ಬಿಜೆಪಿಯಲ್ಲಿ ನಿಲ್ಲದ ಸಮರ- ಸುಧಾಕರ್ ವಿರುದ್ಧ ತೊಡೆತಟ್ಟಿದ ಸಂದೀಪ್ ರೆಡ್ಡಿ
by-ಕೆಂಧೂಳಿ
ಚಿಕ್ಕಬಳ್ಳಾಪುರ, ಫೆ,11-ಬಿಜೆಪಿಯಲ್ಲಿ ಬೀದಿ ರಂಪಾಟದ ರಗಳೆ ಸದ್ಯಕ್ಕೆ ನಿಂತಂತೆ ಕಾಣುತ್ತಿಲ್ಲ,ಒಬ್ಬಾರದ ಮೇಲೆ ಒಬ್ಬರು ನಾಯಕರ ವಿರುದ್ಧ ದಂಗೇಳುತ್ತಿದ್ದಾರೆ..ಈಗ ಚಿಕ್ಕಬಳ್ಳಾಪುರ ದ ಸಂದೀಪ್ ರೆಡ್ಡಿ ಸರದಿ.
ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿದ್ದ ಸಂದೀಪ್ ರೆಡ್ಡಿ ನೇಮಕಾತಿಗೆ ತಡೆಯೊಡ್ಡಿದ ಮಾಜಿ ಸಚಿವ ಡಿ.ಸುಧಾಕರ್ ವಿರುದ್ಧ ನೇರ ಸೆಣಸಾಟಕ್ಕೆ ಅಣಿಯಾಗಿದ್ದಾರೆ.
ಸಂದೀಪ್ ರೆಡ್ಡಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದನ್ನು ಸುಧಾಕರ್ ಖಂಡಿಸಿದ್ದರು. ಅದಾದ ಬಳಿಕ ನಿನ್ನೆಯಷ್ಟೇ ಹೈಕಮಾಂಡ್ ಈ ಆಯ್ಕೆಗೆ ತಡೆ ನೀಡಿತು. ಇದರಿಂದ ಕೆರಳಿರುವ ಸಂದೀಪ್, ಸುಧಾಕರ್ ವಿರುದ್ಧ ವಾಕ್ಸಮರ ನಡೆಸಿದ್ದಾರೆ.
ಇನ್ಮುಂದೆ ನಿನ್ನ ವಿರುದ್ಧವೇ ನನ್ನ ಹೋರಾಟ. ಒಂದೇ ಪಕ್ಷ ಅಂತಾ ನೋಡಲ್ಲ.. ನಿನ್ನೆದೆಲ್ಲಾ ಹಗರಣ ಬಿಚ್ಚಿಡುತ್ತೀನಿ.. ನೀನಾ ನಾನಾ ನೋಡೋ ಬಿಡೋಣ ಎಂದು ಸವಾಲ್ ಹಾಕಿದ್ದಾರೆ. ನಿನ್ನ ವಿರುದ್ಧವೇ ನನ್ನ ಹೋರಾಟ ಈಗ ಶುರುವಾಯ್ತು… ಏನು ಮಾಡ್ಕೋತಿಯಾ ಮಾಡ್ಕೋ… ನೀನು ಮಾಡಿರುವ ಎಲ್ಲಾ ಅನಾಚಾರಗಳನ್ನು ಬಯಲಿಗೆಳೆಯುವೆ ಎಂದು ವಾರ್ನ್ ಕೂಡ ಮಾಡಿವತೊಡೆ ತಟ್ಟಿದ್ದಾರೆ.

Adavatigement