ಡಾ.ದೇವಿ ಶೆಟ್ಟಿ ಗೆ ಕೇಂದ್ರ ಸಂಪುಟದಲ್ಲಿ ಸ್ಥಾನ..!?

Share

ಬೆಂಗಳೂರು ,ಮೇ,೨೫: ಇದು ಸತ್ಯವೋ ಸುಳ್ಳೋ ಗೊತ್ತಿಲ್ಲ ಹೀಗೊಂದು ಸುದ್ದಿ ಹರಡುತ್ತಿದೆ ಸದ್ಯದಲ್ಲೇ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು ಈ ಸಂಪುಟಕ್ಕೆ ನಾರಾಯಣ ಹೆಲ್ತ್‌ಕೇರ್ ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ ಅವರನ್ನು ಸೇರಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಅವರನ್ನು ಕೋವಿಡ್ ಮೂರನೇ ಅಲೆಯ ಟಾಸ್ಕ್‌ಪೋರ್ಸ್ ಸಮಿತಿ ಅಧ್ಯಕ್ಷರನ್ನಾಗಿ ನೇಮಕಮಾಡಲಾಗಿದ್ದು ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ಸಂಪುಟ ದರ್ಜೆಯ ಸಚಿವರನ್ನಾಗಿ ಮಾಡಲಿದ್ದಾರೆ ಎನ್ನಲಾಗುತ್ತಿದೆ.


ಹಾಲಿ ಇರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಡಾ.ಹರ್ಷವರ್ಧನ್ ಕೋವಿಡ್ ಎರಡನೇ ಅಲೆಯನ್ನು ನಿಭಾಯಿಸಲುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎನ್ನುವ ಆರೋಪವಿದೆ ಹೀಗಾಗಿ ಆ ಸ್ಥಾನಕ್ಕೆ ದೇವಿ ಶೆಟ್ಟಿ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಿದ್ದಾರೆ ಎನ್ನು ಮಾತುಗಳು ಕೇಳಿಬರುತ್ತಿವೆ.
ಕೋವಿಡ್ ಎರಡನೇ ಆಲೆಯ ವೇಳೆ ತಜ್ಞರು ನೀಡಿದ ಸಲಹೆಗಳನ್ನು ಕೇಂದ್ರ ಸರ್ಕಾರದ ಜೊತೆ ಸರಿಯಾಗಿ ಹಂಚಿಕೊಳ್ಳದೆ ಉದಾಸೀನ ತೋರಿದರು ಎಂಬ ಆಪಾದನೆ ಅವರ ಮೇಲಿದೆ. ಸದ್ಯ ದೇಶದಲ್ಲಿ ಕೋವಿಡ್ ಎರಡನೇ ಆಲೆ ತಾಂಡವವಾಡುತ್ತಿದ್ದು, ಈಗಾಗಲೇ ಸಾಕಷ್ಟು ಸಾವು ನೋವು ಸಂಭವಿಸಿದೆ.
ಮೂರನೇ ಆಲೆ ಬರುವುದನ್ನು ತಡೆಗಟ್ಟುವ ಕಾರಣಕ್ಕಾಗಿ ದೇವಿ ಪ್ರಸಾದ್ ಶೆಟ್ಟಿ ಅವರಿಗೆ ಕೇಂದ್ರದಲ್ಲಿ ಮಹತ್ವದ ಹುದ್ದೆ ಲಭಿಸಲಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬಂದಿದೆ. ಒಂದು ವೇಳೆ ಅವರು ಸಂಪುಟಕ್ಕೆ ಸೇರ್ಪಡೆಯಾದರೆ, ಬಿಹಾರ ಇಲ್ಲವೇ ಪಶ್ಚಿಮ ಬಂಗಾಳದಿಂದ ರಾಜ್ಯಸಭೆಗೆ ಆಯ್ಕೆಯಾಗಲಿದ್ದಾರೆ.
ಮುಂದಿನ ವರ್ಷದ ಪ್ರಾರಂಭದಲ್ಲಿ ಉತ್ತರ ಪ್ರದೇಶ, ಉತ್ತರಖಾಂಡ್ ಹಾಗೂ ವರ್ಷದ ಕೊನೆಯಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಮೂರು ರಾಜ್ಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿಶ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಜೆ.ಪಿ.ನಡ್ಡಾ ಅವರುಗಳು ಕೇಂದ್ರದಲ್ಲಿ ಸಚಿವ ಸಂಪುಟ ಪುರ್ನರಚನೆ ಮಾಡಲು ಮುಂದಾಗಿದ್ದಾರೆ.


