ರೋಚಕ ಜಯ ಸಾಧಿಸಿದ ರಾಯಲ್ಸ್ ಚಾಲೆಂಜರ‍್ಸ

Share

ಬೆಂಗಳೂರು,ಮೇ,೦೪-ಕೊನೆಯ ಎಸೆತದವರೆಗೂ ರೋಚಕ ಉಳಿಸಿಕೊಂಡು ಕೊನೆಯ ಬಾಲಿನಲ್ಲಿ ಹೊಡೆದ ಹೊಡೆತ ಜಯದತ್ತ ಸಾಗಿತು, ಇದು ಕ್ರಿಕೆಟ್ ಅಭಿಮಾನಿಗಳಿಗೆ ಒಂದು ರೀತಿ ಕುತೂಹಲದಂತಿತ್ತು.
ಶನಿವಾರ ಬೆಂಗಳೂರಿನಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ‍್ಸ ಮತ್ತು ಚೆನೈ ಸೂಪರ್ ಕಿಂಗ್ಸ್ ಐಪಿಎಲ್ ಪಂದ್ಯದಲ್ಲಿ ಬೆಂಗಳೂರು ರಾಯಲ್ಸ್ ಚಾಲೆಂಜರ‍್ಸ್ ತಂಡ ರೋಚಕ ಜಯಗಳಿಸಿತು.

