಿ ಎಂಬಾತನೇ ಇದರ ಕಿಂಗ್ ಪಿನ್. ಸುಮಾರು ಒಂದುವರೆ ವರ್ಷದಿಂದ ಸಿಮ್ ಬಾಕ್ಸ್ ಸ್ಕ್ಯಾಮ್ ನಡೆಸುತ್ತಿದ್ದ ಈತನಿಗೆ ಪಾಕಿಸ್ತಾನ ಒಂದರಲ್ಲೇ 600 ಮಂದಿ ಗ್ರಾಹಕರಿದ್ದಾರೆಂದರೇ ಈತನ ಅಕ್ರಮ ಜಾಲದ ಆಳವೆಷ್ಟಿರಬಹುದು ನೀವೇ ಲೆಕ್ಕ ಹಾಕಿ. ಇಲ್ಲಿ ಕುಳಿತೇ ಅಂತರಾಷ್ಟ್ರೀಯ ಕರೆಗಳನ್ನು ಲೋಕಲ್ ಕರೆಗಳಂತೆ ಪರಿವರ್ತಿಸಿ ಗ್ರಾಹಕರಿಂದ ಹವಾಲಾ ಮೂಲಕ ತಿಂಗಳಿಗೊಮ್ಮೆ ಹಣ ಪಡೆಯುತ್ತಿದ್ದ ಈ ಕ್ರಿಮಿನಲ್ ಆಸಾಮಿ ನೆರೆಯ ಆಂಧ್ರ, ತಮಿಳುನಾಡು ಮತ್ತು ಕೇರಳದ ತನ್ನೂರಿನಿಂದ ಅಕ್ರಮವಾಗಿ ಕೊರಿಯರ್ ಮೂಲಕ ಹೆಚ್ಚು ಸಿಮ್ ಕಾರ್ಡ್ ತರಿಸಿಕೊಂಡು ಈ ಕಾನೂನು ಬಾಹಿರ ಚಟುವಟಿಕೆಗೆ ಬಳಸಿಕೊಳ್ಳುತ್ತಿದ್ದನೆಂಬುದು ತನಿಖೆಯಿಂದ ತಿಳಿದುಬಂದಿದೆ. ಈತನ ಪಾಕಿಸ್ತಾನೀ ಗ್ರಾಹಕರು, ನಮ್ಮ ಈಶಾನ್ಯ ಭಾರತದ ಮಿಲಿಟರಿ ಕಛೇರಿಗೆ, ಪದೇ ಪದೇ ಕರೆಮಾಡಿ, ಹಿರಿಯ ಅಧಿಕಾರಿಗಳ ಸೋಗಿನಲ್ಲಿ, ದೇಶದ ಮಿಲಿಟರಿ ಸೀಕ್ರೆಟ್ ದತ್ತಾಂಶಗಳ ಬಗ್ಗೆ, ಮಾಹಿತಿ ಕೇಳಿದ್ದ ಕಾರಣ ಅನುಮಾನ ಗೊಂಡ ದೇಶದ ಗುಪ್ತಚರ ಇಲಾಖೆಯ ಸಿಬ್ಬಂದಿಗಳು ಆ ಕರೆಯನ್ನು ಟ್ರೇಸ್ ಔಟ್ ಮಾಡಲಾಗೀ, ಅದು ಬೆಂಗಳೂರಿನಿಂದ ಬಂದಿರುವುದು ಗೊತ್ತಾಗಿದೆ. ಆಗ ಅದರ ಹಿಂದೆ ಬಿದ್ದ ಭಾರತೀಯ ಮಿಲಿಟರಿ ಇಂಟಿಲಿಜನ್ಸ್ ಮತ್ತು ಬೆಂಗಳೂರಿನ ಸಿಸಿಬಿ ಆಂಟಿ ಟೆರರಿಸ್ಟ್ ಶೆಲ್ ಪೊಲೀಸರು ಜಂಟಿಯಾಗಿ ಏಕಕಾಲಕ್ಕೆ ದಾಳಿನಡೆಸಿ ತಮಿಳುನಾಡು ಮೂಲದ ಆಪರೇಟರ್ ಗೌತಮ್ ಮತ್ತು ಮಾಸ್ಟರ್ ಮೈಂಡ್ ಇಬ್ರಾಹಿಂ ಪುಲ್ಲಟ್ಟಿಯನ್ನು ಬಂಧಿಸಿದ್ದಾರೆ. 