ಪಾಕಿಸ್ತಾನ ವಿರುದ್ಧ ಭಾರತಕ್ಕೆ ಸೋಲು

Share

ದುಬೈ, ಅ. ೨೪: ಟಿ-೨೦ ವಿಶ್ವಕಪ್ ಭಾರತ ತನ್ನ ಅಭಿಯಾನವನ್ನು ಸೋಲುವ ಆರಂಭಿಸಿದ. ಅದು ಸಂಪ್ರದಾಯ ಎದುರಾಳಿ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯಾವಳಿಯಲ್ಲಿ ಹೀನಾಯ ಸೋಲು ನಿಜಕ್ಕೂ ಮುಖಭಂಗವಾಗಿದೆ.
ಕಳೆದ ಹಲವು ದಿನಗಳಿಂದ ಇಡೀ ವಿಶ್ವವೇ ಈ ರೋಚಕ ಪಂದ್ಯಕ್ಕೆ ಕಾದು ಕೂತಿತ್ತು ಈ ಎರಡು ರಾಷ್ಟ್ರಗಳ ಪಂದ್ಯದ ರೋಚಕ ಆಟವನ್ನು ನೋಡುವಾಗ ಭಾರತ ಎಂದಿನಂತೆ ಆಡಿದರೂ ಅದ್ಯೋಕೋ ಆರಂಭದ ಆಟಗಾರರು ಪೇಲವ ಆಟ ನಿರಾಶೆ ತಂದಿತ್ತು ಆದರೂ ಕೋಯ್ಲಿ ಆಡಿದ ಆಟ ಭರವಸೆ ಮೂಡಿಸಿದರು ನಿರೀಕ್ಷಿತ ಸ್ಕೋರ್ ಲಭಿಸಲಿಲ್ಲ ಇನ್ನೂ ಪಾಕಿಸ್ತಾನ ಆಟ ಆರಂಭಿಸುತ್ತಿದ್ದಂತೆ ರೋಚಕ ಸ್ಕೋರಗಳು ಬಂದುವ ಅಲ್ಲಿಗೆ ಭಾರತದ ಆಸೆ ಕಮರಿ ಹೋಗಿತ್ತು . ಭಾರತ ವಿರುದ್ಧ ಪಾಕಿಸ್ತಾನ ೧೦ ವಿಕೆಟ್‌ಗಳಿಂದ ಜಯಭೇರಿ ಭಾರಿಸಿತು. ಶಾಹೀನ್ ಅಫ್ರಿದಿ ಅವರ ಮಾರಕ ಬೌಲಿಂಗ್ ಹಾಗೂ ಬಾಬರ್ ಮತ್ತು ರಿಜ್ವಾನ್ ಅವರ ಭರ್ಜರಿ ಬ್ಯಾಟಿಂಗ್ ಸಹಾಯದಿಂದ ಪಾಕಿಸ್ತಾನ ನಿರೀಕ್ಷೆಮೀರಿ ಸುಲಭ ಗೆಲುವು ಸಂಪಾದಿಸಿತು. ಭಾರತದ ೧೫೧ ರನ್ ಮೊತ್ತವನ್ನು ಪಾಕಿಸ್ತಾನ ಇನ್ನೂ ೧೩ ಎಸೆತ ಬಾಕಿ ಇರುವಂತೆ ಚೇಸ್ ಮಾಡಿತು.
ಆರಂಭಿಕ ಬ್ಯಾಟುಗಾರರಾದ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಂ ಎಲ್ಲಿಯೂ ಎಡವದೇ ತಂಡವನ್ನ ಗೆಲುವಿನತ್ತ ಕೊಂಡೊಯ್ದರು. ಇಬ್ಬರೂ ಸಮಾನ ವೇಗದಲ್ಲಿ ಇನ್ನಿಂಗ್ಸ್ ಕಟ್ಟಿದರು. ಪಾಕಿಸ್ತಾನದ ಒಂದೂ ವಿಕೆಟ್ ಪಡೆಯಲಾಗದೆ ಭಾರತದ ಬೌಲರ್‌ಗಳು ಹತಾಶೆಗೊಂಡರು.

ಭಾರತದ ಬ್ಯಾಟಿಂಗ್ ವೈಫಲ್ಯ:

ಇದಕ್ಕೆ ಮೊದಲು ಬ್ಯಾಟ್ ಮಾಡಿದ ಭಾರತ ಮೊದಲ ಓವರ್?ನಲ್ಲೇ ಆಘಾತ ಅನುಭವಿಸಿತು. ಶಾಹೀನ್ ಅಫ್ರಿದಿ ಅವರು ತಮ್ಮ ಮೊದಲ ಓವರ್?ನಲ್ಲೇ ರೋಹಿತ್ ಶರ್ಮಾ ಅವರನ್ನ ಔಟ್ ಮಾಡಿದರು. ಅಫ್ರಿದಿ ತಮ್ಮ ಎರಡನೇ ಓವರ್?ನಲ್ಲಿ ಕೆಎಲ್ ರಾಹುಲ್ ಅವರನ್ನೂ ಔಟ್ ಮಾಡಿದರು. ನಂತರ ಸೂರ್ಯಕುಮಾರ್ ಯಾದವ್ ಕೂಡ ಹೆಚ್ಚು ರನ್ ಗಳಿಸದೇ ಪೆವಿಲಿಯನ್?ಗೆ ಮರಳಿದರು.

