ಹಾಸನ,ಆ,೧೦: ತಮ್ಮ ಬಗ್ಗೆ ಸಚಿವ ಸೋಮಣ್ಣ ಅವರಂತೆ ಇತರೆ ಪಕ್ಷಗಳಿಂದ ಬಂದವನಲ್ಲ ನಾನು ಬಿಜೆಪಿ ಕಟ್ಟಾಳು ಹೊಂದಾಣಿಕೆ ರಾಜಕಾರಣಕ್ಕೆ ಹೊಂದಿಕೊಂಡವರಲ್ಲ ನಾವು ಅಷ್ಟಕ್ಕು ನನ್ನ ಬಗ್ಗೆ ಮಾತನಾಡಲು ಅವರ್ಯಾರು ಎಂದು ಶಾಸಕ ಪ್ರೀತಂ ಗೌಡ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿರುವ ಅವರು, ಸೋಮಣ್ಣ ಅವರ ಬಗ್ಗೆ ನಾನು ಮಾತನಾಡಿಲ್ಲ ನಾನು ಮಾತನಾಡಿರುವುದು ಸಿಎಂ ಬಸವರಾಜ್ ಬೊಮ್ಮಾಯಿ ಅವರ ಬಗ್ಗೆ ನಮ್ಮ ಕಾರ್ಯಕರ್ತರ ಧ್ವನಿಯಾಗಿ ಈ ಮಾತನ್ನು ನಾನು ಆಡಿದ್ದೇನೆ ಅದಕ್ಕೆ ಸಿಎಂ ಉತ್ತರ ಕೊಡುತ್ತಾರೆ ಇವತ್ತೋ ನಾಳೆಯೋ ಕರೆದು ಮಾತನಾಡುತ್ತಾರೆ ಹೀಗಿರುವಾಗ ಮಧ್ಯೆ ಇವರ್ಯಾರು ಎಂದು ಅವರು ಪ್ರಶ್ನಿಸಿದರು.
ಅಷ್ಟಕ್ಕು ನಾನು ಬಿಜೆಪಿ ಕಾರ್ಯಕರ್ತ ಇತರೆ ಪಕ್ಷಗಳಿಗೆ ಹೋಗುವವನಲ್ಲ, ಸೋಮಣ್ಣನಂತೆ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಪಕ್ಷದಿಂದ ಪಕ್ಷಕ್ಕೆ ಜಿಗಿದಿಲ್ಲ ಎಂದು ಹೇಳಿದರು
ನನ್ನ ಬಗ್ಗೆ ಮಾತನಾಡಲು ಸೋಮಣ್ಣ ಯಾರು-ಪ್ರೀತಂ ಗೌಡ ಪ್ರಶ್ನೆ
Share