ಅಂತೂ ಸಚಿವ ಸಂಪುಟಕ್ಕೆ ಸಿಕ್ತು ಗ್ರೀನ್ ಸಿಗ್ನಲ್-ಹಿರಿಯರಿಗೆ ಕೊಕ್

Share

ಬೆಂಗಳೂರು,ಆ. ೦೪:ಅಂತೂ ಇಂತೂ ಮೂರುದಿನಗಳ ಕಸರತ್ತಿನ ನಡುವೆ ಇಂದು ಹಿರಿಯ ನಾಯಕರಿಗೆ ಕೊಕ್ ಕೊಟ್ಟು ಒಂದಿಷ್ಟು ಹೊಸ ಮುಖಗಳಿಗೆ ಮಣೆ ಹಾಕಿ ಬಿಎಸ್‌ವೈ ಒತ್ತಡಕ್ಕೆ ಮಣಿದು ಪುತ್ರ ಬಿ.ಎಸ್.ವಿಜಯೇಂದ್ರ ಅವರಿಗೂ ಅವಕಾಶ ನೀಡಿದ ಸಚಿವ ಸಂಪುಟ ಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ.
ಅತ್ತ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ಬೆಂಗಳೂರಿಗೆ ಮುಖಮಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ಮಧ್ಯಾಹ್ನ ನೂತನ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ಸಚಿವರ ಪ್ರಮಾಣವಚನ ಸಮಾರಂಭ ನಡೆಯಲಿದೆ
ಇದೇ ವೇಳೆ, ಕೆಲ ಸಚಿವರಿಗೆ ನಿನ್ನೆ ರಾತ್ರಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಡೆಯಿಂದ ಪ್ರಮಾಣ ವಚನಕ್ಕೆ ಸಿದ್ಧರಾಗುವಂತೆ ಕರೆ ಬಂದಿದೆ. ಬಿ ಸಿ ಪಾಟೀಲ್, ಪೂರ್ಣಿಮಾ ಶ್ರೀನಿವಾಸ್ ಮೊದಲಾದವರು ತಮಗೆ ಕರೆ ಬಂದಿರುವುದನ್ನು ಖಚಿತಪಡಿಸಿದ್ದಾರೆ.
ಅದರಲ್ಲಿರುವ ಪ್ರಕಾರ ಮುನಿರತ್ನ, ಅರಗ ಜ್ಞಾನೇಂದ್ರ, ಕೆ ಪಿ ಮಾಧುಸ್ವಾಮಿ, ಆರ್ ಅಶೋಕ್ ಮೊದಲಾದವರ ಹೆಸರು ಇದೆ. ಸಂಪುಟದಿಂದ ಹೊರಹೋಗುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದ ಕೆ ಎಸ್ ಈಶ್ವರಪ್ಪ ಅವರನ್ನ ಸಂಪುಟದಲ್ಲಿ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ಈಶ್ವರಪ್ಪ ಪರವಾಗಿ ಪ್ರಭಾವಿ ಆರೆಸ್ಸೆಸ್ ನಾಯಕರೊಬ್ಬರು ಶಿಫಾರಸು ಮಾಡಿರುವುದು ತಿಳಿದುಬಂದಿದೆ.
ಇನ್ನು, ಸ್ಪೀಕರ್ ಹುದ್ದೆ ಸಾಕಾಗಿದೆ. ಸಚಿವ ಸ್ಥಾನ ಬೇಕು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಮಾಡಿಕೊಂಡ ಮನವಿಯನ್ನೂ ಪರಿಗಣಿಸಲಾಗಿರುವುದು ತಿಳಿದುಬಂದಿದೆ. ಅವರ ಹೆಸರು ಸಂಭಾವ್ಯರ ಪಟ್ಟಿಯಲ್ಲಿದೆ. ಹಿರಿಯ ನಾಯಕರ ಪೈಕಿ ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಪ್ರಭು ಚವ್ಹಾಣ್, ವಿ ಸೋಮಣ್ಣ, ಶಶಿಕಲಾ ಜೊಲ್ಲೆ ಅವರನ್ನ ಸಂಪುಟದಿಂದ ಕೈಬಿಡುವುದು ಬಹುತೇಕ ಖಚಿತವಾಗಿದೆ. ಶೆಟ್ಟರ್ ಈಗಾಗಲೇ ತಾನು ಮಂತ್ರಿ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿಯಾಗಿದೆ. ಸಿಎಂ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿದ್ದ ಅರವಿಂದ್ ಬೆಲ್ಲದ್ ಅವರಿಗೆ ಮಂತ್ರಿ ಸ್ಥಾನವೂ ದಕ್ಕಿದಂತಿಲ್ಲ. ಅವರ ಬದಲು ಶಂಕರ ಪಾಟೀಲ ಮುನೇನಕೊಪ್ಪ ಅವರನ್ನ ಮಂತ್ರಿಮಂಡಳಕ್ಕೆ ಸೇರಿಸಲು ನಿರ್ಧರಿಸಬಹುದು. ಕಳೆದ ಕ್ಯಾಬಿನೆಟ್?ನಲ್ಲಿ ಮಂತ್ರಿ ಸ್ಥಾನ ಇಲ್ಲದೆ ನಿರಾಶೆಗೊಂಡಿದ್ದ ಮುನಿರತ್ನಗೆ ಈ ಬಾರಿ ಚಾನ್ಸ್ ಒಲಿದುಬಂದಂತಿದೆ. ಶಶಿಕಲಾ ಜೊಲ್ಲೆ ಬದಲು ಪೂರ್ಣಿಮಾ ಶ್ರೀನಿವಾಸ್‌ಗೆ ಮಣೆಹಾಕಲಾಗಿದೆ.

