ನಿರಾಣಿ ದಿಡೀರ್ ದೆಹಲಿ ಬೇಟಿಗೆ ಹುಟ್ಟಿದ ಕುತೂಹಲ

Share

ಬೆಂಗಳೂರು,ಜು,೨೫: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇನ್ನೇನು ಅಧಿಕಾರ ಪದತ್ಯಾಗ ಮಾಡುತ್ತಾರೆ ಎನ್ನುವ ಮಾತುಗಳು ಕೇಳುತ್ತಿರುವ ಬೆನ್ನಲ್ಲೆ ದಿಡೀರ್ ಸಚಿವ ಮುರುಗೇಶ್ ನಿರಾಣಿ ದೆಹಲಿಗೆ ಪ್ರಯಾಣ ಮಾಡಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಈ ಮೂಲಕ ಬಿ.ಎಸ್ ಯಡಿಯೂರಪ್ಪ ನಿರ್ಗಮನದ ಬೆನ್ನಲ್ಲೇ ದೆಹಲಿ ಭೇಟಿ ತೀವ್ರ ಕುತೂಹಲ ಹುಟ್ಟಿಸಿದೆ. ಅಲ್ಲದೆ ಇನ್ನೊಂದೆಡೆ ಹೈಕಮಾಂಡ್ ಬುಲಾವ್ ಕೊಟ್ಟಿದೆಯಾ? ಅಥವಾ ಸ್ವಯಂ ದೆಹಲಿಗೆ ಹೊರಟ್ರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಇತ್ತ ಇಂದು ದೆಹಲಿಗೆ ಬಂದರೂ ರಾಷ್ಟ್ರೀಯ ನಾಯಕರ ಭೇಟಿ ಅನುಮಾನವಿದೆ. ಯಾಕಂದರೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಗೋವಾದಲ್ಲಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರು ಈಶಾನ್ಯ ರಾಜ್ಯಗಳ ಪ್ರವಾಸದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಆರೆಸ್‌ಎಸ್ ನಾಯಕರ ಭೇಟಿ ಮಾಡುತ್ತಾರಾ..? ಅಥವಾ ತಡರಾತ್ರಿ ಹೈಕಮಾಂಡ್ ನಾಯಕರ ಭೇಟಿ ಮಾಡ್ತಾರಾ ಎಂಬ ಪ್ರಶ್ನೆ ಎದ್ದಿದೆ. ಒಟ್ಟಿನಲ್ಲಿ ಸಚಿವರ ಏಕಾಏಕಿ ದೆಹಲಿ ಭೇಟಿ ತೀವ್ರ ಕುತೂಹ ಹುಟ್ಟಿಸಿದ್ದು, ಕಡೆ ಕ್ಷಣದ ಲಾಬಿಗಿಳಿದ್ರಾ ಅನ್ನೋ ಅನುಮಾನ ಕೂಡ ಎದ್ದಿದೆ.
ಈ ಹಿಂದೆ ಸಿಎಂ ರೇಸ್ ನಲ್ಲಿ ಮುರುಗೇಶ್ ನಿರಾಣಿ ಹೆಸರು ಕೇಳಿ ಬಂದಿತ್ತು. ಈ ವೇಳೆ ಪ್ರತಿಕ್ರಿಯಿಸಿದ್ದ ಸಚಿವರು, ನಾನು ಸಿಎಂ ರೇಸ್ ನಲ್ಲಿ ಇಲ್ಲ. ನಾನು ಸಿಎಂ ಆಕಾಂಕ್ಷಿ ಅಲ್ಲ. ಮಾಧ್ಯಮದವರೇ ನನ್ನ ಹೆಸರನ್ನ ಹೇಳುತ್ತಿರುವುದು. ನಾನು ಪಕ್ಷದ ಶಿಸ್ತಿನ ಸಿಪಾಯಿ ಹೈಕಮಾಂಡ್ ನನಗೆ ಕೊಟ್ಟ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿರ್ವಹಿಸಲಿದ್ದೇನೆ. ಅಲ್ಲದೆ ಯಡಿಯೂರಪ್ಪನವರೆ ಮುಂದಿನ ಎರಡು ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಹೇಳಿದ್ದರು.

Girl in a jacket
error: Content is protected !!