Reported By : H.D.Savita
ಹೊಸದಿಲ್ಲಿ: ಯುಎಇನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಅಕ್ಟೋಬರ್ 17ರಿಂದ ನವೆಂಬರ್ 14ರ ವರೆಗೆ ಕ್ರೀಡಾಕೂಟವು ನಡೆಯಲಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ , ಕಾರ್ಯದರ್ಶಿ ಜಯ್ ಶಾ ಮತ್ತು ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು 15ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಆಫ್ ಸ್ಪಿನರ್ ಆರ್. ಅಶ್ವಿನ್ ತಂಡಕ್ಕೆ ಮರಳಿರೋದು ವಿಶೇಷ. ಭಾರತ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಅವರನ್ನು ತಂಡದ ಮೆಂಟರ್ ಆಗಿ ಆಯ್ಕೆಮಾಡಿದೆ. ಇವರು ಮುಖ್ಯ ತರಬೇತುದಾರ ರವಿ ಶಾಸ್ತ್ರೀಗೆ ಟಿ-20 ವಿಶ್ವ ಚಾಂಪಿಯನ್ ಷಿಪ್ ನಲ್ಲಿ ನೆರವಾಗಲಿದ್ದಾರೆ.
ಟಿ-20 ವಿಶ್ವಕಪ್ ಗೆ 15 ಸದಸ್ಯರ ಟೀಮ್ ಇಂಡಿಯಾ
ವಿರಾಟ್ ಕೊಹ್ಲಿ (ನಾಯಕ)
ರೋಹಿತ್ ಶರ್ಮಾ (ಉಪನಾಯಕ)
ಕೆ.ಎಲ್ ರಾಹುಲ್
ಸೂರ್ಯಕುಮಾರ್ ಯಾದವ್
ರಿಷಭ್ ಪಂತ್ (ವಿಕೆಟ್ ಕೀಪರ್)
ಇಶಾನ್ ಕಿಶನ್
ಹಾರ್ದಿಕ್ ಪಾಂಡ್ಯ
ರವೀಂದ್ರ ಜಡೇಜಾ
ರಾಹುಲ್ ಚಾಹರ್
ಆರ್. ಅಶ್ವಿನ್
ಅಕ್ಷರ್ ಪಟೇಲ್
ವರುಣ ಚಕ್ರವರ್ತಿ
ಜಸ್ ಪ್ರೀತ್ ಬೂಮ್ರಾ
ಭುವನೇಶ್ವರ್ ಕುಮಾರ್
ಮೊಹಮದ್ ಶಮಿ