960ಸಿಮ್ ಕಾರ್ಡ್ ಗಳನ್ನು ಬಳಸಿ 30ಸಿಮ್ ಬಾಕ್ಸ್ ಗಳನ್ನು 6 ಪ್ರತ್ಯೇಕ ಸ್ಥಳಗಳಲ್ಲಿಟ್ಟು ಕಾಲ್ ಕಾರ್ಯಾಚರಣೆ ನಡೆಸುತ್ತಿದ್ದ ಮಾಹಿತಿ ಬೆಳಕಿಗೆ ಬಂದಿದೆ. ಟೆಲಿಕಾಂ ಕಂಪನಿಗಳಿಗೆ ದೋಖಾ ಮಾಡುವುದರ ಜೊತೆಗೆ ಭಾರತದ ಭದ್ರತೆಗೆ ದಕ್ಕೆ ತಂದ ಆರೋಪದಲ್ಲಿ ವಿಚಾರಣೆ ನಡೆಯುತ್ತಿದ್ದು, ಪಾಕಿಸ್ತಾನಿ ಐ.ಎಸ್.ಐ. ಏಜೆಂಟರಿಗೆ ಈ ಸಿಮ್ ಬಾಕ್ಸ್ ಫ್ರಾಡ್ ರಾಕೆಟ್ ನಿಂದ ಲಾಭವಾಗಿದೆಯೇ? ಇಂಡಿಯನ್ ಆರ್ಮಿ ಆಫೀಸಿಗೆ ಅನಾಮಧೇಯ ವ್ಯಕ್ತಿಗಳ ಹೆಸರಲ್ಲಿ ಪದೇ ಪದೇ ಕರೆಮಾಡಿದ್ದವರು ಪಾಕಿಸ್ತಾನದ ಗೂಢಾಚಾರಿಕೆ ಸಿಬ್ಬಂದಿಯೇ? ನಮ್ಮ ದೇಶದ ಮಿಲಿಟರಿ ಇಂಟಿಲಿಜನ್ಸ್ ನ ಡಾಟಾ ಕದಿಯಲು ಪಾಕಿಸ್ತಾನ ಹೀಗೆ ಇಲ್ಲೀಗಲ್ ಟೆಲಿಫೋನ್ ಎಕ್ಸ್ ಚೇಂಜ್ ಗಳ ಮೂಲಕ ಪ್ರಯತ್ನಿಸುತ್ತಿದೆಯೇ? ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ. ದುಬೈನಲ್ಲಿ ಡ್ರೈವರ್ ಆಗಿದ್ದ ಈ ಇಬ್ರಾಹಿಂ ಅಲ್ಲಿರುವ ಸೈಬರ್ ಹ್ಯಾಕಿಂಗ್ ಗ್ಯಾಂಗ್ ಗಳ ಸಂಪರ್ಕ ಸಾಧಿಸಿ ಅಲ್ಲಿನ ನೆಟ್ವರ್ಕ್ ನಿಂದಲೇ‌ ಈ ಸ್ಕ್ಯಾಮ್ ನಡೆಸುತ್ತಿದ್ದನೇ? ಇಬ್ರಾಹಿಂಗೂ ಯಾವುದಾದರೂ ಭಯೋತ್ಪಾದಕ ಸಂಘಟನೆಗಳಿಗೆ ನೇರಾನೇರ ಸಂಬಂಧಗಳಿವೆಯೇ? ಎಂಬುದು ಅಸಿಸ್ಟೆಂಟ್ ಕಮಿಷನರ್ ವೇಣುಗೋಪಾಲ್ ಮತ್ತು ತಂಡದ ತನಿಖೆಯಿಂದ ಬಯಲಿಗೆ ಬರಬೇಕಿದೆ. ವೈಜ್ಞಾನಿಕ ವಾಗಿ ಇಷ್ಟೆಲ್ಲಾ ಅಡ್ವಾನ್ಸ್ ಆಗಿರುವ ಈ ಇಲ್ಲೀಗಲ್ ಎಲೆಕ್ಟ್ರಾನಿಕ್ ಡಿವೈಸ್ ಗಳನ್ನು ಇವರಿಗೆ ಸರಬರಾಜು ಮಾಡಿ ಸೆಟಫ್ ಮಾಡಿಕೊಟ್ಟವರಾರು ಎಂಬುದನ್ನೂ ಪತ್ತೇ ಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕಾಗಿದೆ. ಹಾಗೆಯೇ ಬಡಜನರ ಹೆಸರಿನಲ್ಲಿ ಇಷ್ಟೊಂದು ಸಿಮ್ ಕಾರ್ಡ್ ಗಳನ್ನು ಇವರಿಗೆ ಸರಬರಾಜು ಮಾಡುತ್ತಿದ್ಧವರನ್ನು ಜೈಲಿಗಟ್ಟಬೇಕಿದೆ. ಇದು ಕೇವಲ ಟೆಲಿಕಾಂ ಕಂಪನಿಗಳ ಹಣಕಾಸು ನಷ್ಟದ ವಿಚಾರ ಮಾತ್ರವಾಗಿರದೇ ದೇಶದ ಭದ್ರತೆಯ ವೀಷಯವಾಗಿರುವುದರಿಂದ ಈ ಸಿಮ್ ಬಾಕ್ಸ್ ಫ್ರಾಡ್ ಪ್ರಕರಣಗಳು ಇನ್ನು ಮುಂದೆ ದೇಶದಲ್ಲಿ ಪುನರಾವರ್ತನೆ ಆಗದಂತೆ ಮುನ್ನೆಚ್ಚರಿಕೆ ವಹಿಸಲೇಬೇಕಿದೆ. ಹಣದಾಸೆಗೆ ತರಂಗ ವ್ಯಾಪಾರದ ಹಾದಿಯಲ್ಲಿ ವಾಪಸ್ಸು ಬರಲಾರದಷ್ಟು ದೂರ ಹೊರಟು ಹೋಗಿರುವ ಸರ್ಕಾರಗಳು ಇಂಟರ್ನೆಟ್ ಆಕ್ಸಿಸ್ ಎಂಬ ಮಾಯಾ ಪ್ರಪಂಚದ ಒನ್ ವೇ ನಲ್ಲಿ ಸಿಕ್ಕಿಹಾಕಿಕೊಂಡಿವೆ.

ಕಾರ್ಪೊರೇಟ್ ಸಂಸ್ಥೆಗಳು ದೇಶ ಹಾಳಾದ್ರೇ ನಮಗೇನು ದುಡ್ಡು ಬೇಕು ! ಯಾರು ಸತ್ತರೇನು ನಮ್ಮ ಷೇರು ಮಾರುಕಟ್ಟೆಯಲ್ಲಿ ಮೇಲೇಳಬೇಕು! ಎನ್ನುವ ಹಪಾಪಪಿಯಲ್ಲಿವೆ. ಈ ಇಂಟರ್ನೆಟ್ ಕಾಲ್ ಗಳ ಹಾವಳಿ ಯಿಂದ ಭಾರತಕ್ಕೆ ಸೆಕ್ಯೂರಿಟಿ ಥ್ರೆಟ್ ಯಾವಾಗಲೂ ಇದ್ದೇ ಇದೆ. ತರಂಗಮಾರುವ ಕಾರ್ಪೊರೇಟ್ ಕುಳಗಳ ಹಾರ್ಡ್ ಕೋರ್ ಬಿಸಿನೆಸ್ಸಿನ ಹಣದಾಹದಿಂದ ಸೈಬರ್ ಕಳ್ಳರ ಕೈಗೂ ಕಣ್ಣಿಗೇ ಕಾಣದ ತರಾವರಿ ತರಂಗಪೂರಿತ ಅಸ್ತ್ರಗಳು ಬರುತ್ತಿವೆ! ದೇಶದ ಭದ್ರತೆಗೆ ಕಾಣದ ಕೆರೆಗಳೂ ಕಾರಣವಾಗುತ್ತಿವೆ!!

-ಪರಶಿವ ಧನಗೂರು.

Girl in a jacket
error: Content is protected !!