ಸವಾಲುಗಳ ಮಣಿಸಿ ಗೆದ್ದು ನಕ್ಕ ರೇಖಾ
” ನಾನು ಯಶಸ್ಸಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಅದು ನನಗೆ ಅನ್ಯ ಪದ”ಎನ್ನುವ ಅಭಿನೇತ್ರಿ ರೇಖಾ ಹುಟ್ಟಿದ್ದು ಚನೈನಲ್ಲಿ. ತಂದೆ ತಮಿಳ,ತಾಯಿ ತೆಲುಗು,ರೇಖಾ ಎಂಬ ನಟಿ ಕನ್ನಡದ ಮೂಲಕ ನಾಯಕಿಯಾಗಿ ಪ್ರವೇಶಿಸಿ ನೆಲೆಗೊಂಡದ್ದು ಹಿಂದಿ ಚಿತ್ರರಂಗದಲ್ಲಿ. ಏಕರೂಪೀ ಪಾತ್ರಗಳಿಗೆ ಅಂಟಿಕೊಳ್ಳದೇ ಸದಾ ಹೊಸ ಪ್ರಯೋಗಗಳ ಮೂಲಕ ತನ್ನ ಚರಿಷ್ಮಾವನ್ನ ಚಲನಶೀಲಗೊಳಿಸಿಕೊಂಡಾಕೆ.ಹಾಗೆ ನೋಡಿದರೆ ರೇಖಾ ಸಿನಿಮಾಕ್ಕೆ ಬಂದಿದ್ದೇ ಆಕಸ್ಮಿಕ.ಮನೆಯ ಆರ್ಥಿಕ ತೊಂದರೆ ನಿವಾರಿಸಲಿಕ್ಕಾಗಿ ಅಮ್ಮ ಈಕೆಗೆ ಬಣ್ಣ ಹಚ್ಚಿಸಿದಳು.ಮುಂದೆ ಬಾಲಿವುಡ್ ಗೆ ತೆರಳಿದಾಗ ಆಕೆ ಬಣ್ಣದ ಸಮಸ್ಯೆ ಎದುರಿಸಬೇಕಾಯ್ತು.ಭಾಷೆಯ ಗೇಲಿಗೆ ಒಳಗಾಗ ಬೇಕಾಯ್ತು.ಆದರೆ ತನ್ನದೇ ಆಯ್ಕೆಯ ಕಾಳಜಿ ಹಾಗೂ ನಿರಂತರ ಶ್ರಧ್ಧೆ ಮತ್ತು ಶ್ರಮದ ಮೂಲಕ ಗಲ್ಲಾ ಗಳಿಕೆಯ ಹ್ಯಾಟ್ರಿಕ ವರ್ಷಗಳ ಏಕೈಕ ನಾಯಕಿ ಎಂಬ ಹೆಗ್ಗಳಿಕೆಗೆ ಕಾರಣಳಾದಳು.ಎನ್ ಸೈಕ್ಲೋಪೀಡಿಯಾ ಆಪ್ ಬ್ರಿಟಾನಿಕಾದಲ್ಲಿ “ಹಿಂದಿ ಚಿತ್ರದ ಸ್ಮರಣೀಯ ನಟಿ” ಎಂದು ಕರೆಸಿಕೊಂಡಳು.ಲಜ್ಜಾದ ವಿಮರ್ಶಕರ ಮೆಚ್ಚುಗೆಗೆ ಪ್ರತಿಯಾಗಿ”ಲಜ್ಜಾ ನಾನೇ” ಎಂದಳು.
