ಮತ್ತೇ ಅಗ್ರಸ್ಥಾನಕ್ಕೇರಿದಿ ಮಿಥಾಲಿ

Share

ದುಬೈ,ಜು,೨೦:ಎಐಸಿಸಿ ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ೭೬೨ ಅಂಕಗಳೊಂದಿಗೆ ಮತ್ತೊಮ್ಮೆ ಅಗ್ರಸ್ಥಾನಕ್ಕೆ ಏರಿದ್ದಾರೆ
೧೬ ವರ್ಷಗಳ ಹಿಂದೆ ಮೊದಲ ಬಾರಿಗೆ ಅಗ್ರ ಸ್ಥಾನ ಅಲಂಕರಿಸಿದ್ದ ಮಿಥಾಲಿ, ಒಂಬತ್ತನೇ ಬಾರಿಗೆ ಬ್ಯಾಟುಗಾರ್ತಿಯರ ರ‍್ಯಾಂಕಿಂಗ್ ಪಟ್ಟಿಯಲ್ಲಿ ಪ್ರಥಮ ಸ್ಥಾನಕ್ಕೆ ಏರಿದ್ದಾರೆ.ಬೌಲರ್‌ಗಳ ಪಟ್ಟಿಯಲ್ಲಿ, ಐದನೇ ಸ್ಥಾನದಲ್ಲಿರುವ ಝುಲನ್ ಗೋಸ್ವಾಮಿ ಟಾಪ್ ೧೦ ರಲ್ಲಿರುವ ಏಕೈಕ ಭಾರತೀಯರಾಗಿದ್ದಾರೆ. ಆಲ್ ರೌಂಡರ್ ವಿಭಾಗದಲ್ಲಿ ದೀಪ್ತಿ ಶರ್ಮಾ ೫ನೇ ಸ್ಥಾನ ಪಡೆದಿದ್ದಾರೆಮಹಿಳಾ ಟಿ ೨೦ ಆಟಗಾರ್ತಿಯರ ರ‍್ಯಾಂಕಿಂಗ್‌ನಲ್ಲಿ ಭಾರತದ ಎಡಗೈ ಓಪನರ್ ಸ್ಮೃತಿ ಮಂದಾನ ವೃತ್ತಿಜೀವನದ ಅತ್ಯುತ್ತಮ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯ ಅಂತಿಮ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ೭೦ ರನ್ ಗಳಿಸಿದ ನಂತರ ಸ್ಮೃತಿಯವರ ರ‍್ಯಾಂಕಿಂಗ್ ಉತ್ತಮಗೊಂಡಿದೆ.

Girl in a jacket
error: Content is protected !!