ಬೆಂಗಳೂರು,೨೬: ಕರ್ನಾಟಕದಲ್ಲಿ ಬರುವ ಜೂನ್ ಏಳರ ನಂತರ ರಾಜಕೀಯ ದ್ರವೀಕರಣವಾಗುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ; ದೇಶದಲ್ಲಿ ಬಿಜೆಪಿ ಮತ್ತು ಪ್ರಧಾನಿ ಮೋದಿ ವರ್ಚಸ್ಸು ಗಣನೀಯ ಪ್ರಮಾಣದಲ್ಲಿ ಕುಸಿದ ಹಿನ್ನೆಲೆಯಲ್ಲಿ ಪಕ್ಷ ಮತ್ತು ಮೋದಿ ವರ್ಚಸ್ಸನ್ನು ವೃದ್ಧಿಸಿಕೊಳ್ಳಲು ಕೆಲ ಬದಲಾವಣೆಗಳನ್ನು ತರಲು ಆರ್‌ಎಸ್‌ಎಸ್ ಮುಂದಾಗಿದೆ ಅದರ ಒಂದು ಭಾಗವೇ ಕರ್ನಾಕಟದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬದಲಾವಣೆ.
ಹೌದು.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾಯಿಸಲು ಈಗಾಗಲೇ ವೇದಿಕೆ ಸಜ್ಜಾಗಿದೆ. ಜುಲೈ ೭ ರ ನಂತರ ಲಾಕ್ ಡೌನ್ ಮುಗಿಯುತ್ತಿದ್ದಂತೆ ರಾಜಕೀಯ ಬೆಳವಣಿಗೆಗಳು ತೀವ್ರಗೊಳ್ಳಲಿವೆ. ವಯಸ್ಸಿನ ಆಧಾರದ ಮೇಲೆ ಮತ್ತು ಕೊರೊನಾ ನಿಯಂತ್ರಣಮಾಡುವುದರಲ್ಲಿ ವೈಫಲ್ಯ ಈ ಎರಡು ಕಾರಣಗಳನ್ನಿಟ್ಟುಕೊಂಡು ಬಿಎಸ್‌ವೈ ಅವರನ್ನು ಇಳಿಸಲು ಎಲ್ಲಾ ಸಿದ್ದತೆಗಳು ನಡೆದಿವೆ.
ಕಳೆದ ಆರು ತಿಂಗಳಿನಿಂದಲೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಒಂದು ಗುಂಪು ಸತತ ಪ್ರಯತ್ನ ನಡೆಸುತ್ತಲೇ ಇತ್ತು ಕೆಲಶಾಸಕರು ಸಂಸದರು ಅಮಿತ್ ಶಾ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿನ ಪರಿಸ್ಥಿತಿ ಕುರಿತಂತೆ ಮನವರಿಕೆ ಮಾಡಿಒಟ್ಟಿದ್ದರು.ರಾಜ್ಯದಲ್ಲಿ ನಡೆಯುತ್ತಿರುವ ಕೆಲ ಘಟನೆಗಳ ಬಗ್ಗೆ ತಪ್ಪು ತೀರ್ಮಾನಗಳಿಂದ ಪಕ್ಷದ ವರ್ಚಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ ಎನ್ನುವ ಕುರಿತು ಮನವರಿಕೆ ಮಾಡಿಕೊಟ್ಟಿದ್ದರು.
