ಹೊಸ ಪೀಳಿಗೆಯ ಉದ್ಯಮಿಗಳಿಗೆ ಅಗತ್ಯ ನೆರವು: ಸಚಿವ ಎಂ.ಟಿ.ಬಿ. ನಾಗರಾಜು

Share

ಬೆಂಗಳೂರು,ಮಾ,21: ಹೊಸ ಪೀಳಿಗೆಯ ಉದ್ಯಮಶೀಲರಿಗೆ ಅವಶ್ಯ ನೆರವು ಮತ್ತು ಸಹಾಯ ಹಸ್ತ ನೀಡಲು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆ ಇಲಾಖೆ ನಿರ್ದಿಷ್ಟ ಕಾರ್ಯಕ್ರಮಗಳನ್ನು ರೂಪಿಸಿದ್ದು, ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂ.ಟಿ.ಬಿ. ನಾಗರಾಜು ತಿಳಿಸಿದ್ದಾರೆ.

ಭಾರತೀಯ ಮಹಿಳಾ ವಾಣಿಜ್ಯೋದ್ಯಮ ಮಹಾ ಮಂಡಳಿ – ಸಿಡಬ್ಲೂಸಿಸಿಐ ಬೆಂಗಳೂರಿನಲ್ಲಿರುವ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಏರ್ಪಡಿಸಿರುವ ‘ಗ್ಲೋಬಲ್ ಸ್ಪಿನ್ ಟ್ರೇಡ್ ಕಾನ್‌ಕ್ಲೇವ್-2022’ ನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.

ಏಷ್ಯಾದ ಅತೀ ದೊಡ್ಡ ಕೈಗಾರಿಕಾ ಪ್ರದೇಶವಾಗಿರುವ ಪೀಣ್ಯ ಕೈಗಾರಿಕಾ ಪ್ರದೇಶದ ಮೂಲ ಸೌಲಭ್ಯ ಅಭಿವೃದ್ಧಿಗೆ100 ಕೋಟಿ ರೂಪಾಯಿ ಮೀಸಲಿರಿಸಿ ಯೋಜನೆ ರೂಪಿಸಲಾಗುತ್ತಿದೆ ಎಂದು ಸಚಿವ ಎಂ.ಟಿ.ಬಿ. ನಾಗರಾಜು ತಿಳಿಸಿದರು.

ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಉದ್ದಿಮೆಯನ್ನು ಸ್ಥಾಪಿಸಿ ಯಶಸ್ವಿಯಾಗಬೇಕಾದರೆ, ಉದ್ಯಮ ಶೀಲತಾ ಕೌಶಲ್ಯ ಸಾಮರ್ಥ್ಯ, ಸಾಲ ಸೌಲಭ್ಯ, ತಂತ್ರಜ್ಞಾನ ಅಳವಡಿಕೆ, ಗುಣಮಟ್ಟದ ಉತ್ಪಾದನೆ, ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಪೈಪೋಟಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಯಶಸ್ಸು ಸಾಧಿಸಲು ಉದ್ಯಮಶೀಲರು ಹೊಸ ಆಲೋಚನೆ ಮತ್ತು ಆವಿಷ್ಕಾರಗಳಿಗೆ ತಮ್ಮನ್ನು ತೆರೆದುಕೊಳ್ಳುವುದು ಅವಿನಾರ್ಯ ಎಂದು ಸಚಿವ ಎಂ.ಟಿ.ಬಿ. ನಾಗರಾಜು ಕಿವಿ ಮಾತು ಹೇಳಿದರು.

ಸಮಾರಂಭದಲ್ಲಿ ರಾಷ್ಟ್ರೀಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂಸ್ಥೆಯ ಮಹಾ ನಿರ್ದೇಶಕ ಡಾ. ಗ್ಲೋರಿಸ್ವರೂಪ ಸುಂಚು, ಕೇಂದ್ರ ರೇಷ್ಮೆ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಜಿತ್ ಓಕಂಡಿಯಾರ್, ಕೇಂದ್ರ ಎಂ.ಎಸ್.ಎಂ.ಇ. ಸಚಿವಾಲಯದ ಅಧೀನ ಕಾರ್ಯದರ್ಶಿ ಭಾಸ್ಕರ್ ಕಾಲರ, ಸಿಡ್ಲೂಸಿಸಿಐ ಅಧ್ಯಕ್ಷೆ ಐಶ್ವರ್ಯ ನಂದ್ಯಪ್ಪ ಉಪಸ್ಥಿತರಿದ್ದರು.

Girl in a jacket
error: Content is protected !!