ಎರಡನೇ ಲಸಿಕೆ ಸದ್ಯದ ಮಾರ್ಗಸೂಚಿ ಅನುಸರಿಸಲು ಹೈಕೋರ್ಟ್ ಸೂಚನೆ

Share

ಬೆಂಗಳೂರು,ಮೇ, ೨೧: ಕೋವಿಡ್-೧೯ ಎರಡನೇ ಲಸಿಕೆ ಪಡೆಯಲು ಅರ್ಹರಾಗಿರುವ ನಾಗರಿಕರಿಗೆ ಸದ್ಯ ಚಾಲ್ತಿಯಲ್ಲಿರುವ ಮಾರ್ಗಸೂಚಿಯನ್ನು ಅನುಸರಿಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ
ಈ ಕುರಿತಂತೆ ತರ್ಕಬದ್ಧ ಮತ್ತು ನ್ಯಾಯಯುತ ನೀತಿಯನ್ನು ರೂಪಿಸುವಂತೆ ಅದು ಸರಕಾರಕ್ಕೆ ಹೇಳಿದ್ದು, ಇಂತಹ ಪರಿಸ್ಥಿತಿಯಲ್ಲಿ ಮೊದಲ ಡೋಸ್ ಲಸಿಕೆ ನೀಡಲು ಖಾಸಗಿ ಏಜನ್ಸಿಯವರಿಗೆ ಅನುಮತಿ ಇದೆಯೇ ಎಂದು ಸೂಚಿಸುವಂತೆ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ನಿರ್ದೇಶನ ನೀಡಿತು. ಸದ್ಯ ರಾಜ್ಯದಲ್ಲಿ ಲಭ್ಯವಿರುವ ೯೭,೪೪೦ ಕೋವ್ಯಾಕ್ಸಿನ್ ಲಸಿಕೆ ಡೋಸ್‌ಗಳು ಮತ್ತು ೭,೧೫,೦೦೦ ಕೋವಿಡ್‌ಶೀಲ್ಡ್ ಲಸಿಕೆ ಡೋಸ್‌ಗಳ ಕುರಿತು ಅಡ್ವೋಕೇಟ್ ಜನರಲ್ ಅವರು ದಾಖಲೆಗಳನ್ನು ಸಲ್ಲಿಸಿದ ಬಳಿಕ ಕೋರ್ಟ್ ಈ ನಿರ್ದೇಶನ ನೀಡಿತು.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಧೀಶ ಅರವಿಂದ ಕುಮಾರ್ ಅವರನ್ನೊಳಗೊಂಡ ವಿಶೇಷ ವಿಭಾಗ ಪೀಠವು ಈ ನಿರ್ದೇಶನ ನೀಡಿದ್ದು
ಈಗಾಗಲೇ ಮೊದಲ ಡೋಸ್ ಲಸಿಕೆ ತೆಗೆದುಕೊಂಡಿರುವವರಿಗೆ ಅಗತ್ಯವಿರುವ ಎರಡನೇ ಡೋಸನ್ನು ಪೂರೈಸಲು ಸರಕಾರ ಅತ್ಯಂತ ಕರಾರುವಕ್ಕಾಗಿ ಮರುಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದೆ
ಅಡ್ವೊಕೇಟ್ ಜನರಲ್ ಅವರು ಹೇಳುವಂತೆ, ಸರಕಾರವು ಕೋವ್ಯಾಕ್ಸಿನ್ ಲಸಿಕೆಯ ಮೊದಲನೇ ಡೋಸ್ ನೀಡುವುದನ್ನು ನಿಲ್ಲಿಸಿದೆ. ಕೋವಿಡ್‌ಶೀಲ್ಡ್ ಲಸಿಕೆಯ ಮೊದಲ ಡೋಸನ್ನು ಮುಂಚೂಣಿಯ ಕಾರ್ಮಿಕರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ನೀಡುತ್ತಿದೆ.
ಮೊದಲನೇ ಡೋಸ್ ಪಡೆದು ಎಂಟು ವಾರ ಮುಗಿಸುತ್ತಿರುವ ಕೋವಿಡ್‌ಶೀಲ್ಡ್ ಫಲಾನುಭವಿಗಳು ಮತ್ತು ಮೊದಲನೇ ಡೋಸ್ ಪಡೆದು ಆರನೇ ವಾರ ಮುಗಿಸುತ್ತಿರುವ ಕೋವ್ಯಾಕ್ಸಿನ್ ಫಲಾನುಭವಿಗಳ ಸಂಖ್ಯೆಯನ್ನು ಆಧರಿಸಿ, ದಿನಾಂಕಗಳ ಪ್ರಕಾರ ಸರಕಾರ ಕೆಲಸ ಮಾಡಬಹುದು. ಹಾಗೆ ಮಾಡುವಾಗ, ಮೇ ೧೯ರ ಪತ್ರದಲ್ಲಿ ಸೂಚಿಸಿರುವಂತೆ, ಮೊದಲನೇ ಮತ್ತು ಎರಡನೇ ಡೋಸ್ ನಡುವೆ ಮೂರು ತಿಂಗಳ ಅಂತರ ಹೊಂದಿರುವ ಫಲಾನುಭವಿಗಳನ್ನು ಈ ಪ್ರಕ್ರಿಯೆಯಿಂದ ಹೊರಗಿಡಬೇಕಾಗುತ್ತದೆ. ದೈನಂದಿನ ಆಧಾರದ ಮೇಲೆ ಡಾಟಾವನ್ನು ಸಿದ್ಧಪಡಿಸದಿದ್ದರೆ, ಮೊದಲನೇ ಡೋಸ್ ತಗೆದುಕೊಂಡ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ಎರಡನೇ ಡೋಸ್ ನೀಡುವುದು ಸಾಧ್ಯವಾಗದಿರಬಹುದು” ಎಂದು ಅವರು ತಿಳಿಸಿದ್ದಾರೆ.

ಎರಡನೇ ಕೋವ್ಯಾಕ್ಸಿನ್ ಡೋಸ್‌ಗೆ ೩ ಲಕ್ಷ ಬಾಕಿ

ಮೇ ೧೫ಕ್ಕೆ , ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡ ಸುಮಾರು ೪,೫೫,೦೦೦ ಮಂದಿ ಫಲಾನುಭವಿಗಳು ನಾಲ್ಕು ವಾರ ಪೂರ್ಣಗೊಳಿಸಿದ್ದಾರೆ, ಹಾಗೂ ೨,೯೫,೭೯೫ ಮಂದಿ ಫಲಾನುಭವಿಗಳ ಎರಡನೇ ಡೋಸ್ ಪಡೆಯುವ ಅವಧಿ ಇನ್ನೂ ಬಾಕಿ ಇದೆ ಎಂದು ಸರಕಾರ ಸಲ್ಲಿರುವ ಲಿಖಿತ ದಾಖಲೆಯಲ್ಲಿ ತಿಳಿಸಲಾಗಿದೆ.

Girl in a jacket
error: Content is protected !!