ಇದಕ್ಕೆ ಸಾಕ್ಷಿ ಎನ್ನುವಂತೆ ಕಳೆದ ಒಂದು ವಾರದ ಹಿಂದೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ರಾತ್ರಿ ಹೊಟೆಲ್ ಒಂದರಲ್ಲಿ ಸಚಿವ ಸುಧಾಕರ್ ಸೇರಿದಂತೆ ಕೆಲ ಸಚಿವರನ್ನು(ವಲಸೆ ಬಂದವರನ್ನು) ಕರೆಸಿಕೊಂಡು ಸಭೆ ನಡೆಸಿದ್ದರ. ಈ ವೇಳೆ ಈ ಸಚಿವರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದರು ಇದಾದ ನಂತರ ಕೇಂದ್ರದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಯಾಕೆಂದರೆ ಕೊರೊನಾ ಸಂಕಷ್ಟದ sಸಮಯದಲ್ಲಿ ನಿರ್ವಹಣೆಯಲ್ಲಿ ಯಡವಿದ ಕೇಂದ್ರ ಸರ್ಕಾರಕ್ಕೆ ಒಂದು ರೀತಿ ಮುಜಗರ ಉಂಟಾಗಿದೆ. ಜಗತ್ತೇ ಪ್ರಧಾನಿ ನರೇಂದ್ರ ಮೋದಿ ನಡೆಗೆ ಹಾಡಿ-ಹೊಗಳಿತ್ತು ಆದರೆ ಕೊರೊನಾ ನಿರ್ವಹಣೆಯಲ್ಲಿ ವೈಫಲ್ಯ ಕಂಡ ಕಾರಣ ಈಗ ಅದೇ ಜಗತ್ತು ಈಗ ಮೋದಿ ಸರ್ಕಾರವನ್ನು ನೋಡಿ ನಗುತ್ತಿದೆ ಅಲ್ಲದೆ ದೇಶದ ಜನರ ಮೋದಿ ಮತ್ತು ಬಿಜೆಪಿ ಪಕ್ಷದ ನಡವಳಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಿದೆ ಇಂತ ಹೊತ್ತಿನಲ್ಲಿ ತಮ್ಮ ವರ್ಚಸ್ಸು ವೃದ್ಧಿಸಿಕೊಳ್ಳುವುದು ಮೋದಿ ಅವರ ಪ್ರಯತ್ನ ಈಗಾಗಲೇ ಒಂದು ತಂಡ ಮೋದಿ ವರ್ಚಸ್ಸು ವೃದ್ಧಿಸಲ ಮಾಡಬೇಕಾದ ಕಾರ್ಯತಂತ್ರಗಳನ್ನು ಮುಂದಿಟ್ಟಿದೆ .
ಅದರ ಪರಿಣಾಮ ಕರ್ನಾಟಕದ ಮುಖ್ಯಮಂತ್ರಿ ಬಿ,ಎಸ್.ಯಡಿಯೂರಪ್ಪ ಅವರ ಬದಲಾವಣೆಯೂ ಒಂದು.ಇದೇ ವೇಳೆ ಆರ್‌ಎಸ್‌ಎಸ್ ನಾಯಕರು ಕೂಡ ಇಂತ ಬದಲಾವಣೆಗೆ ಧ್ವನಿಗೂಡಿಸಿದೆ. ಆರ್‌ಎಸ್‌ಎಸ್ ಮುಖಂಡ ಹೊಸಬಾಳೆ ಕೂಡ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ವೈ ಬದಲಾವಣೆಯನ್ನು ಮಾಡುವುದು ಅನಿವಾರ್ಯ ಎಂದು ವಾದಿಸಿದ್ದಾರೆ ಹೀಗಾಗಿ ಲಾಕ್‌ಡೌನ್ ಮುಗಿಯುತ್ತಿದ್ದಂತೆ ರಾಜಕೀಯ ಬೆಳವಣಿಗೆಗಳಿಗೆ ಚಾಲನೆ ಸಿಗಲಿದೆ.
ಬಿಎಸ್‌ವೈ ಬದಲಾವಣೆಗೆ ಮುಖ್ಯ ಕಾರಣವೇನು?
