ಅರುಣ್ ಸಿಂಗ್ ಮಧ್ಯಪ್ರವೇಶಕ್ಕೆ ಬಿಎಸ್‌ವೈ ಭಿನ್ನರ ವಿರೋಧ

Share

ಬೆಂಗಳೂರು,ಜೂ,೧೪: ಸಿಎಂ ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಕುರಿತಂತೆ ಬಿಜೆಪಿ ಪಾಳೆಯದಲ್ಲಿ ದಿನ ದಿನಕ್ಕೆ ಭಿನ್ನ ದ್ವನಿಗಳು ಏಳುತ್ತಿದ್ದು ಆಂತರ್ಯದ ಜ್ವಾಲೆ ಮತ್ತಷ್ಟು ಬಿಗಿಡಾಯಿಸುತ್ತಿದೆ.
ಹೌದು ,ಬಿಎಸ್‌ವೈ ಬದಲಾವಣೆ ವಿಚಾರದಲ್ಲಿ ಈಗ ಒಂದು ಟೀಂ ಗಟ್ಟಿ ಧ್ವನಿಎತ್ತಿದ್ದು ಬುಧವಾರ ರಾಜ್ಯಕ್ಕೆ ಆಗಮಿಸಲಿರುವ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಮೊದಲು ಶಾಸಕಾಂಗ ಸಭೆ ಕರೆಯಬೇಕು ಎನ್ನುವ ಒತ್ತಾಯಮಾಡಲಿದ್ದಾರೆ.


ಹೆಸರು ಹೇಳಲು ಇಚ್ಚಿಸದ ಬಿಜೆಪಿಯ ಹಿರಿಯ ನಾಯಕರು ಅರುಣ್ ಸಿಂಗ್ ಬರುತ್ತಿರುವುದು ಭಿನ್ನರನ್ನು ಧ್ವನಿಯನ್ನು ಅಡಗಿಸಲು ಅದಕ್ಕೂ ಮೊದಲು ಶಾಸಕಾಂಗ ಸಭೆ ಕರೆಯಬೇಕು ಎಲ್ಲರಿಗೂ ಅವರ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ನೀಡಬೇಕು ಇಲ್ಲದಿದ್ದರೆ ಸಭೆಗೆ ಯಾರು ಹಾಜರಾಗುವುದಿಲ್ಲ ಎನ್ನುವ ನಿಲುವುನ್ನು ತಾಳಿರುವುದಾಗಿ ತಿಳಿಸಿದ್ದಾರೆ.
ಅರುಣ್ ಸಿಂಗ್ ಅವರು ಬಿಎಸ್‌ವೈ ಪರ ಇದ್ದಾರೆ ಅವರೇ ಇನ್ನೂ ಎರಡು ವರ್ಷ ಮುಂದುವರೆಯಲಿದ್ದಾರೆ ಎನ್ನುವ ನಿಲುವು ತಾಳಿದ್ದಾರೆ ಇದು ಸರಿ ಅಲ್ಲ ಹಾಗಾಗಿ ಅವರ ಮಾತನ್ನು ಯಾರು ಕೇಳುವ ಇಚ್ಚೆ ಇಲ್ಲ ಎನ್ನುವ ಮೂಲಕ ಅವರ ಸಂಧನದ ಈ ಸಭೆಗಳಿಗೆ ನಮ್ಮ ಒಲವು ಇಲ್ಲ ಎಂದಿದ್ದಾರೆ.

ಸಿಂಗ್ ರಾಜ್ಯಕ್ಕೆ ಆಗಮಿಸಿದಾಗ ಗ, ಅವರು ಶಾಸಕರನ್ನು ಭೇಟಿ ಮಾಡುವ ಮೊದಲು ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಸಂವಹನ ನಡೆಸಲಿದ್ದಾರೆ. ಶಾಸಕರಾದ ಬಸನಗೌಡ ಯತ್ನಾಳ್, ಅರವಿಂದ್ ಬೆಲ್ಲದಮತ್ತು ಜಿ.ಎಚ್. ತಿಪ್ಪಾರೆಡ್ಡಿ ಸಚಿವ ಸಿ.ಪಿ. ಯೋಗೇಶ್ವರ, ಸುನಿಲ್ ಕುಮಾರ್ ಮತ್ತು ಇನ್ನೂ ಕೆಲವರನ್ನೊಳಗೊಂಡ ಒಂದು ಗುಂಪು, ಮೊದಲು ಶಾಸಕಾಂಗ ಪಕ್ಷದ ಸಭೆಗೆ ಸಿಂಗ್ ಕರೆ ನೀಡಬೇಕೆಂದು ಒತ್ತಾಯಿಸಲು ಯೋಜಿಸಿದೆ.


ಮೊದಲು ಸಚಿವರನ್ನು ಭೇಟಿಯಾಗುವುದಾಗಿ ಸಿಂಗ್ ಸೂಚಿಸಿದ್ದರು ಮತ್ತು ಅಗತ್ಯವಿದ್ದರೆ ಶಾಸಕಾಂಗ ಸಭೆ ನಡೆಸಲು ಸಿಂಗ್ ತಯಾರಾಗಿರಬಹುದು ಆದರೆ ಅಗತ್ಯವಾದರೆ ‘ಗೋ ಬ್ಯಾಕ್, ಅರುಣ್ ಸಿಂಗ್’ ಅಭಿಯಾನವನ್ನು ಪ್ರಾರಂಭಿಸಲು ಸಹ ಸಿಂಗ್ ವಿರೋಧಿ ಬಣ ಸಿದ್ದವಾಗಿದೆ ಎಂಬ ಆತಂಕವಿದೆ.


ಯಡಿಯೂರಪ್ಪ ಅವರು ಇನ್ನೂ ಎರಡು ವರ್ಷಗಳ ಕಾಲ ಸಿಎಂ ಆಗಿ ಉಳಿಯುತ್ತಾರೆ ಎಂದು ಮಾಧ್ಯಮಗಳಿಗೆ ತಿಳಿಸಲು ಸಿಎಂಗೆ ಅಧಿಕಾರ ನೀಡಿದ ಕಾರಣವನ್ನು ಸಿಂಗ್ ಅವರಲ್ಲಿ ಕೇಳಲು ಈ ಗುಂಪು ಬಯಸಿದೆ.ಎನ್ನುವುದಾದಲ್ಲಿ ಈ ಭೇಟಿಯ ಉದ್ದೇಶವೇನು ಎನ್ನುವುದು ಈಗಿನ ಪ್ರಶ್ನೆಯಾಗಿ ಉಳಿದಿದೆ.

Girl in a jacket
error: Content is protected !!