ಚಿತ್ರ ಬದುಕಿನುದ್ದಕ್ಕೂ ಒಲುಮೆಯ ಮೋಹನ ಮುರಳಿಯ ಬೆನ್ನಟ್ಟಿದ ಕೃಷ್ಣ ಸುಂದರಿಗೆ ದೇಹದ ಬಿಸುಪು ಸಿಕ್ಕರೂ ಅವಳ ಕೈಗೆ ಸಿಗದೇ ಜಿಗಿದದ್ದು ಅವಳೇ ಬಯಸಿದ ಅವನ ಪ್ರೇಮ.ರೇಖಾ ಹಲವು ಬಣ್ಣಗಳ ಚಿತ್ರಗಳಂತೆ ಕಂಡರೂ ನೋವ ಅಲೆಗಳ ನುಂಗಿ ಸಮುದ್ರಂತೆ ಉಳಿದಿದ್ದೇ ಅವಳ ರಿಯಲ್ ಚಿತ್ರ.
ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ,ಫಿಲ್ಮ್ ಫೇರ್,ಪದ್ಮ ಪ್ರಶಸ್ತಿ,ಅತ್ಯುನ್ನತ ನಾಯಕಿಯ ಪ್ರಶಸ್ತಿ ಪಡೆದ ರೇಖಾ ಅತ್ಯುತ್ತಮ ನಟಿಯಲ್ಲೊಬ್ಬರು.ಜನಪ್ರಿಯ,ಕಲಾತ್ಮಕ ಪಾತ್ರಗಳಿಂದ ಜನಮನ ಸೂರೆಗೆಂಡ ಈಕೆಯ ಮೊದಲ ನಾಯಕಿ ಪ್ರಧಾನ ಚಿತ್ರ ಕನ್ನಡದ ಆಪರೇಷನ್ ಜಾಕ್ ಪಾಟ್ ನಲಿ ಸಿಐದಿ 999.
” ಐ ಥ್ಯಾಂಕ್ಯು ವೆರಿ ಮಚ್ ” ಎಂದು ಡಾ.ರಾಜ್ ಕುಮಾರ್ ಜೊತೆಗೆ ನುಲಿವ ಈ ನಟಿಯ ಮೊದಲ ಹಿಂದಿ ಸಿನಿಮಾ ಸಾವನ್,
ರೇಖಾಳ ಚಿತ್ರ ಜೀವನದಂತೆಯೇ ಆಕೆಯ ಪ್ರೇಮ ಜೀವನವೂ ದುರಂತ ಕಥೆಯಂತಿದೆ.” ಏ ಕಹಾ ಆಗೆಯೇ ಹಮ್ ಯುಹಿ ಸಾಥ್ ಸಾಥ್ ಚಲ್ತೆ..” ಎಂಬ ಸಿಲ್ ಸಿಲಾದ ಲತಾ ಮಂಗೇಶ್ಕರ್ ಹಾಡು,ಆ ಫೋಟೋ ಗ್ರಫಿ,ಅಮಿತಾಬ್ ಬಚ್ಚನ್ ಡೈಲಾಗ್ ,ಸಂಗೀತ ಎಲ್ಲಾ ಮಿಳಿತಗೊಂಡು ರೇಖಾ ಅಮಿತಾಬ್ ಕೆಮಿಸ್ಟ್ರಿಯು ‘ದೊ ಅಂಜಾನೆಯಿಂದ ಸಿಲ್ ಸಿಲಾದ’ ತನಕ ಚಲಿಸಿದ ಎವರ್ ಗ್ರೀನ್ ಪ್ರೇಮದ ಚಿತ್ರಗಳು ಅವರದೇ ಪ್ರೇಮಗಳ ಇತಿಹಾಸದಂತಿವೆ.
ಊರಿಗೆ ಮನೆಯೆಂಬುದೊಂದು ಪಾಠ ಶಾಲೆ. ಅಪ್ಪ ಅಮ್ಮಂದಿರು ಸಂಸ್ಕಾರ ನೀಡುವ ಮೂಲ ಗುರುಗಳು. ಅವರೇ ದಿಕ್ಕು ತಪ್ಪಿದರೆ!? ಮಕ್ಕಳಿಗೆ ಬೆಳಕಿನ ದಾರಿ ತೋರುವವರಾರು? ರನ್ನದ ಗೊಂಬೆ ಬೆಳ್ಳಿತೆರೆಯ ರೇಖಾ ಎಂಬ ಉಮ್ರಾವ್ ಜಾನ್ ಕಥನ ಇದೇ ಬಗೆಯದು.
