ನವದೆಹಲಿ,ಆ,2:ಸಂಜೆ ಸಚಿವ ಸಂಪುಟ ರಚನೆ ಬಗ್ಗೆ ಅಂತಿಮ ನಡೆಯುವ ಸಭೆಯಲ್ಲಿ ಸಚಿವ ಸಂಪುಟದ ಚಿತ್ರಣ ಸಿಗಲಿದೆಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸಚಿವ ಸಂಪುಟ ರಚನೆ ಬಗ್ಗೆ ಚರ್ಚಿಸಲು ದೆಹಲಿಗೆ ಬಂದಿರುವ ಸಿಎಂ ಬಸವರಾಜ ಬೊಮ್ಮಾಯಿ ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದರು. ಇಂದು ಸಂಜೆ ದೆಹಲಿಯಲ್ಲಿ ಪಕ್ಷದ ಸಭೆ ನಡೆಯಲಿದೆ. ಸಭೆಯಲ್ಲಿ ಸಚಿವ ಸಂಪುಟ ರಚನೆ ಬಗ್ಗೆ ಚರ್ಚಿಸುತ್ತಾರೆ. ಅದಾದ ಬಳಿಕ ರಾಜ್ಯ ಸಚಿವ ಸಂಪುಟದ ಬಗ್ಗೆ ಮಾಹಿತಿ ಸಿಗಲಿದೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಲಾಗುವುದು. ಎಲ್ಲರೂ ಸಚಿವರಾಗಲು ಸಾಧ್ಯವಿಲ್ಲ. ಈ ವಿಚಾರ ನಮ್ಮ ಶಾಸಕರಿಗೂ ಗೊತ್ತಿದೆ. ಬ್ಯಾಲೆನ್ಸ್ ಮಾಡಿ ಸಂಪುಟ ರಚಿಸಬೇಕಾಗುತ್ತೆ. ಸಚಿವ ಸಂಪುಟ ರಚನೆ ವೇಳೆ ಪ್ರಾದೇಶಿಕವಾರು ಗಮನದಲ್ಲಿಟುಕೊಂಡು ರಚನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಈಗಿರುವ ರಾಜಕೀಯ ಸನ್ನಿವೇಶದಲ್ಲಿ ಎಲ್ಲರನ್ನು ಸೇರಿಸಿಕೊಂಡು ಹೋಗುವಂತಹ ಒಮ್ಮತದ ನಿರ್ಧಾರ ಕೈಗೊಳ್ಳಬೇಕಿದೆ. ಆದರೆ ಎಲ್ಲರೂ ಸೆಕ್ಯೂರ್ ಆಗೋದಕ್ಕೆ ಸಾಧ್ಯವಿಲ್ಲ. ಎಲ್ಲಾ ಪ್ರಾದೇಶಿಕವಾಗಿಯೂ ಚರ್ಚೆ ನಡೆಯಬೇಕಿದೆ. ಈ ಹಿಂದಿನ ಸಚಿವ ಸಂಪುಟದ ಬಗ್ಗೆಯೂ ಗಮನದಲ್ಲಿ ಇಟ್ಟಿಕೊಳ್ಳಬೇಕಿದೆ. ಆ ಎಲ್ಲಾ ನಿಟ್ಟಿನಲ್ಲಿ ಇಂದು ಸಂಜೆ ಚರ್ಚೆ ನಡೆದು, ಸಂಪುಟ ರಚನೆ ಬಗ್ಗೆ ಫೈನಲ್ ಆಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.