ಟೋಕಿಯೋ, ಜು. 29; ಭಾರತದ ಹಾಕಿ ತಂಡ, ಪಿ.ವಿ.ಸಿಂಧು, ಬಾಕ್ಸರ್ ವಿಕಾಸ್ ಕುಮಾರ್, ಶೂಟರ್ ಮನು ಬಾಕರ್ ಅವರು ಗೆಲುವಿನ ಮಿಂಚು ಹರಿಸಿದ್ದರೆ, ಪುರುಷರ ಆರ್ಚರಿಯಲ್ಲಿ ಆತನು ದಾಸ್ ಕೂಡ ಪ್ರೀ ಕ್ವಾರ್ಟರ್ ಫೈನಲ್ಗೇರುವ ಮೂಲಕ ಪದಕ ಆಸೆಯನ್ನು ಮೂಡಿಸಿದ್ದಾರೆ. ಇಂದು ನಡೆದ ಪುರುಷರ ಸಿಂಗಲ್ಸ್ ಅರ್ಚರಿ 32ರಲ್ಲಿ ಭಾರತದ ಬಿಲ್ಲುಗಾರ ಆತನುದಾಸ್ ಅವರು ದಕ್ಷಿಣ ಕೊರಿಯಾದ ಎರಡು ಬಾರಿ ಒಲಿಂಪಿಕ್ಸ್ ವಿಜೇತರಾದ ಜಿನ್ ಹ್ಯೇಕ್ರ ಸವಾಲನ್ನು ಎದುರಿಸಿದರೂ ಕೂಡ 6-4 ರಿಂದ ಗೆಲ್ಲುವ ಮೂಲಕ ಪ್ರಿ ಕ್ವಾರ್ಟರ್ಫೈನಲ್ಗೆ ಲಗ್ಗೆ ಇಟ್ಟಿದ್ದಾರ
ಆರಂಭದ ಸುತ್ತಿನಲ್ಲಿ ಒಲಿಂಪಿಕ್ಸ್ ವಿಜೇತ ಜಿನ್ ಹ್ಯೇಕ್ಗೆ ಕಠಿಣ ಪೈಪೋಟಿ ನೀಡಿದ ಆತನು ದಾಸ್ ಅವರು 26-25 ಸೆಟ್ಗಳ ಅಂತರದಿಂದ ವಿಜಯ ಸಾಧಿಸಿದರೆ, ದ್ವಿತೀಯ ಹಾಗೂ ಮೂರನೇ ಸುತ್ತಿನಲ್ಲಿ ಇಬ್ಬರೂ ಆಟಗಾರರು ಪೈಪೋಟಿಗೆ ಬಿದ್ದಂತೆ ಹೋರಾಟ ನಡೆಸಿದ್ದರಿಂದ 27-27 ಅಂಕಗಳನ್ನು ಗಳಿಸುವ ಮೂಲಕ ಡ್ರಾ ಸಾಧಿಸಿದರು.
ಆದರೆ ನಾಲ್ಕನೇ ಸುತ್ತಿನಲ್ಲಿ ಮತ್ತೆ ಮೇಲುಗೈ ಸಾಧಿಸಿದ ಭಾರತದ ಬಿಲ್ಲುಗಾರ ಆತನುದಾಸ್ ಅವರು 27-22 ಅಂಕಗಳ ಅಂತರದಿಂದ ಜಿನ್ ಹ್ಯೇಕ್ ವಿರುದ್ಧ ಮತ್ತೆ ಗೆಲುವು ಸಾಧಿಸಿದರು. ಆದರೆ ಐದನೇ ಸುತ್ತಿನಲ್ಲಿ ಮತ್ತೆ ಇಬ್ಬರು ಆಟಗಾರರು ಸಮಬಲ ಸಾಧಿಸಿ ತಲಾ 28 ಅಂಕಗಳನ್ನು ಕಲೆ ಹಾಕಿ ಸಮಬಲ ಸಾಧಿಸಿದರು, ನಂತರ ನಡೆದ ಶೂಟ್ ಆಫ್ ಸುತ್ತಿನಲ್ಲಿ ಆತನು ದಾಸ್ 6-5 ಸೆಟ್ಗಳ ಅಂತರದಿಂದ ಒಲಿಂಪಿಕ್ಸ್ ಚಾಂಪಿಯನ್ ದಕ್ಷಿಣ ಕೊರಿಯಾದ ಜಿನ್ ಹ್ಯೇಕ್Àರನ್ನು ಸೋಲಿಸಿ ಪ್ರಿ ಕ್ವಾರ್ಟರ್ ಫೈನಲ್ಗೆ ಪ್ರವೇಶ ಪಡೆದು ಪದಕ ಗೆಲ್ಲುವ ಹುಮ್ಮಸ್ಸು ಮೂಡಿಸಿದ್ದಾರೆ.