ಲಖನೌ ತಂಡವನ್ನು ಮಣಿಸಿದ ಪಂಜಾಬ್ ತಂಡಕ್ಕೆ ಎರಡನೇ ಗೆಲುವು
by-ಕೆಂಧೂಳಿ
ಲಕ್ನೋ,ಏ,೦೨– ಪಂಜಾಪ್ ಕಿಂಗ್ಸ್ ತಂಡವು ಲಖನೌಸೂಪರ್ ಜೈಂಟ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿದೆ. ಮೊದಲ ಬ್ಯಾಟಿಂಗ್ ಮಾಡಿದ ಲಕ್ನೋ ತಂಡ ೨೦ ಓವರ್ಗಳಲ್ಲಿ ೭ ವಿಕೆಟ್‌ಗೆ ೧೭೧ ರನ್ ಗಳಿಸಿತು. ನಂತರ ಆಡಿದ ಪಂಚಾಪ್ ತಂಡ ಸುಲಭಗುರಿ ತಲುಪಿ ಎರಡನೇ ಜಯ ಸಾಧಿಸಿತು.
. ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಲ್‌ಎಸ್‌ಜಿ ತಂಡ ೧೭೨ ರನ್‌ಗಳ ಗುರಿಯನ್ನು ನಿಗದಿಪಡಿಸಿತ್ತು. ಇದನ್ನು ಪಿಬಿಕೆಎಸ್ ೧೬.೨ ಓವರ್‌ಗಳಲ್ಲಿ ಸುಲಭವಾಗಿ ಬೆನ್ನಟ್ಟಿತು. ಪ್ರಭ್ಸಿಮ್ರನ್ ಸಿಂಗ್ (೩೪ ಎಸೆತಗಳಲ್ಲಿ ೬೯) ಮತ್ತು ಶ್ರೇಯಸ್ ಅಯ್ಯರ್ (೩೦ ಎಸೆತಗಳಲ್ಲಿ ಅಜೇಯ ೫೨) ಅರ್ಧಶತಕ ಬಾರಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ ನಿಗದಿತ ೨೦ ಓವರ್ಗಳಲ್ಲಿ ೭ ವಿಕೆಟ್‌ಗೆ ೧೭೧ ರನ್ ಗಳಿಸಿತು. ಎಲ್‌ಎಸ್‌ಜಿ ಪರ ನಿಕೋಲಸ್ ಪೂರನ್ ಅತಿ ಹೆಚ್ಚು ರನ್ ಗಳಿಸಿದರು. ೩೦ ಎಸೆತಗಳಲ್ಲಿ ಐದು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ ೪೪ ರನ್ ಗಳಿಸಿದರು. ಪಂಜಾಬ್ ಪರ ಅರ್ಶ್‌ದೀಪ್ ಸಿಂಗ್ ಮೂರು ವಿಕೆಟ್ ಪಡೆದರು. ಲಾಕಿ ಫರ್ಗುಸನ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಯುಜ್ವೇಂದ್ರ ಚಾಹಲ್ ತಲಾ ಒಂದು ವಿಕೆಟ್ ಪಡೆದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಬಂದ ಲಕ್ನೋ ತಂಡದ ಆರಂಭ ಕೆಟ್ಟದಾಗಿತ್ತು. ಮಿಚೆಲ್ ಮಾರ್ಷ್ ಮೊದಲ ಓವರ್‌ನಲ್ಲಿ ಖಾತೆ ತೆರೆಯದೆ ಔಟಾದರು. ಅಂತಹ ಪರಿಸ್ಥಿತಿಯಲ್ಲಿ, ಐಡೆನ್ ಮಾರ್ಕ್ರಾಮ್ ಎರಡನೇ ವಿಕೆಟ್‌ಗೆ ಪೂರನ್ ಜೊತೆ ೩೧ ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.
ಮಾರ್ಕ್ರಾಮ್ ೧೮ ಎಸೆತಗಳಲ್ಲಿ ೨೮ ರನ್ ಗಳಿಸಿದರು. ಅವರು ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ನಾಯಕ ರಿಷಭ್ ಪಂತ್ (೨) ಮತ್ತೊಮ್ಮೆ ವಿಫಲರಾದರು. ಇದಾದ ನಂತರ, ಪೂರನ್ ಮತ್ತು ಆಯುಷ್ ಬಡೋನಿ ಜೊತೆ ನಾಲ್ಕನೇ ವಿಕೆಟ್‌ಗೆ ೫೪ ರನ್‌ಗಳ ಜೊತೆಯಾಟ ನೀಡಿದರು. ಪೂರನ್ ೧೨ನೇ ಓವರ್‌ನಲ್ಲಿ ಅರ್ಧಶತಕ ಗಳಿಸಲು ವಿಫಲರಾದರು. ಬಡೋನಿ ಮತ್ತು ಡೇವಿಡ್ ಮಿಲ್ಲರ್ ೧೮ ಎಸೆತಗಳಲ್ಲಿ ೩೦ ರನ್ ಜೊತೆಯಾಟ ಆಡಿದರು. ಬಡೋನಿ ೩೩ ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳಿಂದ ೪೧ ರನ್ ಗಳಿಸಿದರು. ಸಮದ್ ೧೨ ಎಸೆತಗಳಲ್ಲಿ ೨೭ ರನ್ ಗಳಿಸಿದರು. ಅವರು ಎರಡು ಬೌಂಡರಿಗಳು ಮತ್ತು ಅಷ್ಟೇ ಸಿಕ್ಸರ್‌ಗಳನ್ನು ಬಾರಿಸಿದರು. ಇಬ್ಬರೂ ೨೦ನೇ ಓವರ್‌ನಲ್ಲಿ ಔಟಾದರು.ಪಂಜಾಬ್ ಪರ ಪಿಯೂಶ್ ಆರ್ಯ ೯ ರನ್ ಗಳಿಸಿ ಔಟಾದರು. ನೆಹಾಲ್ ವಧೇರಾ ಅಜೇಯ ೪೩ ರನ್ ಬಾರಿಸಿದರು. ದಿಗ್ವೇಶ್ ರಥಿ ೨ ವಿಕೆಟ್ ಪಡೆದರು.