12ವರ್ಷಗಳ ನಂತರ ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿ
by-ಕೆಂಧೂಳಿ
ದುಬೈ,ಮಾ,೧೦-ರೋಹಿತ್ ಶರ್ಮಾ-ಶುಭಮನ್ ಗಿಲ್ ಚೋಡಿಯ ಅಂದದ ಬ್ಯಾಟಿಂಗ್ ಮತ್ತು ಶ್ರೇಯಸ್ಸು ಅಯ್ಯರ್-ಅಕ್ಷರ್ ಪಟೇಲ್ ಜವಾಬ್ದಾರಿಯುತ ಜೊತೆಯಾಟಗಳನ್ನು ವ್ಯರ್ಥಮಾಡದೆ ಭಾನುವ ಇಲ್ಲಿ ನಡೆದ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತೀಯ ಆಟಗಾರರ ಮೋಡಿಯ ಆಟ ಎಲ್ಲರನ್ನು ಬೆರಗುಗೊಳಿಸಿತು ಇದರ ಫಲವಾಗಿ ೧೨ ವರ್ಷಗಳ ನಂತರ ಚಾಂಪಿನ್ಸ್ ಟ್ರೋಪಿಗೆ ಮುತ್ತಿಕ್ಕಿತು.
ಮರಳುಗಾಡಿನ ಅಂಗಳದಲ್ಲಿ ಭಾನುವಾರ ರಾತ್ರಿ ತ್ರಿವರ್ಣ ಧ್ವಜ ಆರಿಸಿದಾಗ ಎಲ್ಲೆಲ್ಲೂ ಸಂಭ್ರಮ ಮನೆಮಾಡಿತ್ತು. ಎಲ್ಲೆಲ್ಲೂ ಭಾರತೀಯ ಆಟಗಾರರ ಆ ಮೊಡಿಯ ಆಟವನ್ನು ಹೊಗಳುವ ಮೂಲಕ ಸಂಭ್ರಮಿಸಿದರು.
ಭಾರತ ನ್ಯೂಝಿಲ್ಯಾಂಡ್ ನಡುವೆ ನಡೆದ ಚಾಂಪಿಯನ್ಸ್ ಟ್ರೋಫಿಯ ರೋಚಕ ಫೈನಲ್ ಪಂದ್ಯದಲ್ಲಿ, ಭಾರತವು ನ್ಯೂಝಿಲ್ಯಾಂಡ್ ತಂಡವನ್ನು ಸೋಲಿಸುವ ಮೂಲಕ ಭಾರತೀಯರ ಸಂಭ್ರಮಕ್ಕೆ ಕಾರಣರಾರದರು.
ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಶತಕದ ಜೊತೆಯಾಟ ಹಾಗೂ ಕುಲದೀಪ್ ಯಾದವ್(೨-೪೦) ನೇತೃತ್ವದ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ಕ್ರಿಕೆಟ್ ತಂಡವು ನ್ಯೂಝಿಲ್ಯಾಂಡ್ ತಂಡವನ್ನು ೪ ವಿಕೆಟ್‌ಗಳ ಅಂತರದಿಂದ ಪಂದ್ಯದಲ್ಲಿ ಗೆಲ್ಲಲು ೨೫೨ ರನ್ ಗುರಿ ಬೆನ್ನಟ್ಟಿದ ಭಾರತ ೪೯ ಓವರ್‌ಗಳಲ್ಲಿ ೬ ವಿಕೆಟ್‌ಗಳ ನಷ್ಟಕ್ಕೆ ೨೫೪ ರನ್ ಗಳಿಸಿತು. ಕೆ.ಎಲ್.ರಾಹುಲ್(ಔಟಾಗದೆ ೩೪, ೩೩ ಎಸೆತ, ೧ ಬೌಂಡರಿ, ೧ ಸಿಕ್ಸರ್)ಹಾಗೂ ರವೀಂದ್ರ ಜಡೇಜ(ಔಟಾಗದೆ ೯) ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ತಂಡಕ್ಕೆ ಗೆಲುವು ತಂದುಕೊಟ್ಟರು.
ಈ ಹಿಂದೆ ೨೦೦೨ ಹಾಗೂ ೨೦೧೩ರಲ್ಲಿ ಚಾಂಪಿಯನ್ಸ್ ಟ್ರೋಫಿ ಜಯಿಸಿದ್ದ ಭಾರತ ತಂಡವು ಇದೀಗ ೩ನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದೆ.
ಶುಭಮನ್ ಗಿಲ್, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಕೆಟ್‌ಗಳನ್ನು ಪಡೆದ ನ್ಯೂಝಿಲ್ಯಾಂಡ್ ಸ್ಪಿನ್ನರ್‌ಗಳು ಭಾರತದ ಉತ್ತಮ ಆರಂಭಕ್ಕೆ ತಡೆಯೊಡ್ಡಿದರು.