ಇನ್ನು, ವರಿಷ್ಠರು ಅಳೆದು ತೂಗಿ ಬಿ ವೈ ವಿಜಯೇಂದ್ರ ಅವರಿಗೆ ಮಂತ್ರಿ ಭಾಗ್ಯ ಕಲ್ಪಿಸುವ ನಿರೀಕ್ಷೆ ಇದೆ. ಬಿಎಸ್‌ವೈ ಸಂಪುಟದಲ್ಲಿ ಇಲ್ಲದ ದತ್ತಾತ್ರೇಯ ಪಾಟೀಲ ರೇವೂರ, ಎಸ್ ಅಂಗಾರ, ಸುನೀಲ್ ಕುಮಾರ್, ಅರಗ ಜ್ಞಾನೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ಬಾಲಚಂದ್ರ ಜಾರಕಿಹೊಳಿ, ಮುನಿರತ್ನ ಮತ್ತು ಶಂಕರ್ ಪಾಟೀಲ ಮುನೇನಕೊಪ್ಪ, ಪೂರ್ಣಿಮಾ ಶ್ರೀನಿವಾಸ್, ಬಿ ವೈ ವಿಜಯೇಂದ್ರ ಅವರು ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ ಎನ್ನಲಾಗಿದೆ.

ಸಂಭಾವ್ಯ ಸಚಿವರ ಹೊಸ ಪಟ್ಟಿ:

ಕೆ ಎಸ್ ಈಶ್ವರಪ್ಪಆರ್ ಅಶೋಕ್

ಡಾ. ಅಶ್ವಥ ನಾರಾಯಣ

ಎಸ್ ಟಿ ಸೋಮಶೇಖರ್

ಭೈರತಿ ಬಸವರಾಜು

ಸಿ ಪಿ ಯೋಗೇಶ್ವರ

ಡಾ. ಸುಧಾಕರ್

ಬಿ ಶ್ರೀರಾಮುಲು

ಕೆ ಪಿ ಮಾಧುಸ್ವಾಮಿ

ಪೂರ್ಣಿಮಾ ಶ್ರೀನಿವಾಸ್

ಉಮೇಶ್ ಕತ್ತಿ

ರಾಜುಗೌಡ ಪಾಟೀಲ್

ಮುರುಗೇಶ್ ನಿರಾಣಿ

ಆನಂದ್ ಸಿಂಗ್

ಬಿ ವೈ ವಿಜಯೇಂದ್ರ

ಅರಗ ಜ್ಞಾನೇಂದ್ರ

ಎಂ ಪಿ ಕುಮಾರಸ್ವಾಮಿ

ದತ್ತಾತ್ರೇಯ ಪಾಟೀಲ್ ರೇವೂರ

ಕೆ ಗೋಪಾಲಯ್ಯ

ಬಾಲಚಂದ್ರ ಜಾರಕಿಹೊಳಿ

ಶಿವರಾಂ ಹೆಬ್ಬಾರ್

ಬಿ ಸಿ ಪಾಟೀಲ್

ಎಸ್ ಅಂಗಾರ

ಸುನೀಲ್ ಕುಮಾರ್

ನಾರಾಯಣಗೌಡ

ವಿಶ್ವೇಶ್ವರ ಹೆಗಡೆ ಕಾಗೇರಿ

ಮುನಿರತ್ನ

ಶಂಕರ ಪಾಟೀಲ ಮುನೇನಕೊಪ್ಪ
ಸೋಮಣ್ಣ, ಚವ್ಹಾಣ್

Girl in a jacket
error: Content is protected !!