” ಇನ್ ಆಂಕೋಕೆ ಮಸ್ತಿ ಕೆ ಮಸ್ತಾನೆ ಹಜಾರೋ ನೇ ..” ಎನ್ನುವ ಆಕರ್ಷಕ ಹಾಡುವ ಸಖಿಯಂತೆ ರೇಖಾ ನಿಜ ಜೀವನದೊಳಗೂ ಹಾಡುತ್ತಾ ತನ್ನ ಚಲುವಿನ ಹೃದಯ ಒಡೆದು ಹೋಳು ಮಾಡಿಕೊಂಡವಳು.
” ಸಲಾಮೆ ಇಷ್ಕ ಮೇರಿ ಜಾನ್ ” ಎನ್ನುವ ಮುಖದ್ದರ್ ಕಾ ಸಿಂಕಂದರ್ ಹಾಡಿನಂತೆಯೇ ಕಣ್ಣಲ್ಲೇ ಒಲವನ್ನ ತೂಗಿ ಬಿಸಾಕುತಿದ್ದ ರೇಖಾ ಮೂಲತಹ ಬೋಲ್ಡ ನಟಿ ,’ಯಾರು ಏನೆಂದರೆ ನನಗೇನು’ ಎನ್ನುವಂತೆ ಬದುಕಿದವಳು. ಊರಿಗೆ ಊರೇ ತನ್ನನ್ನು ಅಂದರೂ ‘ಡೋಂಟ್ ಕೇರ್’ ಅನ್ನುತಿದ್ದಾಕೆ.
” ಆಪ್ ಕೆ ಆಂಕೋಮೆ ಕುಛ್ ಮೆಹಕೆ ಹುವೆಸೇ ರಾಜ್ ಹೇ..” ಎಂಬ ವಿನೋದ್ ಮೆಹ್ರನ ಜೊತೆಯ ಸುಂದರ ಹಾಡಿನಂತೆಯೇ ರೇಖಾ ಒಲವಿನ ಝರಿ ಸದಾ ಸೊಬಗನದೇ ಆಗಿತ್ತು. ಮಜಾ ಗೊತ್ತಾ? ಆಕೆಗೆ ಗಂಡಸರೆಂದರೆ ಒಂಥರಾ ಅಲರ್ಜಿ!. ಅಟ್ ದಿ ಸೇಮ್ ಟೈಮ್ ವಿಚಿತ್ರ ವ್ಯಾಮೋಹ!!. ಹಚ್ಚಿಕೊಂಡರೆ ಜೀವವನ್ನೇ ಕೊಡುವಷ್ಟು ಪ್ರೀತಿಸುತ್ತಿದ್ದಳು.ಆದರೆ ಅದೇಕೋ ಅವರಾಗಿ ಅವರೇ ಮೈಮೇಲೆ ಏರಿ ಬಂದಾಗ ಕನಿಕರ ಇಲ್ಲದೇ ಎಡಗೈಯಿಂದ ಹಂಗೇ ತಳ್ಳಿ ಬಿಡುತಿದ್ದಳು.
ಆದರೆ ರೇಖಾ ಬರಿ ಇದನ್ನೇ ಮಾಡಲಿಲ್ಲ. ಎಲ್ಲರಂತೆ ಬದುಕಿನಲ್ಲಿ ಸೆಟಲ್ ಆಗಬೇಕೆಂದು ಮದುವೆ ಯಾದಳು. ಒಂದಲ್ಲ ಎರಡಲ್ಲ ಅಂತ ನಾಲ್ಕು ಗಂಡಸರ ಮನೆಯಲ್ಲಿ ಸಂಸಾರ ನಡೆಸಿದಳು. ಆದರೆ ಅವರಲ್ಲಿ ಬಹುತೇಕರು ಆತ್ಮ ಹತ್ಯೆ ಮಾಡಿಕೊಂಡರು ಇಲ್ಲಾ ಆಕಸ್ಮಿಕ ಸಾವಿಗೆ ಶರಣಾದರು. ಅಲ್ಲಿಂದಲೇ ಒಂದು ರೂಮರ್ ಹುಟ್ಟಿಕೊಂಡಿತು ‘ರೇಖಾಳನ್ನ ಮದುವೆಯಾದ ಗಂಡಸಿಗೆ ಹೆಚ್ಚು ದಿನ ಬದುಕುವ ಅರ್ಹತೆ ಇಲ್ಲ.!”