ಗೆಲ್ಲಲು ೨೫೨ ರನ್ ಚೇಸಿಂಗ್‌ಗೆ ತೊಡಗಿದ್ದ ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮಾ(೭೬ ರನ್, ೮೩ ಎಸೆತ, ೭ ಬೌಂಡರಿ, ೩ ಸಿಕ್ಸರ್)ಹಾಗೂ ಗಿಲ್(೩೧ ರನ್, ೫೦ ಎಸೆತ, ೧ ಸಿಕ್ಸರ್)ಮೊದಲ ವಿಕೆಟ್‌ಗೆ ೧೦೫ ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಮೊದಲ ವಿಕೆಟ್‌ನಲ್ಲಿ ದಾಖಲಾದ ೩ನೇ ಶತಕದ ಜೊತೆಯಾಟ ಇದಾಗಿದೆ.
ನ್ಯೂಝಿಲ್ಯಾಂಡ್ ನಾಯಕ ಸ್ಯಾಂಟ್ನರ್ ೧೯ನೇ ಓವರ್‌ನಲ್ಲಿ ಗಿಲ್ ವಿಕೆಟನ್ನು ಪಡೆದು ಮೊದಲ ಮೇಲುಗೈ ಒದಗಿಸಿದರು. ಗ್ಲೆನ್ ಫಿಲಿಪ್ಸ್ ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಪಡೆದು ಗಿಲ್‌ರನ್ನು ಪೆವಿಲಿಯನ್‌ಗೆ ಕಳುಹಿಸಿದರು.ರಚಿನ್ ರವೀಂದ್ರ ೨೭ನೇ ಓವರ್‌ನಲ್ಲಿ ಭಾರತದ ನಾಯಕ ರೋಹಿತ್ ಇನಿಂಗ್ಸ್‌ಗೆ ತೆರೆ ಎಳೆದರು. ರೋಹಿತ್ ಅವರು ರವೀಂದ್ರ ಬೌಲಿಂಗ್‌ನಲ್ಲಿ ಮುನ್ನುಗ್ಗಲು ಆಡಲು ಹೋಗಿ ಸ್ಟಂಪ್ ಔಟಾದರು.
೧೮.೩ ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ೧೦೫ ರನ್ ಗಳಿಸಿದ್ದ ಭಾರತವು ೨೬.೧ ಓವರ್‌ಗಳಲ್ಲಿ ೧೨೨ ರನ್‌ಗೆ ೩ ವಿಕೆಟ್ ಕಳೆದುಕೊಂಡು ನ್ಯೂಝಿಲ್ಯಾಂಡ್ ಮರು ಹೋರಾಡಲು ಅವಕಾಶ ನೀಡಿತು.ಆಗ ೪ನೇ ವಿಕೆಟ್‌ಗೆ ೬೧ ರನ್ ಜೊತೆಯಾಟ ನಡೆಸಿದ ಶ್ರೇಯಸ್ ಅಯ್ಯರ್(೪೮ ರನ್, ೬೨ ಎಸೆತ)ಹಾಗೂ ಅಕ್ಷರ್ ಪಟೇಲ್(೨೯ ರನ್, ೪೦ ಎಸೆತ)ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಹಾರ್ದಿಕ್ ಪಾಂಡ್ಯ ೧೮ ರನ್ ಗಳಿಸಿ ಔಟಾದರು. ರಾಹುಲ್ ಹಾಗೂ ಜಡೇಜ ತಂಡವನ್ನು ಗೆಲುವಿನ ದಡ ಸೇರಿಸಿದರು.
ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಮೊದಲ ವಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಜೊತೆಯಾಟ (೧೦೫ ರನ್) ನಡೆಸಿದ ಭಾರತದ ೨ನೇ ಆರಂಭಿಕ ಜೋಡಿಯಾಗಿದೆ. ೨೦೦೦ರಲ್ಲಿ ನೈರೋಬಿಯಲ್ಲಿ ನ್ಯೂಝಿಲ್ಯಾಂಡ್ ವಿರುದ್ಧದ ಫೈನಲ್‌ನಲ್ಲಿ ಸೌರವ್ ಗಂಗುಲಿ ಹಾಗೂ ಸಚಿನ್ ತೆಂಡುಲ್ಕರ್ ಮೊದಲ ವಿಕೆಟ್‌ಗೆ ೧೪೧ ರನ್ ಜೊತೆಯಾಟ ನಡೆಸಿದ್ದರು.
ಐಸಿಸಿ ನಾಕೌಟ್ ಪಂದ್ಯದಲ್ಲಿ(ವಿಶ್ವಕಪ್ ಅಥವಾ ಚಾಂಪಿಯನ್ಸ್ ಟ್ರೋಫಿ)ಉಭಯ ತಂಡಗಳು ಮೊದಲ ವಿಕೆಟ್‌ಗೆ ೫೦ಕ್ಕೂ ಅಧಿಕ ರನ್ ಗಳಿಸಿದ್ದು ಇದು ಎರಡನೇ ದೃಷ್ಟಾಂತ. ಸರಿಯಾಗಿ ೨೯ ವರ್ಷಗಳ ಹಿಂದೆ ೧೯೯೬ರ ಮಾ.೯ರಂದು ಬೆಂಗಳೂರಿನಲ್ಲಿ ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ನಡೆದಿದ್ದ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಮೊದಲ ಬಾರಿ ಈ ರೀತಿ ಆಗಿತ್ತು.