ಕೊನೆಯ ಎಸೆತದವರೆಗೂ ರೋಚಕ ರಸದೌತಣ ನೀಡಿದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿಯು ೨ ರನ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಎದುರು ಜಯಿಸಿತು. ಇದರೊಂದಿಗೆ ಪ್ಲೇ ಆಫ್ ಹೊಸ್ತಿಲಿಗೆ ಬಂದು ನಿಂತಿತು. ವೇಗದ ಬೌಲರ್‌ಗಳಾದ ಲುಂಗಿ ಗಿಡಿ ಮತ್ತು ಯಶ್ ದಯಾಳ್ ಅವರು ಕೊನೆಯ ಹಂತದ ಓವರ್‌ಗಳಲ್ಲಿ ತೋರಿದ ಚಾಣಾಕ್ಷತನ ಆರ್‌ಸಿಬಿ ಜಯಕ್ಕೆ ಕಾರಣವಾಯಿತು. ಒಂದೇ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ತಂಡವನ್ನು ಎರಡೂ ಪಂದ್ಯಗಳಲ್ಲಿ ಆರ್‌ಸಿಬಿಯು ಸೋಲಿಸಿದ್ದು ಇದೇ ಮೊದಲು.೨೧೪ ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಮಹೇಂದ್ರಸಿಂಗ್ ಧೋನಿ ಬಳಗವು ‘ಹೊಸ ಚಿಗುರು’ ಆಯುಷ್ ಮ್ಹಾತ್ರೆ (೯೪; ೪೮ಎ, ೪ಘಿ೯, ೬ಘಿ೫) ಮತ್ತು ‘ಹಳೆ ಬೇರು’ ರವೀಂದ್ರ ಜಡೇಜ (ಅಜೇಯ ೭೭; ೪೫ಎ, ೪ಘಿ೮, ೬ಘಿ೧) ಅವರ ಅಮೋಘ ಬ್ಯಾಟಿಂಗ್ ಬಲದಿಂದ ಗೆಲುವಿನ ಸನಿಹ ಬಂದು ನಿಂತಿತ್ತು. ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ ೧೧೪ ರನ್ ಸೇರಿಸಿದರು. ಆದರೆ ೧೭ನೇ ಓವರ್‌ನಲ್ಲಿ ವೇಗಿ ಲುಂಗಿ ಗಿಡಿ ಅವರು ಆಯುಷ್ ಮತ್ತು ಬ್ರೆವಿಸ್ ಡಿವಾಲ್ಡ್ ಅವರ ವಿಕೆಟ್ ಕಬಳಿಸಿ, ಆರ್‌ಸಿಬಿ ಗೆಲುವಿನಾಸೆಗೆ ಮರುಜೀವ ನೀಡಿದರು.ಜಡೇಜ ಜೊತೆಗೂಡಿದ ಧೋನಿ ತಂಡದ ಜಯದ ಆಸೆಯನ್ನು ಜೀವಂತವಾಗಿಟ್ಟರು. ಇದರಿಂದಾಗಿ ಕೊನೆಯ ಓವರ್‌ನಲ್ಲಿ ತಂಡದ ಗೆಲುವಿಗೆ ಕೇವಲ ೧೬ ರನ್‌ಗಳ ಅಗತ್ಯವಿತ್ತು. ಆದರೆ ಯಶ್ ದಯಾಳ್ ಹಾಕಿದಈ ಓವರ್ ನಾಟಕೀಯ ತಿರುವುಗಳಿಗೆ ಕಾರಣವಾಯಿತು.ಮೊದಲ ಎಸೆತದಲ್ಲಿ ಧೋನಿ ಮತ್ತು ಎರಡನೇಯದ್ದರಲ್ಲಿ ಜಡೇಜ ತಲಾ ಒಂದು ರನ್ ಗಳಿಸಿದರು. ಆದರೆ ಮೂರನೇ ಎಸೆತದಲ್ಲಿ ಧೋನಿಯನ್ನು ಎಲ್‌ಬಿ ಬಲೆಗೆ ಬೀಳಿಸುವಲ್ಲಿ ದಯಾಳ್ ಯಶಸ್ವಿಯಾದರು. ಕ್ರೀಸ್‌ಗೆ ಬಂದ ಶಿವಂ ದುಬೆ ಸಿಕ್ಸರ್ ಹೊಡೆದರು. ಆ ಎಸೆತವು ದುಬೆಯವರ ನಡುಮಟ್ಟಕ್ಕಿಂತ ಮೇಲಿದ್ದ ಕಾರಣ ನೋಬಾಲ್ ಆಗಿ ಒಟ್ಟು ಏಳು ರನ್‌ಗಳು ಸಿಕ್ಕವು. ಆದರೆ ಯಶ್ ದಯಾಳ್ ಎದೆಗುಂದಲಿಲ್ಲ. ನಂತರದ ಮೂರು ಎಸೆತಗಳಲ್ಲಿ ೩ ರನ್‌ಗಳನ್ನಷ್ಟೇ ಕೊಟ್ಟರು. ಅದರೊಂದಿಗೆ ಜೇಕಬ್ ಬೆಥಲ್, ವಿರಾಟ್ ಕೊಹ್ಲಿ ಮತ್ತು ರೊಮೆರಿಯೊ ಶೆಫರ್ಡ್ ಅವರ ಅಬ್ಬರದ ಬ್ಯಾಟಿಂಗ್ ವ್ಯರ್ಥವಾಗದಂತೆ ನೋಡಿಕೊಂಡರು. ಅಲ್ಲದೇ ಆರ್‌ಸಿಬಿಯು ನಾಲ್ಕು ಕ್ಯಾಚ್‌ಗಳನ್ನು ಕೈಚೆಲ್ಲಿದ್ದನ್ನೂ ಮರೆಸಿದರು.
ಟಾಸ್ ಗೆದ್ದ ಚೆನ್ನೈ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆ ರ್‌ಸಿಬಿತಂಡವು ೨೦ ಓವರ್‌ಗಳಲ್ಲಿ ೫ ವಿಕೆಟ್‌ಗಳಿಗೆ ೨೧೩ ರನ್ ಗಳಿಸಿತು.ಅದಕ್ಕೆ ಕಾರಣವಾಗಿದ್ದು ರೊಮೆರಿಯೊ ಶೆಫರ್ಡ್ ಅವರ ಅಬ್ಬರದ ಆಟ. ಆರ್‌ಇನಿಂಗ್ಸ್‌ನ ಕೊನೆಯ ಎರಡು ಓವರ್‌ಗಳಲ್ಲಿ ೫೪ ರನ್‌ಗಳ ಹೊಳೆ ಹರಿಯಲು ವೆಸ್ಟ್ ಇಂಡೀಸ್ ಆಟಗಾರ ಕಾರಣರಾದರು. ಇದರಲ್ಲಿ ಅವರ ಪಾಲು ೫೩ ರನ್‌ಗಳು! ಶೆಫರ್ಡ್ ೩೭೮.೫೭ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಸೂರೆ ಮಾಡಿದರು.