ರೇಖಾ ಹೆದರಲಿಲ್ಲ! ಕಲಾ ಜಗತ್ತನ್ನೇ ಎದುರು ಹಾಕಿಕೊಂಡು ಬದುಕಿದಳು. ಅವಳಿಗೆ ತನ್ನ ಹಠ ಮುಖ್ಯ.ತನ್ನ ಸಂತೋಷ ಮುಖ್ಯ. ತನ್ನ ಮಾತೇ ನಡೆಯಬೇಕೆಂಬ ವಿಲಕ್ಷಣ ಹಠ.ಇದಕ್ಕೆಲ್ಲಾ ಕಾರಣ ಏನು? ಅವಳು ಮೊದಲಿಂದಲೂ ಹೀಗಿದ್ದಳಾ?ಅಥವಾ ಬಣ್ಣದ ಲೋಕವೇ ಅವಳ ಮನಸ್ಸನಿಲ್ಲಿ ಇಂತಹ ವಿಲಕ್ಷಣ ಬಿಡಿಸಿತಾ?ಗೊತ್ತಿಲ್ಲ.ಆದರೆ ಭಾಷೆಗೊತ್ತಿಲ್ಲವೆಂದು ಛೇಡಿಸಿದವರ ಎದರೇ ಆಕೆ ಗೆದ್ದು ನಿಂತಳು.ಚಂದದ ಬಿಳಿ ಬಣ್ಣದ ಸ್ಟಾರ್ ನಟಿಯರ ಎದರು “ಇವಳಾವ ಲೆಕ್ಕ” ಎಂದವರನ್ನೇ ತನ್ನ ಹಿಂದೆ ಸುತ್ತಿಕೊಳ್ಳುವಂತೆ ಸಾಧಿಸಿ ನಿಂತಳು.
ಮೇಕಪ್ ಮತ್ತು ಉಡುಗೆ ಅಂತ ತಯಾರಿಯಲ್ಲಿ ಅತ್ಯಂತ ಕ್ವಿಕ್ ಆಗಿ ತಯಾರಾಗುತ್ತಿದ್ದ ಏಕೈಕ ನಟಿ ಈಕೆ.ತನ್ನ ಮನೆಯಲ್ಲಿ ನಲವತ್ತೆಂಟು ಬಾರಿ ಈಕೆಯ ಒಡವೆಗಳ ಕಳ್ಳತನ ನಡೆದರೂ ಕುಗ್ಗಲಿಲ್ಲ.ತಲೆ ಕೆಡಸಿಕೊಳ್ಳಲಿಲ್ಲ.ಕೊನೆಗೆ ಕಳ್ಳ ಸಿಕ್ಕಿ ಜೈಲು ಪಾಲಾದ ಹದಿನೇಳು ವರ್ಷಗಳ ನಂತರ ಆಭರಣವನ್ನ ಕೋರ್ಟನಿಂದ ವಾಪಾಸು ಪಡೆದಾಕೆ ರೇಖಾ.