೩೧ ರನ್?ಗೆ ೩ ವಿಕೆಟ್ ಬಿದ್ದು ಭಾರತ ಸಂಕಷ್ಟದಲ್ಲಿದ್ಧಾಗ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ೫೩ ರನ್‌ಗಳ ಜೊತೆಯಾಟ ನೀಡಿದರು. ಪಂತ್ ಔಟಾದ ಬಳಿಕ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ೪೧ ರನ್ ಜೊತೆಯಾ ಆಡಿದರು. ಆಗ ಟೀಮ್ ಇಂಡಿಯಾಗೆ ಒಂದಷ್ಟು ಸಮಾಧಾನಕರ ಮೊತ್ತ ಸಿಗುವ ಭರವಸೆ ಮೂಡಿತು.

ಕೊಹ್ಲಿ ದಿಟ್ಟ ಬ್ಯಾಟಿಂಗ್:

ಭಾರತದ ಇನ್ನಿಂಗ್ಸಲ್ಲಿ ವಿರಾಟ್ ಕೊಹ್ಲಿ ಅವರೊಬ್ಬರೇ ದಿಟ್ಟವಾಗಿ ಪಾಕ್ ಬೌಲಿಂಗ್ ದಾಳಿಯನ್ನ ಎದುರಿಸಿದ್ದು. ರಿಷಭ್ ಪಂತ್ ಕೆಲವಷ್ಟು ಜೀವದಾನಗಳನ್ನ ಪಡೆದರೂ ಬಿಡುಬೀಸಾಗಿ ಬ್ಯಾಟ್ ಬೀಸಿ ರನ್ ಗಳಿಸುವಲ್ಲಿ ಯಶಸ್ವಿಯಾದರು. ಸೂರ್ಯಕುಮಾರ್ ಯಾದವ್ ಉತ್ತಮ ಲಯದಲ್ಲಿದ್ದಂತಿದ್ದರೂ ದುರದೃಷ್ಟವಶಾತ್ ಬೇಗನೇ ಔಟಾಗಿಬಿಟ್ಟರು. ೧೯ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿಯೂ ಔಟಾದರು. ಶಾಹೀನ್ ಅಫ್ರಿದಿ ಅವರು ತಮ್ಮ ಕೊನೆಯ ಓವರ್‌ನಲ್ಲಿ ಕೊಹ್ಲಿಯನ್ನ ಬಲಿತೆಗೆದುಕೊಂಡರು.

ಅಫ್ರಿದಿ ಆಸೆ ಈಡೇರಿತು:

ಕುತೂಹಲವೆಂದರೆ, ಈ ಪಂದ್ಯಕ್ಕೆ ಮುನ್ನ ಶಾಹೀನ್ ಅಫ್ರಿದಿ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ತಾನು ಕೆಎಲ್ ರಾಹುಲ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈ ಮೂವರ ವಿಕೆಟ್ ಪಡೆಯಬೇಕು ಎಂದು ಇಚ್ಛೆ ವ್ಯಕ್ತಪಡಿಸಿದ್ದರು. ಈ ಮೂವರು ಶ್ರೇಷ್ಠ ಕ್ರಿಕೆಟಿಗರ ವಿಕೆಟ್ ಪಡೆಯುವುದು ನನ್ನ ಆಸೆ. ಅವರಲ್ಲಿ ಒಬ್ಬರನ್ನಾದರೂ ಔಟ್ ಮಾಡುವ ಬಯಕೆ ಇದೆ ಎಂದು ಹೇಳಿದ್ದರು. ಅಂತಿಮವಾಗಿ ಈ ಮೂವರನ್ನೂ ಅವರು ಬಲಿತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು.

ಸ್ಕೋರು ವಿವರ:

ಭಾರತ ೨೦ ಓವರ್ ೧೫೧/೭
(ವಿರಾಟ್ ಕೊಹ್ಲಿ ೫೭, ರಿಷಭ್ ಪಂತ್ ೩೯ ರನ್ ? ಶಾಹೀನ್ ಅಫ್ರಿದಿ ೩೧/೩, ಹಸನ್ ಅಲಿ ೪೪/೨)

ಪಾಕಿಸ್ತಾನ ೧೭.೫ ಓವರ್ ೧೫೨/೦
(ಮೊಹಮ್ಮದ್ ರಿಜ್ವಾನ್ ಅಜೇಯ ೭೯, ಬಾಬರ್ ಅಜಂ ಅಜೇಯ ೬೮ ರನ್)

 

Girl in a jacket
error: Content is protected !!