ಬೆಂಗಳೂರು, ಏ.೧: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಎಲ್ಲಾ ವರ್ಗದವರು ತೊಂದರೆಯಲ್ಲಿದ್ದು, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳಿದ್ದರೂ ಇದನ್ನು ಬಿಟ್ಟು ಜನರನ್ನು ವಿಭಜಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ನೂತನ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಮಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣೆ ಹತ್ತಿರ ಬರುತ್ತಿದ್ದಂತೆ ಕೋಮುವಾದವನ್ನು ಹೆಚ್ಚು ಮಾಡುತ್ತಿಲ್ಲಾರೆ. ಬಿಜೆಪಿ, ಸಂಘ ಪರಿಹಾರ ಸಂವಿಧಾನದ ವಿರುದ್ಧವಾಗಿ ಜನರ ಮನಸ್ಸನ್ನು ಕೋಮುವಾದದ ಆಧಾರದ ಮೇಲೆ ಕದಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಚುನಾವಣೆ ಎದುರಿಸಲು ನಾವು ಸನ್ನದ್ಧರಾಗಿದ್ದೇವೆ. ಇನ್ನೂ ಒಂದು ವರ್ಷ ಮಾತ್ರ ಬಾಕಿ ಇದೆ. ರಾಜ್ಯದಲ್ಲಿ ಅನೈತಿಕ ಬಿಜೆಪಿ ಸರ್ಕಾರ ಅಕಾರದಲ್ಲಿದೆ. ೨೦೦೮ ಮತ್ತು ಈಗ ಆಪರೇಷನ್ ಕಮಲದ ಮೂಲಕ ಬಿಜೆಪಿ ಅನೈತಿಕ ಸರ್ಕಾರ ರಚಿಸಿದೆ ಎಂದರು. ಅಧಿಕಾರಕ್ಕೆ ಬರುತ್ತಿದ್ದಂತೆ ಅನಗತ್ಯವಾಗಿ ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಜಾರಿಗೆ ತಂದರು. ಹಿಜಾಬ್ ವಿಷಯ, ಭಗವದ್ಗೀತೆ ಮತ್ತು ಈಗ ಹಲಾಲ್ ವಿಷಯ ಪ್ರಸ್ತಾಪಿಸುತ್ತಿದ್ದಾರೆ.
ಯುವಕರಲ್ಲಿ ಕೋಮು ವಿಷ ಬೀಜ ಬಿತ್ತಿ ದಾರಿ ತಪ್ಪಿಸುತ್ತಿದ್ದಾರೆ. ಜಾತ್ಯತೀತತೆಯಲ್ಲಿ ನಂಬಿಕೆ ಹಾಗೂ ಬದ್ಧತೆ ಇಟ್ಟುಕೊಂಡ ಕಾಂಗ್ರೆಸ್ ಪಕ್ಷ ಸಹಿಷ್ಷತೆ, ಸಹಭಾಳ್ವೆಗೆ ಒತ್ತು ನೀಡಿದೆ ಎಂದು ತಿಳಿಸಿದರು. ಸಾವಿರಾರು ವರ್ಷದಿಂದ ಆಚರಣೆಯಲ್ಲಿದ್ದ ಹಿಜಾಬ್ ವಿಷ ಯವನ್ನು ಆರಂಭದಲ್ಲೇ ಬೇರೆ ಕಡೆ ಹರಡದಂತೆ ತಡೆಯಲು ಸರ್ಕಾರ ತಡೆಯಬಹುದಿತ್ತು. ಆದರೆ ಬಜರಂಗದಳ, ಶ್ರೀರಾಮಸೇನೆ, ಎಸ್‌ಡಿಪಿ ಐ ಮತ್ತು ಸರ್ಕಾರದ ಕುಮ್ಮಕ್ಕಿನಿಂದ ವಿವಾದ ಹೆಚ್ಚಾಗಿದೆ ಎಂದರು.