ಹಿಂದಿ ಚಲನ ಚಿತ್ರರಂಗದ ನಟರು,ನಿರ್ದೇಶಕರ ಕಥೆಗಳೆಂದರೆ ಅವು ಬಹುತೇಕ ಹೂ- ದುಂಬಿಗಳ ಕಥೆಗಳೇ! ತೆರೆಯ ಮೇಲೆ ಸಾಮಾಜಿಕ ಮೌಲ್ಯಗಳನ್ನ ವಿಜೃಂಭಿಸುವ ಇವರ ವೈಯಕ್ತಿಕ ಕಹಾನಿಗಳು ಅದಕ್ಕೆ ತದ್ವಿರುದ್ದ. ರೇಖಾಳ ಬದುಕಿನೊಳಗೆ ಬಂದವರೂ ಪ್ರೇಮಕ್ಕಿಂತಲೂ ಕಾಮದ್ದೇ ದರ್ಬಾರು ನಡೆಸಿದವರು. ಮೀನಾಕುಮಾರಿಯ ನಂತರ ಎದ್ದು ಕಾಣುವ ದೊಡ್ಡ ಕಲಾ ಹೆಸರೇ ರೇಖಾಳದ್ದು.ವಿಚಿತ್ರ ನೋಡಿ ಮೀನಾಕುಮಾರಿಯೇ ರೇಖಾಳ ಬೆಸ್ಟ ಪ್ರೆಂಡ್.
ರೇಖಾ ಅಪ್ರತಿಮ ಡ್ರೆಸ್ ಸೆನ್ಸನ ಸುಂದರಿ. ಬಹುದೊಡ್ಡ ಸಹನಾಶೀಲೆ,ಕಣ್ಣೀರು ಉಕ್ಕಿದರೂ ಏಕಾಂತಗಳಲ್ಲಿ,ಅಂತರಂಗದ ಲೋಕದಲ್ಲಿ ಅವನ್ನ ದಾಟಿ ಮತ್ತೆ ನಗುತ್ತಾ ಹೊರ ಬರುತಿದ್ದಾಕೆ.ರೇಖಾಳನ್ನ ಬೆನ್ನಟ್ಟಿದ್ದು ಬಗೆ ಬಗೆಯ ಜನ.ಆಕೆ ಉಟ್ಟ ಸೀರೆಯ ಚುಂಗು ಮುಟ್ಟಿದರೆ ಸಾಕು ನನ್ನ ಜೀವನವೇ ಸಾರ್ಥಕ ಎಂದು ಹೇಳುವ ಅಭಿಮಾನಿಗಳು, “ನೀನು ಸಿಗದಿದ್ದರೆ ನಾನು ಸತ್ತೇ ಹೋಗುತ್ತೇನೆ” ಎನ್ನುವ ಪಾಗಲ್ ಪ್ರೇಮಿಗಳು. ರೇಖಾ ಮಾತ್ರ ಸುಲಭಕ್ಕೆ ಒಲಿವವಳಲ್ಲ ‘ಯಾರಿಗಾಗಿ ಯಾರೂ ಸಾಯುವುದಿಲ್ಲ ಇಂಥ ಧಮಕಿಗಳಿಗೆ ನಾನು ಹೆದರುವುದಿಲ್ಲ’.ಔಟ್ ಎಂದು ನೂಕಿ ಬಿಡುತಿದ್ದಳು.
ರೇಖಾಳ ಕಥನವೆಂದರೆ ಅದು ವಿಕ್ಷಿಪ್ತ ಪ್ರೇಮಗಳ ಕಹಾನಿ! ಪ್ರೀತಿಗಾಗಿ ಹಂಬಲಿಸುವ ಕೃಷ್ಣ ಸಖಿಯರನ್ನ ನೆನಪಿಗೆ ತರುವಂತದ್ದು. ಬಾಲ್ಯದಿಂದಲೂ ಪ್ರೀತಿಯನ್ನ,ವಾತ್ಸಲ್ಯವನ್ನ ಬಿನ್ನಟ್ಟಿದ ರೇಖಾಗೆ ಸಿಕ್ಕದ್ದು ಬೇಜಾವಬ್ದಾರಿ ಅಪ್ಪ.ಆತ ಸದಾ ಇನ್ನೊಬ್ಬಳೊಂದಿಗೆ ಅಲೆಯುವುದನ್ನೇ ಕಾಯಕ ಮಾಡಿಕೊಂಡಾತ.ಇದಕ್ಕೂ ಮುಖ್ಯವಾಗಿ ಆಕೆಯ ತಾಯಿ ಪುಷ್ಟವಲ್ಲಿ.ಆಕೆಗೆ ಮಗಳ ಮೈಯಲ್ಲಿ ಕಂಡದ್ದು ವಾತ್ಸಲ್ಯವಲ್ಲ ಹಣದ ಥೈಲಿ!.ಬೆನ್ನಿಗಂಟಿದ ಇಂತಹ ಕೆಟ್ಟ ಚರಿತ್ರೆಯಿಂದಲೇ ರೇಖಾ ಇನ್ನೊಬ್ಬರಿಂದ ಅನ್ನಿಸಿಕೊಳ್ಳುವ ಪ್ರಮೇಯಕ್ಕೆ ಸಿಲುಕಿದ್ದು ಇಂಟ್ರ್ಯೂ ಗಳೆಂದರೆ ದೂರ ದೂರ ಉಳಿದ್ದದ್ದು.
