ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಆಯ್ಕೆ

Share

ಬೆಂಗಳೂರು,ಜು,೨೭: ಬಿಜೆಪಿಯ ಮಹತ್ತರ ಬೆಳವಣಿಗೆಯಲ್ಲಿ ಗೃಹಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಶಾಸಕಾಂಗ ಸಭೆಯಲ್ಲಿ ಆಯ್ಕೆಯಾಗಿದ್ದಾರೆ.
ಈಮೊದಲೇ ದೆಹಲಿಯಿಂದ ಬಂದಿದ್ದ ವೀಕ್ಷಕರು ಅವರ ಹೆಸರನ್ನೇ ಅಂತಿಮ ಮಾಡಿದ್ದರು ಆದರೆ ಸಂಪ್ರದಾಯದಂತೆ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಅವರ ಹೆಸರನ್ನು ಆಯ್ಕೆ ಮಾಡಬೇಕಿತ್ತು ಅದರಂತೆ ಇಂದು ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಸವರಾಜ್ ಬೊಮ್ಮಾಯಿ ಅವರ ಹೆಸರನ್ನು ಪ್ರಸ್ತಾಪಿಸಿದರು ಅದಕ್ಕೆ ಗೋವಿಂದ್ ಕಾರಜೋಳ ಅವರು ಅನುಮೋದನೆ ನೀಡಿದರು.
ಈ ಮೂಲಕ ರಾಜ್ಯದ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ನಾಳೆ ಅಧಿಕಾರ ಸ್ವೀಕರಿಸಲಿದ್ದಾರೆ.
ಕಳೆದ ಕೆಲ ದಿನಗಳಿಂದ ಮುಖ್ಯಮಂತ್ರಿ ರೇಸ್‌ನಲ್ಲಿ ಹಲವಾರು ಹೆಸರುಗಳು ಕೇಳಿ ಬರುತ್ತಿದ್ದವು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಷ್ಟ್ರೀಯ ಸಂಘಟಕ ಸಂತೋಷ್,ಶಾಸಕ ಅರವಿಂದ್ ಬೆಲ್ಲದ್,ಮುರುಗೇಶ್ ನಿರಾಣಿ ಹೆಸರುಗಳು ಚಾಲ್ತಿಯಲ್ಲಿದ್ದವು ಆದರೆ ಯಡಿಯೂರಪ್ಪ ಅವರ ಬೆಂಬಲಿಗರನ್ನೇ ಮುಖ್ಯಮಂತ್ರಿ ಮಾಡುವಂತೆ ಅವರು ವರಿಷ್ಠರಿಗೆ ಒತ್ತಾಯಿಸಿದ್ದರು ಈ ಹಿನ್ನೆಲೆಯಲ್ಲಿ ಬಸವರಾಜ್ ಬೊಮ್ಮಾಯಿ ಅವರು ನೂತನ ಸಿಎಂ ಆಗಿ ಆಯ್ಕೆಯಾಗಿದ್ದಾರೆ.
ಜನತಾ ಪರಿವಾರದಿಂದ ಬಂದ ಬಸವರಾಜ್ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಪುತ್ರ, ಅವರು ೨೦೦೮ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು ಅದಕ್ಕೂ ಮುನ್ನಅವರು ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನಪರಿಷತ್‌ಗೆ ಆಯ್ಕೆಯಾಗಿದ್ದರು. ಬಿಜೆಪಿಗೆ ಸೇರ್ಪಡೆಗೊಂಡ ನಂತರ ಅರಬಾವಿ ವಿಧಾನ ಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಬಿಜೆಪಿಗೆ ಸೇರ್ಪಡೆಗೊಂಡ ನಂತರ ಅವರು ಬಿಜೆಪಿಯ ನಿಷ್ಟಾವಂತರಾಗಿದ್ದವರು.
ಬಿಎಸ್‌ವೈ ಕೆಜೆಪಿ ಪಕ್ಷ ಕಟ್ಟಿದಾಗಲೂ ಅವರು ಅವರ ಹಿಂದೆ ತೆರಳಲಿಲ್ಲ, ನಂತರ ಪಂಚಮಸಾಲಿ ಸಮಾವೇಶಗಳಿಗೂ ಅವರು ತೆರಳಲಿಲ್ಲ ಎಲ್ಲವನ್ನೂ ಎಲ್ಲೂ ಗುರುತಿಸಿಕೊಳ್ಳದೆ ಇರುವ ಕಾರಣ ಅವರನ್ನು ಮತ್ತು ಅವರು ಎಲ್ಲಿಯೂ ದುಡುಕಿನ ನಿರ್ಧಾರಗಳನ್ನು ತಗೆದುಕೊಳ್ಳದ ಕಾರಣ ಲಿಂಗಾಯತ ನಾಯಕ ಮತ್ತು ಉತ್ತರ ಕರ್ನಾಟಕ ಭಾಗದ ನಾಯಕ ಎನ್ನುವ ಕಾರಣಕ್ಕೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದೆ.

Girl in a jacket
error: Content is protected !!