ಬಳ್ಳಾರಿ ಜಿಲ್ಲೆ ತೋರಣಗಲ್‌ನಲ್ಲಿ ಜಿಂದಾಲ್ ಕಂಪನಿಗೆ ೩,೬೭೭ ಎಕರೆ ಭೂಮಿ ಪರಭಾರೆ ಮಾಡಿರುವುದು ಕೂಡ ಬಿಜೆಪಿಗೆ ದೊಡ್ಡ ಮುಖಭಂಗವಾಗಿದೆ ಎನ್ನುತ್ತಾರೆ ಕೆಲ ಹಿರಿಯ ಸಚಿವರು. ಅಲ್ಲದೆ ಇದನ್ನು ಆರ್‌ಎಸ್‌ಎಸ್ ಕೂಡ ತೀವ್ರ ವಿರೋಧಿಸಿದೆ ಈ ಮಧ್ಯೆಯೂ ಯಡಿಯೂರಪ್ಪ ಜಿಂದಾಲ್‌ಗೆ ಭೂಮಿ ಪರಭಾರೆ ಮಾಡಿರುವುದು ಒಂದು ರೀತಿ ಪಕ್ಷದ ವರ್ಚಸ್ಸಿಗೆ ಮತ್ತಷ್ಟು ಪೆಟ್ಟು ಬಿದ್ದಿದೆ ಎನ್ನುವುದು ಅವರ ಅಭಿಪ್ರಾಯ ಇದಕ್ಕೆ ಸಂಬಂಧಿಸಿದಂತೆ ಒಂದಿಷ್ಟು ಶಾಸಕರು ಕೂಡ ದಾಖಲೆಗಳ ಸಮೇತ ಅಮಿತ್ ಶಾ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಜಿಂದಾಲ್‌ಗೆ ಭೂಮಿ ಪರಭಾರೆ ಮಾಡಿರು ಕುರಿತು ಮಹಿತಿಯನ್ನು ನೀಡಿದ್ದಾರೆ
ದೆಹಲಿಯತ್ತ ಶಾಸಕರು
ದೆಹಲಿಯತ್ತ ಬಿಜೆಪಿ ಶಾಸಕರು ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಶುರುವಾದ ಬೆನ್ನಲ್ಲೇ, ರಾಷ್ಟ್ರ ರಾಜಧಾನಿಯಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ. ದೆಹಲಿಗೆ ಬಂದಿರುವ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್, ಶಾಸಕ ಅರವಿಂದ ಬೆಲ್ಲದ ಮತ್ತಿತರರು ಕರ್ನಾಟಕ ಭವನಕ್ಕೆ ಬಾರದೇ ಹೋಟೆಲ್‌ನಲ್ಲಿ ತಂಗಿದ್ದಾರೆ. ವೈಯಕ್ತಿಕ ಕೆಲಸಕ್ಕೆ ಬಂದಿರುವುದಾಗಿ ಅವರು ಹೇಳಿಕೊಂಡಿದ್ದಾರೆ.ಆದರೆ, ಪಕ್ಷದ ವರಿಷ್ಠರನ್ನು ಭೇಟಿ ಮಾಡಿರುವ ಅವರು, ರಾಜ್ಯದ ರಾಜಕೀಯ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಅದದ ನಂತರ ಮತ್ತೇ ಇನ್ನೊಂದು ದಂಡು ಶಾಸಕರು ದೆಹಲಿಗೆ ದೌಡಾಯಿಸಿದ್ದಾರೆ ಇವರೆಲ್ಲರೂ ಕೂಡ ಈಗ ಬಿಎಸ್‌ವೈ ಅವರನ್ನು ಬದಲಿಸಬೇಕು ಎಂಬ ಒಂದೇ ಅಜೆಂಡಾ ಆಗಿದೆ ಹೀಗಾಗಿ ಬಿಜೆಪಿ ಹೈಕಮಾಂಡ್‌ಗೂ ಕೂಡ ಇದು ಸೂಕ್ತ ಕಾಲ ಎನ್ನುವಂತಿದೆ ಯಾಕೆಂದರೆ ಇತರೆ ರಾಜ್ಯಗಳಲ್ಲೂ ಕೆಲ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಲು ಹೊರಟಿರುವ ಈ ಹೊತ್ತಿನಲ್ಲಿ ಕರ್ನಾಟಕದಲ್ಲೂ ಬದಲಾವಣೆ ಮಾಡುವ ಮನಸ್ಸು ಮಾಡಿದ್ದಾರೆ ಹೀಗಾಗಿ ಈ ಬಾರಿ ಯಡಿಯೂರಪ್ಪ ಅವರ ಬದಲಾವಣೆ ಬಹುತೇಕ ಪಕ್ಕಾ ಆಗಿದೆ.
ಸಿಎಂ ರೇಸ್‌ನಲ್ಲಿರುವವರು ಯಾರು?
