ಶಿವಮೊಗ್ಗ, ಅ ೨೨: ಹಾನಗಲ್,ಸಿಂಧಿಗಿ ಉಪ ಚುನಾವಣೆಯ ಪ್ರಚಾರದವೇಳೆ ನಡೆಯುತ್ತಿರುವ ನಾಯಕರುಗಳ ವ್ಯಯಕ್ತಿಕ ಹೇಳಿಕೆಗಳಿಗೆ ಈಗ ದಿಕ್ಕು ತಪ್ಪುತ್ತಿದೆ ದಿನಕ್ಕೊಬ್ಬರು ತೀರ ವೈಯಕ್ತಿಕ ಹೇಳಿಕೆಗಳ ಮೂಲಕ ಪ್ರಚಾರಕ್ಕಿಂತ ಹೆಚ್ಚಾಗಿ ವಾಗ್ದಾಳಿಗಳೇ ಮುಂದುವರೆಯುತ್ತಿವೆ.
ತೀರ ಕೆಳಹಂತದ ಮಾತುಗಳಿದಿದ್ದಾರೆ. ಬಿಜೆಪಿ ಎಚ್‌ಡಿಕೆ ಕುಮಾರಸ್ವಾಮಿ ಅವರ ದ್ವಿಪತ್ನಿತ್ವದ ಬಗ್ಗೆ ಪ್ರಸ್ತಾಪ ಮಾಡಿದ್ದರೆ ಡಿಕೆಶಿ ರಮೇಶ್ ಜಾರಕಿಹೊಳಿ ಮಂಚದ ಪ್ರಸ್ತಾಪ ಮಾಡಿದ್ದರು ಕಟೀಲು ರಾಹುಲ್ ಗಾಂಧಿ ವಿರುದ್ಧ ಡ್ರಗ್ಸ್‌ಪೆಂಡರ್ ಎಂದು ಹೇಳಿದ್ದರು ಹೀಗೆ ದಿನ ಒನ್ನೊಂದು ರೀತಿಯ ಅಸಹ್ಯ ರೀತಿಯಲ್ಲಿ ಹೇಳಿಕೆಗಳು ಹರಿದು ಬರುತ್ತಿವೆ ಈಗ ಅದಕ್ಕೆ ಮತ್ತೊಂದು ವಿವಾದ ಸೇರಿಕೊಂಡಿದೆ
ಕಟೀಲ್ ಅವರ ಹೇಳಿಕೆಗೆ ಮಾಜಿ ಶಾಸಕ ಬೇಳೂರು ಗೋಪಾಲ ಕೃಷ್ಣ ಹರಿಹಾಯ್ದಿದ್ದು “ನಮ್ಮ ರಾಷ್ಟ್ರೀಯ ನಾಯಕರ ಬಗ್ಗೆ ನಳಿನ್ ಕುಮಾರ್ ಕಟೀಲ್ ಹಗುರವಾಗಿ ಮಾತನಾಡಿ, ನಾಲಗೆಯನ್ನು ಹೊರಹಾಕಿದ್ದಾರೆ. ಇದನ್ನು ನಾನು ಖಂಡನೆ ಮಾಡುತ್ತೇನೆ, ಮಂಗಳೂರಿಗೆ ಬೆಂಕಿ ಹಚ್ಚುತ್ತೇನೆ ಎಂದು ಹೇಳಿದವರು, ವಿಧಾನಸೌಧದಲ್ಲಿ ಬ್ಲೂಫಿಲಂ ನೋಡಿದವರು ಬಿಜೆಪಿಯಲ್ಲಿ ಇದ್ದಾರೆ. ರೇಪ್ ಕೇಸಿನಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಸಿಕ್ಕಿಹಾಕಿಕೊಂಡ ಮಂತ್ರಿಗಳು ಇರುವುದು ಬಿಜೆಪಿಯಲ್ಲಿ”ಎಂದಿದ್ದಾರೆ.
ಹಾಗೆ ಮುಂದುವರೆದು”ಇಂತಹ ಪವಿತ್ರ ಬಿಜೆಪಿಯ ನಾಯಕರನ್ನು ಬಿಟ್ಟು ಆ ಕಟೀಲ್ ನಮ್ಮ ನಾಯಕನ ಬಗ್ಗೆ ಮಾತನಾಡಿದ್ದಾನೆ. ಇವನು ಸೀರೆ ಉಡಿಸಿದರೆ ಹೆಣ್ಣು ಅಲ್ಲಾ ಗಂಡೂ ಅಲ್ಲಾ ಎನ್ನುವ ಮಾತನ್ನು ಹೇಳಬೇಕಾಗುತ್ತದೆ. ಅವನು ಹೆಣ್ಣೋ, ಗಂಡೋ ಎನ್ನುವುದನ್ನು ಪರಿಶೀಲನೆ ಮಾಡಬೇಕಾಗುತ್ತದೆ. ರಾಜ್ಯಾಧ್ಯಕ್ಷರಾಗಿ ಅವರಿಗೆ ನಾಚಿಕೆಯಾಗಬೇಕು, ನಮ್ಮ ರಾಷ್ಟ್ರೀಯ ನಾಯಕರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅವರಿಗಿಲ್ಲ”ಎಂದು ಬೇಳೂರು ಗೋಪಾಲಕೃಷ್ಣ ಕಿಡಿಕಾರಿದ್ದಾರೆ.
“ಬಿಜೆಪಿಯಲ್ಲೇ ಕೊಳೆತು ನಾರುತ್ತಿದೆ, ಅದನ್ನು ನೋಡುವುದು ಬಿಟ್ಟು, ನಮ್ಮ ನಾಯಕರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಖಂಡಿಸಬೇಕಾಗುತ್ತದೆ. ಅವರು ಎಚ್ಚರಿಕೆಯಿಂದ ಇರಬೇಕಾಗುತ್ತದೆ, ಅತ್ಯಾಚಾರಿಗಳನ್ನು ಮಗ್ಗುಲಲ್ಲೇ ಇಟ್ಟುಕೊಂಡು ನಮ್ಮ ನಾಯಕರ ಬಗ್ಗೆ ಮಾತನಾಡಲು ಬರುತ್ತಾರೆ”ಎನ್ನುವ ಮೂಲಕ ಈಗ ಎಲ್ಲರ ಗಮನ ಸೆಳದಿದ್ದಾರೆ.
ಕಟೀಲ್ ಗೆ ಸೀರೆ ಉಡಿಸಿದರೆ ಹೆಣ್ಣೂ ಅಲ್ಲಾ ಗಂಡೂ ಅಲ್ಲಾ- ಬೇಳೂರು
Share