ವಿನೋದ್ ಮೆಹ್ರನಾ ನಿವೇದನೆಗೆ ಸೋತು ಪತ್ನಿಯಾಗಿ ಆತನ ತಾಯಿಗೆ ಸೊಸೆಯಾಗಿ ಹೊಸಿಲು ದಾಟಿ ಬಂದ ರೇಖಾಳನ್ನ ಕಂಡದ್ದೇ ಆತನ ತಾಯಿ ‘ಒಂದೇ ಒಂದು ಹೆಜ್ಜೆ ನನ್ನ ಮನೆಯ ಹೊಸಿಲು ದಾಟಿದರೆ ರಕ್ತ ಪಾತ,ಇಲ್ಲಿಂದ ಜಾಗ ಖಾಲಿ ಮಾಡದಿದ್ದರೆ ಏನ್ ಮಾಡ್ತಿನಿ ನೋಡ್ತಾ ಇರು… ಎಂದು ರೇಖಾಳಿಗೆ ಗದರಿಸುತ್ತಲೇ.. ಏನಾಗುತ್ತಿದೆ ಎನ್ನೋದರೊಳಗೇ ಚಪ್ಪಲಿ ಹಿಡಿದು ರೇಖಾಳ ಕೆನ್ನೆ ಥರಗುಟ್ಟುವಂತೆ ಬಾರಿಸೇ ಬಿಟ್ಟಳು!. ಯಾವ ಕೆನ್ನೆಮುಟ್ಟಲು ಕೋಟ್ಯಾಂತರ ಜನ ಕನಸು ಕಾಣುತ್ತಿದ್ದರೊ…! ಅಂಥ ಕೆನ್ನೆಯೇ ಚಪ್ಪಲಿ ಏಟಿಗೆ ಸಿಕ್ಕಿ ತತ್ತರಿಸಿ ಹೋಗಿತ್ತು!.