ಆರಂಭದಲ್ಲೇ ಬಿ.ಎಸ್.ಯಡಿಯೂರಪ್ಪ ಅವರನ್ನು ಒಂದು ವರ್ಷದ ಕಾಲಕ್ಕೆ ಮಾತ್ರ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು ಆದರೆ ಹಲವು ಸನ್ನೀವೇಶಗಳು ಘಟನೆಗಳು ಅವರನ್ನು ಮುಂದುವರೆಸಿತು. ಅಲ್ಲದೆ ಪರ್ಯಾಯ ನಾಯಕತ್ವದ ಬಗ್ಗೆ ಬಿಜೆಪಿ ಹೈಕಮಾಂಡ್ ತಲೆ ಕೆಡಿಸಿಕೊಂಡಿತ್ತು ಹೀಗಾಗಿ ಬದಲಾವಣೆಯನ್ನು ಮುಂದೂಡತ್ತಲೇ ಬಂದಿತ್ತು ಆದರೆ ಈಗ ಬಿಜೆಪಿಗೆ ಅನಿವಾರ್ಯವಾಗಿ ಬಿಎಸ್‌ವೈ ಅವರನ್ನು ಬದಲಿಸಲೇ ಬೇಕಾದ ಸಮಯ ಬಂದಿದೆ.
ಈಗ ಬಿಎಸ್‌ವೈ ಬದಲಾದರೆ ಅವರ ಪುತ್ರ ವಿಜಯೇಂದ್ರ ಅವರನ್ನು ಉಪ ಮುಖ್ಯಮಂತ್ರಿ ಮಾಡಬೇಕು ಇಲ್ಲವೇ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು ಎನ್ನುವ ಬೇಡಿಕೆಯನ್ನು ಹೈಕಮಾಂಡ್ ಮುಂದಿಟ್ಟಿದೆ ಏಕೆಂದರೆ ಮುಂದಿನ ಬಾರಿ ಚುನಾವಣೆಗೆ ಅವರ ನೇತೃತ್ವದಲ್ಲೇ ನಡೆಯಬೇಕು ಎನ್ನುವ ಒಂದು ಸಂಗತಿ ಇನ್ನೂ ಬಿಎಸ್‌ವೈ ಅವರನ್ನು ಯಾವುದಾದರೊಂದು ರಾಜ್ಯದ ರಾಜ್ಯಪಾಲರನ್ನಾಗಿ ಮಾಡುವ ಮೂಲಕ ಲಿಂಗಾಯತರ ಮನವೊಲಿಸುವ ಉದ್ದೇಶವೂ ಈ ತಂತ್ರದ ಹಿಂದೆ ಇದೆ.
ಇನ್ನೂ ಮುಖ್ಯಮಂತ್ರಿಗಳು ಯಾರಾಗಬಹುದು ಎನ್ನುವುದಕ್ಕೆ ಸದ್ಯ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮೊದಲ ರೇಸ್‌ನಲ್ಲಿ ಇದ್ದಾರೆ ಬಹತೇಕ ಅವರು ಈಗಾಗಲೇ ಕೇಂದ್ರ ಗೃಹ ಸಚಿವ ಶಾ ಮತ್ತು ಮೋದಿ ಅವರನ್ನು ಭೇಟಿಯಾಗಿ ತಮ್ಮ ಒಲವು ಮೂಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ ಆದರೆ ಇನ್ನೊಂದು ಮೂಲದ ಪ್ರಕಾರ ಉಪ ಮುಖ್ಯಮಂತ್ರಿ ಡಾ,ಅಶ್ವತ್ಥ್ ನಾರಾಯಣ ಅವರನ್ನು ಮುಖ್ಯಮಂತ್ರಿ ಮಾಡಲು ಆರ್‌ಎಸ್‌ಎಸ್ ಉತ್ಸುಕವಾಗಿದೆ ಇದೆಲ್ಲದರ ಮಧ್ಯೆ ಸಚಿವ ಮುರುಗೇಶಸ್ ನಿರಾಣಿ ಈಗಾಗಲೆ ಶಾ ಮತ್ತು ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ ಹೀಗಾಗಿ ಈ ಮೂವರಲ್ಲಿ ಒಬ್ಬರು ಮುಖ್ಯಮಂತ್ರಿಯಾಗುವ ಸಾದ್ಯತೆಗಳಿದ್ದರೂ ಈ ನಡುವೆ ಬಸವರಾಜ ಬೊಮ್ಮಾಯಿ ಅವರ ಹೆಸರು ಕೂಡ ಕೇಳಿ ಬರುತ್ತಿದೆ ಆದರೆ ಕೊನೆ ಘಳಿಗೆಯಲ್ಲಿ ಬಿಜೆಪಿ ಹೈಕಮಾಂಡ್ ಯಾರ ಪರ ಒಲವು ತೋರಿಸುತ್ತದೆ ಎನ್ನುವುದು ಕುತೂಹಲ.