Reported By :H.D.Savita
ಟೋಕಿಯೋ: ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ. ಇಂದು ಪುರುಷರ 10 ಮೀಟರ್ ಏರ್ ಪಿಸ್ತೂಲ್ಎಸ್ಹೆಚ್1 ಸ್ಪರ್ಧೆಯಲ್ಲಿ ಭಾರತದ ಸಿಂಗರಾಜ್ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಫೈನಲ್ನಲ್ಲಿ 216.8 ಅಂಕ ಸಂಪಾದಿಸಿ ಮೂರನೇ ಸ್ಥಾನ ಪಡೆದುಕೊಂಡು ಸಿಂಗರಾಜ್ ಅವರ ಕಂಚಿನ ಪದಕಕ್ಕೆ ತೃಪ್ತಿ ಪಡೆದುಕೊಂಡರು. ಭಾರತದ ಇನ್ನೋರ್ವ ಶೂಟರ್ ಮನೀಶ್ 7ನೇ ಸ್ಥಾನ ಪಡೆದರು.
ಈವರೆಗೆ ಭಾರತ ಒಟ್ಟು ಎರಡು ಚಿನ್ನ ಗೆದ್ದಿದ್ದು, ನಾಲ್ಕು ಬೆಳ್ಳಿ ಮತ್ತು ಎರಡು ಕಂಚು ಗೆದ್ದಿದೆ. ಈ ಮೂಲಕ ಒಟ್ಟು ಎಂಟು ಪದಕವನ್ನು ಮುಡಿಗೇರಿಸಿಕೊಂಡಿದೆ.