ನೂತನವಾಗಿ ಸಂಪುಟಕ್ಕೆ ಜೋತಿರಾಧಿತ್ಯ ಸಿಂಧ್ಯಾ, ಸುಶೀಲ್ ಕುಮಾರ್ ಮೋದಿ,ಅಸ್ಸಾಂ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್, ಬಿಹಾರದ ಮಾಜಿ ಸಿಎಂ ಸುಶೀಲ್ ಮೋದಿ ಮತ್ತು ಒಡಿಶಾದ ಬೈಜಯಂತ್,ಭುಪೆಂದರ್ ಯಾದವ್, ಮೀನಾಕ್ಷಿ ಲೇಖಿ ಮತ್ತು ಜಿ ವಿ ಎಲ್ ನರಸಿಂಹ ರಾವ್ ಸೇರಿದಂತೆ ಹಲವರ ಹೆಸರುಗಳು ಮುಂಚೂಣಿಯಲ್ಲಿವೆ.ಕರ್ನಾಟಕದಿಂದ ಹಾವೇರಿ ಸಂಸದ ಶಿವಕುಮಾರ್ ಉದಾಸಿ ಹೆಸರು ಕೂಡ ಚಾಲ್ತೀಯಲ್ಲಿದೆ


ಮೇ ೨೬ ರಂದು ತಮ್ಮ ಎಂಟನೇ ವರ್ಷಕ್ಕೆ ಕಾಲಿಡಲಿರುವ ಮೋದಿ, ಹಣಕಾಸು, ಗೃಹ, ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಖಾತೆಗಳಿಗಳಲ್ಲಿ ಬದಲಾವಣೆ ಮಾಡದಿರಲು ತೀರ್ಮಾನಿಸಿದ್ದಾರೆ.
ಮೋದಿ ಅವರು,ಗೃಹ ಸಚಿವ ಷಾ ಅವರ ಮೇಲೆ ಅವಲಂಬಿತರಾಗಿದ್ದರೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಾಂಕ್ರಾಮಿಕ ಸಮಯದಲ್ಲಿ ಆಮ್ಲಜನಕವನ್ನು ಸುಗಮವಾಗಿ ಆಮದು ಮಾಡಿಕೊಳ್ಳುವುದನ್ನು ಸಾಬೀತುಪಡಿಸಿದ್ದಾರೆ. ಜೊತೆಗೆ ಐಎಎಫ್ ಮತ್ತು ಭಾರತೀಯ ನೌಕಾಪಡೆಗಳನ್ನು ದೂರದ ದೇಶಗಳಿಂದ ಕಂಟೇನರ್‌ಗಳನ್ನು ದಾಖಲೆಯ ಸಮಯದಲ್ಲಿ ಸಾಗಿಸಲು ಸಂಘಟಿಸಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ.
ವಿದೇಶಾಂಗ ಸಚಿವ ಡಾ.ಸುಬ್ರಹ್ಮಣ್ಯಂ ಜೈಶಂಕರ್ ಅವರು ಭಾರತದಲ್ಲಿ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಉತ್ಪಾದನೆಯನ್ನು ಹೆಚ್ಚಿಸಲು ಆಮದು ಮಾಡಿಕೊಳ್ಳಬೇಕಾದ ವಸ್ತುಗಳ ಬಗ್ಗೆ ಯುಎಸ್ ಮತ್ತು ಯುರೋಪಿಯನ್ ಒಕ್ಕೂಟದೊಂದಿಗೆ ಮಾತುಕತೆ ನಡೆಸುವಲ್ಲಿ ಉತ್ಸಾಹ ತೋರಿಸಿದ್ದಾರೆ.
ಕೋವಿಡ್ ಎರಡನೇ ತರಂಗದಲ್ಲಿ ರಾಜ್ಯಗಳು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಜೊತೆ ವ್ಯವಹರಿಸುವಾಗ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತೋರಿಸಿದ ನಿಷ್ಠೆಯನ್ನು ಮೋದಿ ಮೆಚ್ಚುಗೆಗೆ ಪಾತ್ರವಾಗಿದೆ
ಪ್ರಸ್ತುತ, ಆರು ಕ್ಯಾಬಿನೆಟ್ ಮಂತ್ರಿಗಳು ಎರಡು ಮತ್ತು ಹೆಚ್ಚಿನ ಖಾತೆಗಳನ್ನು ಹೊಂದಿದ್ದಾರೆ, ಅವರಲ್ಲಿ ಪ್ರಕಾಶ್ ಜಾವಡೇಕರ್, ಪಿಯೂಷ್ ಗೋಯಲ್ ಮತ್ತು ಹರ್ದೀಪ್ ಸಿಂಗ್ ಪುರಿ ಇದ್ದಾರೆ. ಮಾಹಿತಿ ಮತ್ತು ಪ್ರಸಾರ ಖಾತೆಯನ್ನು ಹಿರಿಯ ಸಚಿವರಿಗೆ ಮರು ನಿಯೋಜಿಸುವುದು ನಿಶ್ಚಿತ ಎಂದು ಮೂಲಗಳು ತಿಳಿಸಿವೆ.

Girl in a jacket
error: Content is protected !!