ಇಂಗ್ಲೆಂಡ್‌ನ ಜೇಕಬ್ ಬೆಥೆಲ್ ಮತ್ತು ಶೆಫರ್ಡ್ ಅವರನ್ನು ಚೆನ್ನೈ ತಂಡದ ಎಡಗೈ ವೇಗಿ ಖಲೀಲ್ ಅಹಮದ್ ಎಂದಿಗೂ ಮರೆಯುವುದಿಲ್ಲ.ಈ ಇಬ್ಬರೂ ಬ್ಯಾಟರ್‌ಗಳಿಂದಾಗಿ ಖಲೀಲ್ ೩ ಓವರ್‌ಗಳಲ್ಲಿ ೬೫ ರನ್ ಬಿಟ್ಟುಕೊಟ್ಟರು.ಖಲೀಲ್ ಹಾಕಿದ ಮೊದಲ ಸ್ಪೆಲ್‌ನಲ್ಲಿ (೨-೦?೩೨-೦) ಜೇಕಬ್ ಮತ್ತು ಕೊಹ್ಲಿ ದಂಡಿಸಿದರು.ಅದರ ನಂತರ ಖಲೀಲ್‌ಗೆ ೧೯ನೇ ಓವರ್‌ನವರೆಗೂ ಬೌಲಿಂಗ್ ಲಭಿಸಲಿಲ್ಲ. ಪಥಿರಾಣ ಮತ್ತು ಸ್ಪಿನ್ನರ್ ನೂರ್ ಅಹಮದ್ ಅವರು ಆರ್‌ಸಿಬಿ ರನ್ ಗಳಿಕೆಗೆ ಕಡಿವಾಣ ಹಾಕಿದ್ದರು. ಒಂದು ಹಂತದಲ್ಲಿ ಆತಿಥೇಯ ತಂಡವು ೨೦೦ರ ಗಡಿ ಮುಟ್ಟುವುದು ಕೂಡ ಅನುಮಾನವಾಗಿತ್ತು.ಈ ನಡುವೆ ೬೦ ರನ್‌ಗಳ ಅಂತರದಲ್ಲಿ ೫ ವಿಕೆಟ್ ಕೂಡ ಕಳೆದುಕೊಂಡಿತ್ತು. ೧೮ ಓವರ್‌ಗಳಲ್ಲಿ ೫ ವಿಕೆಟ್‌ಗಳಿಗೆ ೧೫೯ ರನ್ ಗಳಿಸಿತ್ತು. ಆದರ ನಂತರದ ಓವರ್‌ನಲ್ಲಿ ಬೌಲಿಂಗ್‌ಗೆ ಇಳಿದ ಖಲೀಲ್, ಬೆಚ್ಚಿ ಬೀಳುವಂತೆ ಶೆಫರ್ಡ್ ಆಡಿದರು. ಕೊನೆಯ ಓವರ್‌ನಲ್ಲಿ ಪಥಿರಾಣ ಅವರನ್ನೂ ಶೆಫರ್ಡ್ ಬಿಡಲಿಲ್ಲ.
೨೧ ವರ್ಷದ ಆಟಗಾರ ಜೇಕಬ್ ಜೊತೆಗೆ ಮೊದಲ ವಿಕೆಟ್‌ಗೆ ೯೭ ರನ್ ಸೇರಿಸಿದ ವಿರಾಟ್ ಕೊಹ್ಲಿ ಆಟ ರಂಗೇರಿತು. ಅವರು ಈ ಟೂರ್ನಿಯಲ್ಲಿ ಸತತ ೪ನೇ ಮತ್ತು ಒಟ್ಟಾರೆ ೭ನೇ ಅರ್ಧಶತಕ ದಾಖಲಿಸಿದರು. ೨೯ ಎಸೆತಗಳಲ್ಲಿ ಅವರು ೫೦ರ ಗಡಿ ದಾಟಿದರು.

Girl in a jacket
error: Content is protected !!