ಬೆಳಗಾವಿ,ಜು,೨೫: ನನಗೆ ಯಾರಿಗೂ ಸಿಗದ ಸ್ತಾನ-ಮಾನ ಸಿಕ್ಕಿದೆ,ಹೀಗಾಗಿ ನಾನು ಸಂತೃಪ್ತಿಯಿಂದ ಸಮಾಧಾನದಿಂದ ಇದ್ದೇನೆ ಹೈಕಮಾಂಡ್ ಯಾವುದೇನಿರ್ಧಾರ ಕೈಗೊಂಡರು ಅದನ್ನು ಗೌರವಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು,ಪಕ್ಷದಲ್ಲಿ ನಾವು ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ಸಿದ್ದರಾಮಯ್ಯರಂತಹ ನೂರು ಮಂದಿ ಬಂದರೂ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು
ನಾಯಕ ಸಿ.ಟಿ.ರವಿ ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯವಾದದ್ದು. ನಾನು ಹೈಕಮಾಂಡ್ ಹೇಳಿದ ಗೆರೆಯನ್ನೂ ದಾಟುವುದಿಲ್ಲ ಎಂದು ಸಹ ಅವರು ಸ್ಪಷ್ಟಪಡಿಸಿದರು. ಇದೇ ವೇಳೆ ಹೈಕಮಾಂಡ್ನಿಂz ಏನಾದರೂ ಸಂದೇಶ ಬಂದಿದೆಯಾ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದ ಸಿಎಮ ಯಡಿಯೂರಪ್ಪ, ಕಾದು ನೋಡೋಣ ಎಂದಷ್ಟೇ ತಿಳಿಸಿದರು
ಪಕ್ಷದ ರಾಷ್ಟ್ರೀಯ ನಾಯಕರು ಹೇಳಿದಂತೆ ನಾನು ಕೇಳುತ್ತೇನೆ. ನನಗೇನೂ ಗೊತ್ತಿಲ್ಲ, ಆ ಬಗ್ಗೆ ತಿಳಿದುಕೊಳ್ಳುವೆ. ಪ್ರಧಾನಿ, ಅಮಿತ್ ಶಾ, ನಡ್ಡಾ ಸೇರಿ ಎಲ್ಲರೂ ನಮ್ಮ ಜತೆಯಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳನ್ನೂ ಅಭಿವೃದ್ಧಿ ಮಾಡುತ್ತೇನೆ ಎಂದು ಅವರು ಸ್ಪಷ್ಟನೆ ನೀಡಿದರು.
ಳಗಾವಿ ಜಿಲ್ಲೆಯ ೭ ತಾಲೂಕುಗಳ ೧೧೩ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಜಿಲ್ಲೆಯಲ್ಲಿ ೮೯ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೃಷ್ಣಾ ನದಿ ಪಾತ್ರದ ಎಲ್ಲಾ ಜಲಾಶಯಗಳು ಭರ್ತಿ ಆಗಿವೆ. ಜಿಲ್ಲೆಯಲ್ಲಿ ವಿಪತ್ತು ನಿರ್ವಹಣಾ ತಂಡದಿಂದ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಪ್ರವಾಹ ಪರಿಹಾರ ಕಾರ್ಯಗಳಿಗೆ ಹಣಕಾಸಿನ ತೊಂದರೆ ಇಲ್ಲ. ಅಗತ್ಯವಿದ್ದಲ್ಲಿ ಮತ್ತಷ್ಟು ಹಣ ಬಿಡುಗಡೆ ಮಾಡುತ್ತೇವೆ. ಬೆಳಗಾವಿ ಜಿಲ್ಲೆಯಲ್ಲಿ ಶಾಶ್ವತ ಪರಿಹಾರ ಕೈಗೊಳ್ಳುತ್ತೇವೆ. ನಾಳೆ ಮಧ್ಯಾಹ್ನದ ಬಳಿಕ ಉತ್ತರ ಕನ್ನಡ ಜಿಲ್ಲೆಗೆ ತೆರಳಲು ಪ್ರಯತ್ನಿಸುತ್ತೇನೆ ಎಂದು ಸಿಎಂ ಯಡಿಯೂರಪ್ಪ ಮಾಹಿತಿ ನೀಡಿದರು.
ನಾನು ಸಂತೃಪ್ತಿಯಿಂದಿದ್ದೇನೆ;ಹೈಕಮಾಂಡ್ ನಿರ್ಧಾರಕ್ಕೂ ಬದ್ಧ-ಬಿಎಸ್ವೈ
Share