ಪಕ್ಷ ಸಂಘಟನೆಗೆ ಜೆಡಿಎಸ್ ಶಾಸಕರ ಕಾರ್ಯಾಗಾರ

Share

ರಾಮನಗರ,ಸೆ,೨೭: ಜೆಡಿಎಸ್ ಪಕ್ಷದ ಸಂಗಟನೆ ದೃಷ್ಟಿಯಿಂದ ಇಂದಿನಿಂದ ನಾಲ್ಕು ದಿನಗಳ ಕಾಲ ಶಾಸಕರಿಗೆ ಕಾರ್ಯಾಗಾ? ಏರ್ಪಡಿಸಲಾಗಿದೆ.

ರಾಮನಗರ ತಾಲೂಕಿನ ಕೇತಗಾನಹಳ್ಳಿ ಗ್ರಾಮದ ಬಳಿ ಇರುವ ತೋಟದಲ್ಲಿ ಕಾರ್ಯಾಗಾರ ನಡೆಯಲಿದ್ದು ಈ ಕಾರ್ಯಕ್ರಮವನ್ನು ಜೆಡಿಎಸ್ ವರಿಷ್ಠ ದೇವೇಗೌಡ ಚಾಲನೆ ನೀಡಲಿದ್ದಾರೆ ಮೊದಲ ಎರಡು ದಿನ ಶಾಸಕ ಸ್ಥಾನದ ಆಕಾಂಕ್ಷಿಗಳು ಮತ್ತು ಶಾಸಕರಿಗೆ ಕಾರ್ಯಾಗಾರ ನಡೆಯಲಿದ್ದು ಮೂರನೇ ದಿನ ಮಹಿಳೆಯರಿಗೆ ತರಬೇತಿ ನೀಡಲಾಗುತ್ತದೆ. ಬೂತ್ ಮಟ್ಟದಲ್ಲಿ ಮಹಿಳಾ ಸಂಘಟನೆ ಮಾಡುವ ಬಗ್ಗೆ ತರಬೇತಿ ನೀಡಲಾಗುತ್ತದೆ

ಈ ವೇಳೆ ದೇವೇಗೌಡರು ತಮ್ಮ ರಾಜಕೀಯ ಅನುಭವವನ್ನ ಹಂಚಿಕೊಳ್ಳಲಿದ್ದಾರೆ. ೭ ಸೆಷನ್‌ನಲ್ಲಿ ಕಾರ್ಯಾಗಾರ ನಡೆಯುತ್ತದೆ ಎಂದು ಹೇಳಿಕೆ ನೀಡಿದ ಕುಮಾರಸ್ವಾಮಿ, ಯಾವುದೇ ಪಕ್ಷದ ಜೊತೆ ಜೆಡಿಎಸ್ ಹೊಂದಾಣಿಕೆ ಇಲ್ಲ. ಸ್ವತಂತ್ರವಾಗಿ ಅಧಿಕಾರ ಪಡೆಯುವುದೇ ಜೆಡಿಎಸ್ ಪಕ್ಷದ ಗುರಿ ಅಂತ ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಪಕ್ಷದ ವತಿಯಿಂದ ಪ್ರಥಮ ಬಾರಿಗೆ ಹಮ್ಮಿಕೊಳ್ಳಲಾಗುತ್ತಿದೆ. ಯಾವುದೇ ಹೋಟೆಲ್ಗಳು ಬೇಡ ಎಂದು ತೋಟದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ಚುನಾವಣೆಗೆ ಜನತೆಯ ಪರ್ವ ಪ್ರಾರಂಭವಾಗಬೇಕು ಎಂದು ಪಕ್ಷದ ಸಂಘಟನೆಗೆ ಚಾಲನೆ ನೀಡಲಾಗುತ್ತದೆ. ನುರಿತ ತರಬೇತುದಾರರಿಂದ ಕಾರ್ಯಾಗಾರ ನಡೆಯುತ್ತದೆ. ತೋಟದ ಕೆಲಸದ ಜೊತೆಗೆ ಪಕ್ಷವನ್ನ ಸದೃಢಗೊಳಿಸುತ್ತಿದ್ದೇವೆ. ಮಿಷನ್ ೧೨೩ ಗುರಿ ಮುಟ್ಟಲು ತರಬೇತಿ ನಡೆಯುತ್ತಿದೆ. ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ. ಸ್ವತಂತ್ರವಾಗಿ ಅಧಿಕಾರ ಪಡೆಯುವುದೇ ನಮ್ಮ ಗುರಿಯಾಗಿದೆ. ಹೀಗಾಗಿ ಒಂದೂವರೆ ವರ್ಷದ ಮೊದಲೇ ಅಖಾಡಕ್ಕೆ ಇಳಿಯುತ್ತಿದ್ದೇವೆ ಅಂತ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.

 

Girl in a jacket
error: Content is protected !!