ತೆಳುವಾದ ಸುಳ್ಳು ಅಫೇರ್‍ಗಳಿಗೆ ಸಿಕ್ಕು ಬೇಸತ್ತ ರೇಖಾಳ ಮನಸ್ಸು ನಿಜದ ಪ್ರೀತಿ ವಾತ್ಸಲ್ಯಕ್ಕೆ ಹಂಬಲಿಸುತಿತ್ತು. ಆದರೆ ಆಕೆಗೆ ದೇಹ ರುಚಿಯ ಕಾಮಾಂಧರು ಸಿಕ್ಕರೇ ಹೊರತು ಹೃದಯ ಬಳಸುವ ಜನ ಸಿಗಲೇ ಇಲ್ಲ.ಇದ್ದುದರಲ್ಲೇ ಗಾಯಗೊಂಡ ಆಕೆಗೆ ಹಿತವೆನಿಸಿದವನೇ ಅಮಿತಾಬ್ ಬಚ್ಚನ್! ಆತನೂ ‘ರೇಖಾಳನ್ನ ಪ್ರೀತಿಸುತ್ತಿದ್ದ ಅದೇ ಹೊತ್ತಿಗೆ ಜಯಾಳನ್ನ ಪೂಜಿಸುತ್ತಿದ್ದ’
” ದೇಖಾ ಏಕ್ ಖ್ವಾಬ್ ತೋ ಯೇ ಸಿಲ್ ಸಿಲೇ ಹುವೇ
ದೂರ್ ತಕ್ ಲಿಗಾ ಹುವೇ ಗುಲ್ ಖಿಲೇ ಹುವೇ”
ರೇಖಾಳ ಹಿಂದಿ ಸಿನಿ ಜಗತ್ತಿನ ಅಪ್ಪಟ ಅಭಿನೇತ್ರಿ. ಸವಾಲುಗಳ ನಡುವೆ ಏಳು ಬೀಳುಗಳನ್ನ ಸೀಳಿ ಜನಪ್ರೀತಿಯೊಳಗೆ ನೆಲೆಗೊಂಡವಳು. ಸ್ಟೀರಿಯೋ ಟೈಪ್ ಪಾತ್ರಗಳನ್ನ ಬಿಟ್ಟು ಸವಾಲುಗಳ ವೈವಿದ್ಯಮಯ ಪಾತ್ರಗಳ ಜೀವಿಸಿದಳು. ಉಮ್ರಾವೋ ಜಾನ್,ಉತ್ಸವ್ ತರದ ಸಿನಿಮಾ ಜೊತೆಗೆ ಲಜ್ಜಾ,ಕಲಿಯುಗ್,ಕೂಬ್ ಸೂರತ್,ಅಗರ್ ತುಮ್ ನಾ ಹೋತೆ,ಇಜಾಹತ್,ಸಿಲ್ ಸಿಲಾ,ಕಿಲಾಡಿ ಯೋಂಕಾ
ಕಿಲಾಡಿ,ಸುಹಾಗ್,ಆಸ್ತಾ,ಮುಕದ್ದರ್ ಕಾ ಸಿಂಕಂದರ್, ಮೊದಲಾದ 180 ಕ್ಕೂ ಹೆಚ್ಚು ಸಿನಮಾಗಳು ಎರಡು ಸಾವಿರದ ಹದಿನೈದರ ತನಕ ಬಂದಿವೆ.
ಸದಾ ನಟನೆಯನ್ನ ಆರಾಧಿಸುತ್ತಿದ್ದ ರೇಖಾ ತನಗೆ ಸಿಕ್ಕ ಪ್ರತಿ ಪಾತ್ರವನ್ನೂ ಹೊಕ್ಕು ಜೀವಿಸಿದಾಕೆ. ಆಕೆಯ ನಟನೆಗೆ ಪದ್ಮಶ್ರೀ ಪ್ರಶಸ್ತಿ ಜೊತೆಗೆ ಫಿಲಿಂ ಪೇರ್ ಪ್ರಶಸ್ತಿ, ಯಶ್ ಚೋಪ್ರಾ ಪ್ರಶಸ್ತಿ, ನ್ಯಾಷನಲ್ ಪಿಲಿಂ ಫೇರ್ ಅವಾರ್ಡ,ಸ್ಟಾರ್ ಸ್ಕ್ರೀನ್ ಅವಾರ್ಡ,ಜೀ ಸಿನಿ ಲೈಪ್ ಅಚೀವ್ ಮೆಂಟ್ ಅವಾರ್ಡ, ಸೋನಿ ಗೋಲ್ಡನ್ ಅವಾರ್ಡಗಳೂ ಬಂದಿವೆ.
ರೇಖಾ ಸಿನಿ ಬದುಕಿನಾಚೆಗಿನ ಕಥನದೊಳಗೆ ಬಹುತ್ವದ ಗುಣವಿದೆ.ಬಡತನದ ಛಲವಿದೆ.ಸೋಲನ್ನ ಮೆಟ್ಟಿ ನಿಲ್ಲುವ ಬಡವರ,ಮಧ್ಯಮ ವರ್ಗಗಳ ಗೆಲುವಿನ ಸೊಗಸರೇಖಾ